ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೪ ಶ್ರೀಮದ್ಭಾಗವತವು [ಅಧ್ಯಾ. ೬೩. ನಿದ್ದನು.ಅವನಿಗೆ ಲೋಕದಲ್ಲಿ ತನಗೆ ಸಮಾನರರಿಲ್ಲವೆಂಬ ಗರ್ವವಿತ್ತು. ಇದ ಲ್ಲದೆ ಅವನ ಸಂಗಡಿಗರಾದ ಕೆಲವುಮಂದಿ ಬಾಲಕರು, ಅವನನ್ನು ನೋಡಿ ಯಾವಾಗಲೂ ಮುಖಸ್ತುತಿಮಾಡುತ್ತಾ ನೀನೇ ವಾಸುದೇವನು!ಿಕಾ ಧಿಪತಿಯಾದ ಭಗವಂತನೇ ನೀನಾಗಿ ಅವತರಿಸಿರುವೆ!” ಎಂದು ಹೇಳುತ್ತಿ ದರು.ಇದನ್ನು ಕೇಳಿ ಅವನಿಗೆ ಅಹಂಭಾವವು ಮಿತಿಮೀರಿಹೋಯಿತು.ತಾನೇ ಸಾಕ್ಷಾತ್ವಿಷ್ಣುವೆಂದು ತಿಳಿದುಬಿಟ್ಟನು. ಹೀಗೆ ಗರ್ವೋದ್ರಿಕ್ತನಾದ ಆ ಮೂಢನು, ಅಪ್ರಮೇಯ ಪ್ರಭಾವನಾದ ಕೃಷ್ಣನಿಗೆ ತನ್ನ ದೂತನೊಬ್ಬನ ಮೂಲಕವಾಗಿ, “ ಕೃಷ್ಣಾ! ಬಾಲಕರು ಮಕ್ಕಳಾಟಿಕೆಯಲ್ಲಿ ತಮ್ಮ ಯೇ ಒಬ್ಬನನ್ನು ರಾಜನನ್ನಾಗಿಯೂ, ಮತ್ತೊಬ್ಬನನ್ನು ಮಂತ್ರಿಯನ್ನಾಗಿ ಯ ಏರ್ಪಡಿಸುವಂತೆ, ದ್ವಾರಕೆಯಲ್ಲಿ ನಿನಗೆ ಹಿತರಾದ ಕೆಲವು ಹುಡು ಗರು, ಅಜ್ಞನಾದ ನಿನ್ನನ್ನು ರಾಜನೆಂದು ಕರೆಯುತ್ತಿರುವರೇ ಹೊರತು, ಸೀ ನು ರಾಜಪದವಿಗೆ ಎಂದಿಗೂ ಅರ್ಹನಲ್ಲ” ಎಂಬೀ ಮಾತುಗಳನ್ನು ಹೇಳಿ ಕಳುಹಿಸಿದನು. ಅದರಂತೆ ಆತನು ದ್ವಾರಕೆಗೆ ಬಂದು ಸಭಾಮಧ್ಯದಲ್ಲಿದೆ ಕೃಷ್ಣನನ್ನು ನೋಡಿ, ತಾನು ತಂದಿದ್ದ ರಾಜಸಂದೇಶವನ್ನು ತಿಳಿಸುತ್ತಾ, (ಕೃಷ್ಣಾ! ಲೋಕಾನುಗ್ರಹಾರವಾಗಿ ಈ ಲೋಕದಲ್ಲಿ ಅವತರಿಸಿರತಕ್ಕ ವಾಸುದೇವನು ನಾನುಹೊರತು ಬೇರೊಬ್ಬರಿಲ್ಲ. ಆದುದರಿಂದ ಸುಳ್ಳು ಸುಳ್ಳಾಗಿ ನೀನು ಆರೋಪಿಸಿಕೊಂಡಿರುವ ವಾಸುದೇವ ಶಬ್ದವನ್ನು ಈ ಗಲೇ ತೆಗೆದು ಬಿಡಬೇಕು. ಇದಲ್ಲದೆ ನೀನು ಮೂಢತ್ವದಿಂದ ನನಗೆ ಸಲ್ಲ ತಕ್ಕೆ ಕೆಲವು ಅಸಾಧಾರಣಚಿಹ್ನಗಳನ್ನೂ ಧರಿಸಿರುವೆ. ಅವುಗಳನ್ನೂ ತೆ ಗೆದುಹಾಕಿ ಈಗಲೇ ನನ್ನಲ್ಲಿ ಶರಣಾಗತನಾಗಬೇಕು ! ಇಲ್ಲವಾದರೆ ನನ್ನೊಡನೆ ಯುದ್ಧಕ್ಕೆ ಸಿದ್ಧನಾಗು” ಎಂದು ನಮ್ಮ ರಾಜನು ನಿನಗೆ ಹೇಳಿ ಕಳುಹಿಸಿರುವನು” ಎಂದನು. ಅಲ್ಪಬುದ್ಧಿಯುಳ್ಳ ಪಂಡೂಕನು ಹೆಮ್ಮೆ ಯಿಂದ ಹೇಳಿ ಕಳುಹಿಸಿದ ಈ ಮಾತುಗಳನ್ನು ಕೇಳಿ, ಆ ಸಭೆಯಲ್ಲಿದೆ ಉಗ್ರಸೇನಾದಿಗಳೆಲ್ಲರೂ ಅವನ ಹುಚ್ಚು ಮಾತುಗಳಿಗಾಗಿ ಗೊಳ್ಳೆಂದು ನ ಕ್ಕು ಸುಮ್ಮನಾದರು. ಆಗ ಕೃಷ್ಣನು ಅದೇ ದೂತನ ಮೂಲಕವಾಗಿ ಪೌಂಡ್ರಕನನ್ನು ಕುರಿತು, « ಓ ಮೂಢಾ ! ನೀನು ಯಾವ ನಿನ್ನ ಕಥ