ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೭ ಅಧ್ಯಾ. ೬೩.] ದಶಮಸ್ಕಂಧವು. ಸಾರೂಪ್ಯವನ್ನೇ ಹೊಂದಿದನು. ಇತ್ತಲಾಗಿ ಕಾಶೀಪುರದ ಜನರೆಲ್ಲರೂ ಅರ ಮನೆಯ ಬಾಗಿಲಲ್ಲಿ ಕುಂಡಲಾಲಂಕೃತವಾಗಿ ಬಿದ್ದಿದ್ದ ತಲೆಯನ್ನು ಕಂಡು, ಆಶ್ಚ ನ್ಯದಿಂದ 41 ಏದು ! ಇದು ಯಾರ ತಲೆಯಾಗಿರಬಹುದು ?” ಎಂದು ಸಂದೇಹಿಸುತ್ತಿದ್ದರು. ಕೊನೆಗೆ ಅದು ತಮ್ಮ ಪ್ರಭುವಾದ ಕಾಶೀರಾಜನ ತಿರಸ್ಸೆಂಬುದನ್ನು ತಿಳಿದು ದುಃಖದಿಂದ ರೋದಿಸತೊಡಗಿದರು. ಕಾತೀ ರಾಜನ ಹೆಂಡಿರುಮಕ್ಕಳೂ, ಬಂಧುಗಳೂ, ಪುರವಾಸಿಗಳೂ (ಹಾ ನಾಥಾ ! ನಮಗಿನ್ನೇನು ಗತಿ !” ಎಂದು ದೈನ್ಯದಿಂದ ಮೊರೆಯಿಡುತಿದ್ದರು. ಆಮೇಲೆ ಆ ರಾಜನ ಮಗನಾದ ಸುದಕ್ಷಿಣನೆಂಬವನು, ತನ್ನ ತಂದೆಗೆ ಮಾಡಬೇಕಾದ ಆಪರಸಂಸ್ಕಾರಗಳೆಲ್ಲವನ್ನೂ ಕ್ರಮವಾಗಿ ನಡೆಸಿ,ತನ್ನ ತಂದೆಯನ್ನು ಕೊಂದ ಕೃಷ್ಣನಮೇಲೆ ಹಗೆ ತೀರಿಸಿಕೊಂಡೇ ತನ್ನ ತಂದೆಯ ಋಣವನ್ನು ತೀರಿಸಬೇಕೆಂದು ನಿಶ್ಚಯಿಸಿ, ತನ್ನ ಕುಲಪುರೋಹಿತನನ್ನು ಮುಂದಿಟ್ಟು ಕೊಂಡು, ಅವನು ಹೇಳಿದ ವಿಧಿಯಿಂದ ರುದ್ರನನ್ನು ಕುರಿತು ತಪಸ್ಸು ಮಾಡುವುದಕ್ಕಾಗಿ ಹೊರಟನು. ದೃಢವಾದ ಧ್ಯಾನಯೋಗದಿಂದ ರುದ್ರ ನನ್ನಾ ರಾಧಿಸಿದಮೇಲೆ, ರುದ್ರನು ಅವನ ಭಕ್ತಿಗೆ ಮೆಚ್ಚಿ, ಅವನಿಗೆ ಪ್ರತ್ಯಕ್ಷ ನಾದನು. ಆಗ ಸುದಕ್ಷಿಣನು ತನ್ನ ಪಿತೃಪ್ರತಿಯಾದ ಕೃಷ್ಣನನ್ನು ಕೊಲ್ಲು ವುದಕ್ಕೆ ಉಪಾಯವನ್ನು ತೋರಿಸಿಕೊಡಬೇಕೆಂದು ಕೇಳಲು, ರುದ್ರನು ಅವನಲ್ಲಿ ಪ್ರಸನ್ನನಾಗಿ ಹೀಗೆಂದು ಹೇಳುವನು. « ಓ ರಾಜಕುಮಾರಾ !ನೀನು ಈಗಲೇ ಉತ್ತಮರಾದ ಬ್ರಾಹ್ಮಣರ ನ್ನು ಋತ್ವಿಕ್ಕುಗಳನ್ನಾಗಿಟ್ಟು, ಆಭಿಚಾರವಿಧಿಯಿಂದ (ಶೂನ್ಯ ಅಥವಾ ಮಾ ಟದಿಂದ) ದಕ್ಷಿಣಾಗ್ನಿ ಯನ್ನು ಆರಾಧಿಸು! ಆಗ ಆ ಆಗ್ನಿ ಯು, ಪ್ರಮಥಗಣಗ ಳೊಡನೆ ಭೂತಾಕಾರವಾಗಿ ಹೊರಟು, ನಿನ್ನ ವೈರಿಯನ್ನು ಕೊಲ್ಲುವುದು. ಆದರೆ ನೀನು ಈ ಅಭಿಚಾರವನ್ನು ಬ್ರಾಹ್ಮಣಕುಲದಮೇಲೆ ಪ್ರಯೋಗಿಸಿ ದರೆ ಮಾತ್ರ, ಅದು ತಾನೇ ಹತವಾಗುವುದು” ಎಂದನು. ದುರ್ಬುದ್ಧಿಯುಳ್ಳ ಸುದಕ್ಖಣನು, ಆದರಂತೆಯೇ ಅಭಿಚಾರಹೋಮವನ್ನು ನಡೆಸಿದೊಡನೆ, ಅಗ್ನಿ ಕು, ನ ನ .. S+ ಓ : ಭಯಂಕರವಾದ ಭೂತಾಕಾರದಿಂದ ವೆ..? ದ್ವಿತು. 4 ೧ : ಫರಸವನ್ನು ಕೇಳಬೇಕೆ? ಉರಿಯುವ ಬೆಂಕಿ