ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಣ ಒ3. ೨೨೧೮ ಶ್ರೀಮದ್ಭಾಗವತವು [ಅಧ್ಯಾ, 44, ಯಂತೆ ಕೆಂಪಾದ ತಲೆಮೀಸೆಗಳು! ಕೆಂಡವನ್ನು ಕಾರುವಂತಿರುವ ಕಣ್ಣುಗ ಳು ! ಭಯಂಕರವಾದ ಕೋರೆದಾಡೆಗಳು ! ಹುಬ್ಬುಗಂಟುಗಳಿಂದ ಲೂ,ತೀಕ್ಷವಾದ ಹಲ್ಲುಗಳಿಂದಲೂ ಘೋರವಾದ ಮೋರೆ! ಕಟಬಾಯಿಗೆ ಳನ್ನು ನಕ್ಕುತ್ತಿರುವ ನೀಡಿದ ನಾಲಗೆ! ಮೈಮೇಲೆ ಬಟ್ಟೆಯಿಲ್ಲದೆ ಸಿರ್ವಾಣ ವಾದ ಆಕೃತಿ! ಇಂತಹ ಘೋರಾಕಾರವುಳ್ಳ ಭೂತವು, ಕೈಯಲ್ಲಿ ಜ್ವಲಿಸು ತಿರುವ ತ್ರಿಶೂಲವನ್ನು ಝಳಿಪಿಸುತ್ತ, ಅನೇಕ ಪ್ರಮಥಗಣಗಳೊಡಗೂಡಿ, ತಾಲಪ್ರಮಾಣವುಳ್ಳ ಕಾಲುಗಳಿಂದ ಭೂಮಿಯು ನಡುಗುವಂತೆ ಹೆಜ್ಜೆಗ ಇನ್ನಿಡುತ್ತ, ಕೃಷ್ಣನನ್ನು ಸಂಹರಿಸುವುದಕ್ಕಾಗಿ ದ್ವಾರಕೆಯಕಡೆಗೆ ಹೊರ ಟಿತು. ಅದು ಜ್ವಾಲೆಯಿಂದ ದಿಕ್ಕುಗಳೆಲ್ಲವೂ ದಗ್ಧವಾಗುವಂತಿದ್ದುವು. ಈ ಆಭಿಚಾರಾಗ್ನಿ ಯನ್ನು ನೋಡಿ ದ್ವಾರಕಾವಾಸಿಗಳೆಲ್ಲರೂ ಕಾಡುಗಿಚ್ಚು ಕಂಡ ಮೃಗಗಳಂತೆ ಭಯದಿಂದ ನಡುಗುತ್ತ, ನಾ ನಾಕಡೆಗೆ ಚದರಿ ಓಡುತ್ತಿದ್ದರು. ಈ ಸಮಯದಲ್ಲಿ ಕೃಷ್ಣನು ರಾಜಸಭೆಯಲ್ಲಿ ವಿನೋದ ದಿಂದ ಪಗಡೆಯಾಡುತಿದ್ದನು. ಆಗ ಪುರನಿವಾಸಿಗಳಲ್ಲಿ ಕೆಲವರು, ಭಯ ಹಿಂದೋಡಿ ಬಂದು “ಹಾ ! ಕೃಷ್ಣಾ: ಲೋಕೇಶ್ವರಾ ! ನಮ್ಮ ಪಟ್ಟಣವು ಭಯಂಕರವಾದ ಅಗ್ನಿ ಯಿಂದ ದಗ್ಧವಾಗುತ್ತಿರುವುದು, ನಮ್ಮನ್ನು ರಕ್ಷಿಸು! ರಕ್ಷಿಸು!” ಎಂದು ಮೊರೆಯಿಟ್ಟರು. ಆಗ ಕೃಷ್ಣನು ಅವರ ಭಯವನ್ನು ನೋಡಿ ಮನಸ್ಸಿನಲ್ಲಿ ನಗುತ್ತ (ಎಲೈ ಭಯಪಡಬೇಡಿರಿ! ನಿಮಗೆ ಅಪಾಯ ವಿಲ್ಲದಂತೆ ನಾನು ರಕ್ಷಿಸುವೆನು” ಎಂದನು. ಸತ್ವಸಾಕ್ಷಿಯಾದ ಕೃಷ್ಣನ ಆದು ರುದ್ರಸಂಬಂಧಿಯಾದ ಶೂನ್ಯದೇವತೆ (ಕೃತ್ಯ) ಯೆಂಬುದನ್ನು ತಿಳಿದು, ಅದನ್ನ ಡಗಿಸುವುದಕ್ಕಾಗಿ ಪಕ್ಕದಲ್ಲಿದ್ದ ತನ್ನ ಸುದರ್ಶನಚಕ್ರಕ್ಕೆ ಆಜ್ಞಾ ಪಿಸಿದನು. ಕೋಟಿಸೂಧ್ಯಪ್ರಕಾಶಮಾನವಾಗಿ, ಪ್ರಳಯಾಗ್ನಿ ಯಂತೆ ಜ್ವಲಿ ಸುತ್ತಿದ್ದ ಆ ಚಕ್ರವು, ತನ್ನ ತೇಜಸ್ಸಿನಿಂದ ಭೂಮ್ಯಾಕಾಶಗಳನ್ನೂ , ದಿಕ್ಕು ಗಳನ್ನೂ ನುಂಗುವಂತೆ ಹೊರಟು, ಆ ಆಭಿಚಾರಾಗ್ನಿ ಯನ್ನು ಕ್ಷಣಮಾತ್ರ ದಲ್ಲಿ ನಿಗ್ರಹಿಸಿಬಿಟ್ಟಿತು, ಚಕ್ರಾಯಧದ ತೇಜಸ್ಸಿನಿಂದ ಪ್ರತಿಹತವಾದ. ಆ ಆಗ್ನಿ ಯು, ಮುಖಮುರಿದಂತೆ ಹಿಂತಿರುಗಿ, ಕಾಶೀಪುರಕ್ಕೆ ಹೋಗಿ, ಅಲ್ಲಿ ಈ ಕೃತ್ಯವನ್ನು ನಡೆಸಿದ ಸುದಕ್ಷಣವನ್ನೂ , ಅಲ್ಲಿನ ಋತ್ವಿಕ್ಕುಗಳನ್ನೂ,