ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೭.] ದಶಮಸ್ಕಂಧವು. ೨೨೧೯ ತಾನೇ ದಹಿಸಿಬಿಟ್ಟಿತು.ಭಗವಂತನ ಚಕ್ರಾಯುಧವು, ಆಗಲೂ ಆ ಅಗ್ನಿ ಯನ್ನು ಬಿಡದೆ ಬೆನ್ನಟ್ಟುತ್ತ ಕಾಶಿಗೆ ಹೋಗಿ, ಅಲ್ಲಿನ ಅವ್ಯಲೆಗಳು, ಗೋಪುರಗಳು,ಸ ಭಾಮಂಟಪಗಳು, ಮನೆಗಳು, ಆನೆಕುದುರೆಲಾಯಗಳು, ಮಂದೆಗಳು, ಬೊಕ್ಕಸಗಳು, ರಥಶಾಲೆ, ಅನ್ನ ಸತ್ರ ಮುಂತಾದುವುಗಳೆಲ್ಲವನ್ನೂ ದಹಿಸಿಬಿಟ್ಟಿತು. ಹೀಗೆ ಭಗವಂತನ ಸುದರ್ಶನಚಕ್ರವು ಕಾಶೀಪುರವನ್ನು ಸಂಪೂರ್ಣವಾಗಿ ದಹಿಸಿದಮೇಲೆ, ಹಿಂತಿರುಗಿ ಕೃಷ್ಣನಬಳಿಗೆ ಬಂದು, ಅಲ್ಲಿ ಮೊದಲಿನಂತೆ ಶಾಂತವಾಗಿ ನೆಲೆಸಿತ. ಓ ! ಪರೀಕ್ಷಿಬಾಜಾ! ಪುಣ್ಯಶ್ಲೋಕ ನಾದ ಕೃಷ್ಣನ ಈ ಚರಿತ್ರವನ್ನು ಯಾವನು ಭಕ್ತಿಯಿಂದ ಕೇಳುವನೋ, ಯಾವನು ಶ್ರದ್ಧೆಯಿಂದ ಮತ್ತೊಬ್ಬರಿಗೆ ಹೇಳುವನೋ, ಅವನು ಸಮಸ್ಯ ಪಾಪಗಳಿಂದಲೂ ವಿಮುಕ್ತನಾಗುವನು. ಇದು ಅರುವತ್ತಾರನೆಯ ಅಧ್ಯಾಯವು. -w+ ಬಲರಾಮನು ದ್ವಿವಿದನೆಂಬ ವಾನರವನ್ನು ಸಂಹರಿಸಿದುದು.+w ಪರೀಕ್ಷಿದಾಜನು ಶುಕಮುನಿಯನ್ನು ಕುರಿತು, “ ಓ ಮಹರ್ಷಿ : ಅಪ್ರಮೇಯಪ್ರಭಾವವುಳ್ಳ ಬಲರಾಮನು, ಇನ್ನೂ ಯಾವಯಾವ ಅದ್ಭುತ ಕಾಕ್ಯಗಳನ್ನು ನಡೆಸಿರುವನೋ ಅವೆಲ್ಲವನ್ನೂ ಸಂಪೂರ್ಣವಾಗಿ ನನಗೆ ತಿಳಿಸ ಬೇಕು” ಎಂದು ಕೇಳಲು, ಶುಕಮುನಿಯೂ, (ಓ ! ರಾಜಾ ! ಕೇಳು ! ನರ ಕಾಸುರನಿಗೆ ಮಿತ್ರನಾದ ಜ್ವವಿದನೆಂಬ ವಾನರನೊಬ್ಬನಿದ್ದನು. ಆತನು ಸುಗ್ರೀವನ ಮಂತ್ರಿಗಳಲ್ಲಿ ಒಬ್ಬನು. ಮೈಂದನಿಗೆ ತಮ್ಮನು. ಆತನು ಬಹಳ ವೀರವುಳ್ಳವನು. ಈ ಜ್ವವಿದನೆಂಬ ವಾನರನು, ಇು ಸ್ನೇಹಿತ ನಾದ ನರಕಾಸುರನಿಗೆ ಕೃಷ್ಣನಿಂದುಂಟಾದ ಮರಣವನ್ನು ಕೇಳಿದಮೇಲೆ, ಆ ರಾಕ್ಷಸನಲ್ಲಿ ತನಗಿದ್ದ ಸ್ನೇಹಕ್ಕೆ ಫಲರೂಪವಾಗಿ, ಅವನಂತೆಯೇ ಜನಗಳಿಗೆ ತೊಂದರೆಯನ್ನು ಕೊಡುತಿದ್ದನು. ಪುರಗಳನ್ನೂ, ಗ್ರಾಮಗಳ ನ್ಯೂ, ಅಲ್ಲಲ್ಲಿ ಕಾಣುವ ಬೇಡರ ಹಳ್ಳಿಗಳನ್ನೂ ಪ್ರವೇಶಿಸಿ, ಮನೆಗಳಿಗೆ ಬೆಂಕಿ ಯಿಟ್ಟು, ಅನೇಕಸಲಗಳನ್ನು ನಾಶಮಾಡುತಿದ್ದನು. ಅಲ್ಲಲ್ಲಿ ಪ್ರತಶಿಖರಗಳ ನ್ನು ಕಿತ್ತು ತಂದು, ಜನಸಮೃದ್ಧವಾದ ದೇಶಗಳನ್ನೆಲ್ಲಾ ಅವುಗಳಿಂದ ಪುಡಿ