ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬0 ೨೨೨೦ ಶ್ರೀಮದ್ಭಾಗವತವು [ಅಧ್ಯಾ, ೬೭. ಪುಡಿಯಾಗುವಂತೆ ನಾಶಮಾಡುತಿದ್ದನು, ಅದರಲ್ಲಿಯೂ ವಿಶೇಷವಾಗಿ, ತನ್ನ | ಮಿತ್ರನನ್ನು ಕೊಂದ ಕೃಷ್ಣನಮೇಲೆ ಹಗೆ ತೀರಿಸಿಕೊಳ್ಳಬೇಕೆಂದು, ಆ ಕೃ ವ್ಯನಿದ್ದ ಆನರ್ತದೇಶಗಳಿಗೆ ಬಹಳವಾಗಿ ತೊಂದರೆಕೊಡುತಿದ್ದನು.ಒಮ್ಮೊ ಮೈ ಬೆಟ್ಟಗಳನ್ನೇ ಕಿತ್ತು ತಂದುರುಗಳಮೇಲೆ ಹಾಕುವನು.ಅವನುಸಾವಿರಾ ನೆಗಳ ಬಲವುಳ್ಳವನಾದುದರಿಂದ, ಸಮುದ್ರಕ್ಕೆ ಹೋಗಿ, ಅಲ್ಲಿಂದ ಬೊಗಸೆಯ ಲ್ಲಿ ನೀರನ್ನು ತುಂಬಿತಂದು, ಅನೀರಿನಿಂದಲೇ ಎಷ್ಟೋ ಪಟ್ಟಣಗಳನ್ನು ಕೊಚ್ಚಿ ಸುವನು!ಆಗಾಗ ಮಹರ್ಷಿಗಳ ಆಶ್ರಮಕ್ಕೆ ಪ್ರವೇಶಿಸಿ,ಅಲ್ಲಿನ ಮರಗಿಡಗಳೆಲ್ಲ ವನ್ನೂ ಮುರಿದು, ಮಲಮೂತ್ರವಿಸರ್ಜನದಿಂದ ಅವರ ಹೋಮಾಗ್ನಿಗಳ ನ್ನು ಕಡಿಸುವನು' ಮತ್ತು ಕಣಜವು ಸಣ್ಣ ಕ್ರಿಮಿಗಳನ್ನು ಹೊತ್ತುಕೊಂಡು ಹೋಗಿ ತನ್ನ ಗೂಡಿನಲ್ಲಿಟ್ಟು ಕೊಲ್ಲುವಂತೆ, ಈತನು ಅಲ್ಲಲ್ಲಿ ಕಂಡ ಸೀಯ ರನ್ನೂ , ಪ್ರರುಷರನ್ನೂ , ಮಕ್ಕಳನ್ನೂ ಪರತದ ತಪ್ಪಲಲ್ಲಿರುವ ಗುಹೆಗಳಿಗೆ ತಂದು ಸೇರಿಸಿ, ಆಗುಹೆಯ ಬಾಗಿಲಿಗೆ ಕಲ್ಲು ಬಂಡೆಗಳನ್ನು ಮುಚ್ಚಿಡುವನು. - ಹೀಗೆ ಅನೇಕವೇಶಗಳನ್ನು ಧ್ವಂಸಮಾಡುವುದರಲ್ಲಿಯೂ,ಕುಲಸ್ತ್ರೀಯರನ್ನು ಕೆ ಡಿಸುವುದರಲ್ಲಿಯೂ,ಕಾಲವನ್ನು ಕಳೆಯುತ್ತಿದ್ದ ಅದ್ವಿವಿದನು, ಅಲ್ಲಿಲ್ಲಿಸುತ್ತುತ್ತ ಒಮ್ಮೆ ರೈವತಕಪಕ್ವತದಬಳಿಗೆ ಬಂದನು. ಆ ಶತಮಧ್ಯದಿಂದ ಕಿವಿಗಿಂ ಪಾದ ಒಂದಾನೊಂದುಗಾನಧ್ವನಿಯು ಇವನ ಕಿವಿಗೆ ಕೇಳಿಸಿತು.ಅಧ್ವನಿಯು ಹೊರಟುಬಂದ ದಾರಿಯನ್ನೇ ಅನುಸರಿಸಿ ಮುಂದೆಹೋದಾಗ, ಅಲ್ಲಿ ಬಲರಾ ಮನು ಕಂಠದಲ್ಲಿ ಕಮಲಮಾಲಿಕೆಯನ್ನು ಧರಿಸಿ, ಅನೇಕಸ್ತಿಯರೊಡನೆ ಪು ಪ್ರವಾಗಿ ಮದ್ಯವನ್ನು ಕುಡಿದು, ಆ ಮದ್ಯಮದದಿಂದ ತೊಳಲುವ ಕಣ್ಣಾ ಲೆಗಳುಳ್ಳವನಾಗಿ, ಆಸ್ತಿಯರೊಡನೆ ತಾನೂ ಗಾನಮಾಡುತ್ತ, ಮದಿಸಿದ ಆನೆಯಂತೆ ಕ್ರೀಡಿಸುತಿದ್ದನು. ಆಗ ದುಷ್ಟನಾದ ದ್ವಿವಿದನು, ಸಮೀಪ ದಲ್ಲಿದ್ದ ಮರದ ಕೊಂಬೆಗಳಮೇಲೇರಿ ಆ ಮರಗಳನ್ನಾಡಿಸುತ್ತ, ನಾ ನಾವಿಧವಾದ ಅಂಗವಿಕಾರಗಳೊಡನೆ ಕಿಲಕಿಲಧ್ವನಿಯಿಂದ ಗದ್ದಲವಾಡ ತೊಡಗಿದನು, ಸಹಜವಾಗಿ ಹಾಸ್ಯಪ್ರಿಯರಾಗಿಯೂ, ಚಪಲಬುದ್ಧಿಯುಳ್ಳವ ರಾಗಿಯೂ ಇದ್ಯ ಬಲರಾಮನ ಪತ್ನಿಯರು, ಆ ಕಪಿಚೇಷ್ಟೆಗಳನ್ನು ನೋ ಡಿ ಕೈಕಟ್ಟಿ ನಗುತಿದ್ದರು. ಇದನ್ನು ನೋಡಿ ಆ ವಾನರನು ಮತ್ತಷ್ಟು ರೇಗಿ