ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥ್ಯಾ. ೬೭.] ದಶಮಸ್ಕಂಧವು. ೨೨೨೧ ದವನಾಗಿ, ಅವರಮುಂದೆ ಹಲ್ಲು ಕಿರಿಯುವುದು, ಹುಬ್ಬನ್ನು ಕುಣಿಸುವುದು, ಮುಂತಾದ ನಾನಾವಿಧಚೇಷ್ಟೆಗಳಿಂದ, ಅವರನ್ನು ತಾನೂ ಹಾಸ್ಯಮಾಡು ತಿದ್ದು, ಕೊನೆಗೆ ಬಲರಾಮನು ನೋಡುತ್ತಿರುವಹಾಗೆಯೇ, ಆ ಸಿಯರಿಗೆ ತನ್ನ ಸೃಷ್ಟವನ್ನು ತೋರಿಸಿ ಓಡಿಹೋದನು, ಈ ಆಭಾಸವನ್ನು ನೋಡಿ ಬಲರಾಮನು, ಕೋಪದಿಂದ ಆ ಕಪಿಯಮೇಲೆ ಕಲ್ಲುಗಳನ್ನು ಬೀರಿ ದನು. ವಾನರನು ಆ ಕಲ್ಲುಗಳ ಪೆಟ್ಟನ್ನು ಉಪಾಯದಿಂದ ತಪ್ಪಿಸಿ ಕೊಂಡುದಲ್ಲದೆ, ಬಲರಾಮನು ತನ್ನ ಸಮೀಪದಲ್ಲಿಟ್ಟುಕೊಂಡಿದ್ದ ಮದ್ಯ ಪೂರ್ಣವಾದ ಕಲಶವನ್ನು ತಂತ್ರದಿಂದಪಹರಿಸಿಕೊಂಡು ಓಡಿ ಹೋಗಿ, ಬಲರಾಮನ ಮುಂದೆ ಹಲ್ಲು ಕಿರಿದು ಹಾಸ್ಯ ಮಾಡುತ್ತ, ಅವನಿಗೆ ಮತ್ತಷ್ಟು ಕೋಪವನ್ನು ಹುಟ್ಟಿಸಿದನು, ಮತ್ತು ಆ ಬಲರಾಮನು ನೋಡುತಿದ್ದ ಹಾಗೆಯೇ ಆ ಮದ್ಯಪಾತ್ರೆಯನ್ನು ನೆಲಕ್ಕೆ ಕುಕ್ಕಿ ಒಡೆದುಹಾಕಿದನು. ಕೆಲವು ಸ್ತ್ರೀಯರ ಒಟ್ಟಿಗಳನ್ನೆಳೆದುಕೊಂಡು ಹೋದನು! ತಿರುಗಿತಿರುಗಿ ಬಲ ರಾಮನನ್ನು ಹಾಸ್ಯಮಾಡುತಿದ್ದನು. ಹೀಗೆ ದ್ವಿವಿದನು ಮಧಾಂಧನಾಗಿ ತನ್ನಲ್ಲಿ ಮಾಡಿದ ಅಪರಾಧವನ್ನೂ , ಆಗಾಗ ಅವನು ದೇಶದ ಜನಗಳಿಗೆ ತೆ೦ದರೆಕೊಡುತ್ತಿದ್ದುದನ್ನೂ ನೋಡಿ ಬಲರಾಮನು, ಅವನನ್ನು ಸಂಹರಿ ಸುವುದಕ್ಕಾಗಿ ತನ್ನ ಸೇಗಿಲನ್ನೂ , ಮುಸಲಾಯುಧವನ್ನೂ ಕೈಗೆತ್ತಿಕೊಂಡ ನು.ಅತ್ತಲಾಗಿ ಮಹಾವೀರಶಾಲಿಯಾದ ದ್ವಿವಿದನೂಕೂಡ,ಒಂದು ದೊಡ್ಡ ಮರವನ್ನು ಕಿತ್ತುಕೊಂಡು, ಅದರಿಂದ ಬಲರಾಮನ'ತಲೆಯಮೇಲೆ ಅಪ್ಪಳಿಸಿ ದನು. ತನ್ನ ಮೇಲೆ ಬಿಳುತ್ತಿರುವ ಆ ವೃಕ್ಷ ಪ್ರಹಾರಕ್ಕೂ ಬಲರಾಮನು ನಿರ್ಭ ಯವಾಗಿ! ತಲೆಯೊಡತ ಪರೈತದಂತೆ ನಿಶ್ಚಲನಾಗಿದ್ದು, ಆಮೇಲೆ ಸುನಂ ದವೆಂಬ ತನ್ನ ಮುಸಲಾಯುಧವನ್ನು ಆ ಕಪಿಯಮೆಲೆ ಪ್ರಯೋಗಿಸಿದನು. ಈ ಮುಸಲಪ್ರಹಾರದಿಂದ ಆ ಕಪಿಯ ದೇಹದಲ್ಲಿ ರಕ್ತಮಾಂಸಗಳೆಲ್ಲವೂ ಕಿತ್ತುಕೊಂಡಿತು, ಅದರಿಂದ ಆ ಕಪಿಯು ಗೈರಿಕಾದಿಧಾತುಗಳಿಂದ ಶೋಭಿ ಸುವ ಪರೂತದಂತೆ ಕಾಣುತ್ತಿದ್ದನು. ಆಗಲೂ ಆ ವಾನರನು ಯುದ್ಧಕ್ಕೆ ಹಿಂಜರಿಯದೆ,ಮೈಯಲ್ಲಿ ರಕ್ತವು ಸೋರುತ್ತಿರುವಾಗಲೇ ಮತ್ತೊಂದು ಮರ ವನ್ನು ಕಿತ್ತುತಂದು, ಅದರ ಎಲೆಗಳೆಲ್ಲವನ್ನೂ ಉದಿರಿಸಿ, ಅದನ್ನು ಬಲರಾ