ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ووود ಶ್ರೀಮದ್ಭಾಗವತವು [ಅಧ್ಯಾ, ೬೮. ೭ನೇ ಅವರ ದಿರಿಸಿ ನಿಂತನು. ಕರ್ಣಾದಿಗಳೆಲ್ಲರೂ ಧನುರ್ಧಾರಿಗಳಾಗಿ ಅವನನ್ನು ಬೆನ್ನಟ್ಟುತ್ತ, ( ಎಲ ದುಷ್ಮಾ ! ನಿಲ್ಲು ! ನಿಲ್ಲು " ಎಂದು ಕೂಗಿ, ಕೋಪದಿಂದ ಬಾಣಗಳನ್ನು ವರ್ಷಿಸುತಿದ್ದರು. ಆಗ ಸಾಂಬನು, ದಂಡಾಹತವಾದ ಸರ್ಪದಂತೆ ಅವರ ಬಾಣಪ್ರಹಾರದಿಂದ ಕೋಪಗೊಂಡು,ತನ್ನ ಧನುಸ್ಸನ್ನು ಟಂಕಾರಮಾಡಿ, ಕರ್ಣನೇ ಮೊದಲಾದ ಆ ಆರುಮಂದಿ ರಥಿಕರನ್ನೂ ಏಕಕಾಲದಲ್ಲಿ ಅನೇಕಬಾಣಗಳಿಂದ ಪ್ರಹರಿ ಸಿದನು. ನಾಲ್ಕು ನಾಲ್ಕು ಬಾಣಗಳಿಂದ ಅವರ ರಥದಲ್ಲಿದ್ದ ನಾಲ್ಕು ನಾಲ್ಕು ಕುದುರೆಗಳನ್ನೂ ಕೊಂದು ಕೆಡಹಿದನು. ಒಂದೊಂದು ಬಾಣ ದಿಂದ ಸಾರಥಿಗಳನ್ನು ಕೊಂದನು. ಸಣ್ಣ ಬಾಲಕನಾಗಿದ್ದರೂ, ಅವನು ತೋರಿಸಿದ ಅದ್ಭುತಪರಾಕ್ರಮವನ್ನು ನೋಡಿ, ಅವರೆಲ್ಲರೂ ಮನಸ್ಸಿ ನಲ್ಲಿ ಅವನನ್ನು ಕೊಂಡಾಡುತ್ತ,ಕೊನೆಗೆ ಆ ಆರುಮಂಹಿಯೂ ಒಟ್ಟಾಗಿ ಯೇ ಅವನನ್ನು ನಿಗ್ರಹಿಸಬೇಕೆಂದು ನಿಶ್ಚಯಿಸಿಕೊಂಡರು. ಅವರಲ್ಲಿ ನಾಲ್ಕು ಮಂದಿರಾಜರು, ಅವನ ನಾಲ್ಕುರಥಾಶ್ವಗಳನ್ನು ಕೊಂದು ಕೆಡಹಿದರು. ಒಬ್ಬನು ಅವನ ಸಾರಥಿಯನ್ನು ಕೊಂದನು. ಇದೇ ಸಮಯದಲ್ಲಿ ಮತ್ತೊಬ್ಬ ನು ಅವನ ಧನುಸ್ಸನ್ನು ಕತ್ತರಿಸಿಬಿಟ್ಟನು. ಹೀಗೆ ಅವರೆಲ್ಲರೂ ಒಂದಾಗಿ ಸೇರಿ, ಬಹಳಪ್ರಯಾಸದಿಂದ ಅವನನ್ನು ವಿರಥನನ್ನಾಗಿ ಮಾಡಿ, ಅವನು ಅಸಹಾಯನಾಗಿದ್ದ ಕಾಲದಲ್ಲಿ, ಅವನನ್ನು ಹಿಡಿದು ಕಟ್ಟಿ, ತಮ್ಮ ಕುಮಾರಿ ಯೊಡನೆ ಆತನನ್ನೂ ತಮ್ಮ ಪಟ್ಟಣಕ್ಕೆ ಕರೆದುಕೊಂಡುಹೋದರು. ಹೀಗೆ ಕರ್ಣಾದಿಗಳು ಜಯಶೀಲರಾಗಿ ಸಣ್ಣಬಾಲಕನಾದ ಸಾಂಬನನ್ನು ಹಿಡಿದುಕೊಂಡ ಹೋದ ಸಂಗತಿಯು, ನಾರದನಮುಖದಿಂದ ಉಗ್ರಸೇನ ನಿಗೆ ತಿಳಿದುಬಂದಿತು.ಯಾದವರೆಲ್ಲರಿಗೂ ಕೌರವರಮೇಲೆ ಅತ್ಯಾಕ್ರೋಶವು. ಹುಟ್ಟಿತು. ಉಗ್ರಸೇನನ ಪ್ರೇರಣೆಯಿಂದ ಯದುವೀರರೆಲ್ಲರೂ ಹಸ್ತಿನಾ ವತಿಗೆ ದಂಡೆತ್ತಿ ಹೊರಡುವುದಾಗಿ ನಿಶ್ಚಯಿಸಿದ್ದರು. ಬಲರಾಮನಿಗೂ ಈ ಸಂಗತಿಯು ತಿಳಿಯಬಂದಿತು. ಆದರೆ ಅವನಿಗೆಮಾತ್ರ ಕ್ರಮಗೂ, ಯಾದವರಿಗೂ ಕಲಹವನ್ನು ಹೆಚ್ಚಿಸುವುದರಲ್ಲಿ ಅಭಿಪ್ರಾಯವಿರಲಿಲ್ಲ. ಇದ ಕ್ಯಾಗಿ ಬಲರಾಮನು ಯುದ್ಯೋದ್ಯುಕ್ತರಾಗಿದ್ದ ಆ ಯಾದವರೆಲ್ಲರಿಗೂ ೧ ಬ