ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೬, ಶ್ರೀಮದ್ಭಾಗವತವು (ಅಧ್ಯಾ, ೬೮. ಧಾರಿ ಕನಾದ ಸಾಂಬನನ್ನು ಯುದ್ಧದಲ್ಲಿ ಜಯಿಸಿ ಕಟ್ಟೆ ತಂದಿರುವಿರಿ!ಹಾಗಿ ದರೂ ಬಂಧುಗಳಾದ ನಮನಮಗೆ ದ್ವೇಷವನ್ನು ಹೆಚ್ಚಿಸಿಕೊಳ್ಳಬಾರ ದೆಂದು ನಾವು ತಾಳ್ಮೆಯನ್ನು ವಹಿಸಿರುವೆವು, ಈಗಲೇ ನೀವು ಆ ಕುಮಾರ ನನ್ನು ಬಿಟ್ಟುಕೊಡಬೇಕು. ಹಾಗಿಲ್ಲದಪಕ್ಷದಲ್ಲಿ ನೀವು ನಮ್ಮ ಕೋಪಕ್ಕೆ ಪಾತ್ರರಾಗುವಿರಿ ” ಎಂದನು. ಹೀಗೆ ಬಲರಾಮನು ತನ್ನ ವಿರಕ್ಕೂ, ಶೆಡ್ಯಕ್ಕೂ, ಶಕ್ತಿಗೂ, ಅನುಗುಣವಾಗಿ ಹೇಳಿದ ಹೆಮ್ಮೆಯ ಮಾತನ್ನು ಕೇಳಿ ಕೌರವರಿಗೆ ಮನಸ್ಸಿನಲ್ಲಿ ಆಕ್ರೋಶವು ಹುಟೈತು, ಆ ಕೋಪದಿಂದ ಅವರು ತಮ್ಮೊಳಗೆ ತಾವು, ಆಹಾ ! ಇದಲ್ಲವೇ ! ಆಶ್ವರವು ! ಕಾಲಗತಿ ಯೆಂಬುದು ಮನುಷ್ಯನನ್ನು ಮೋಹಗೊಳಿಸಿ ತನ್ನ ಸ್ಥಿತಿಯೇ ತನಗೆ ತಿಳಿಯ ದಂತೆ ಮಾಡುವುದು, ಹಾಗಿಲ್ಲದಿದ್ದರೆ ಅಲ್ಪನಾದ ಉಗ್ರಸೇನನು, ನಮಗೆ ಈ ಮಾತನ್ನು ಹೇಳಿ ಕಳುಹಿಸುತಿದ್ಮನೆ ! ಕಾಲಿನಲ್ಲಿ ಮೆಚ್ಚತಕ್ಕ ಪಾದು ಕೆಯು, ಕಿರೀಟಧಾರಣ ಯೋಗ್ಯವಾದ ತಲೆಯನ್ನೇರುವುದಕ್ಕೆ ಯತ್ನಿ ಸುವಂತೆ, ನಮ್ಮ ಅಧಿಕಾರಕ್ಕೊಳಪಟ್ಟ ಯಾದವರು, ಈಗ ನಮ್ಮನ್ನು ಕುರಿತು ಹೀಗೆ ಆಜ್ಞೆ ಮಾಡುತ್ತಿರುವರಲ್ಲಾ ! ಆ ಯಾದವರಿಗೆ ನಾವು ಅಷ್ಟು ಸಲಿಗೆಯನ್ನು ಕೊಟ್ಟುದೇ ತಪ್ಪ: ಕುಂತೀದೇವಿಯ ಸಂಬಂಧದಿಂದ ನಮಗೆ ಅವರಲ್ಲಿ ಬಂಧುತ್ವವು ಬೆಳೆದುದಕ್ಕಾಗಿ, ಅವರೊಡನೆ ನಾವು ಸಹ ಭೋಜನಾದಿಗಳನ್ನು ನಡೆಸಬೇಕಾಯಿತು. ಇಷ್ಟು ಮಾತ್ರಕ್ಕೆ ಅವರು ನಮಗೆ ಸಮಾನರೆಂದು ಹೇಳಿಕೊಳ್ಳುವಂತಾಯಿತೆ ! ನಾವು ಕೊಟ್ಟ ರಾಜ್ಯ ವನ್ನ ನುಭವಿಸುವುದರಿಂದಲ್ಲವೇ ಅವರು ರಾಜರೆಂದೆನಿಸಿಕೊಂಡಿರುವರು. ಇಲ್ಲ ಡಿದರೆ ಅವರಿಗೆ ರಾಜ್ಯವೆಲ್ಲಿಯದು?ನಮ್ಮಿಂದ ರಾಜ್ಯವನ್ನು ಪಡೆದ ಯಾದವ ರು, ಈಗ ನಮಗೆ ಸಮಾನಸ್ಕಂಧರಂತೆ ಸಂದೇಶವನ್ನು ಹೇಳಿ ಕಳುಹಿಸುತ್ತಿರು ವರಲ್ಲಾ' ಮುಖ್ಯವಾಗಿ ನಾವು ಅವರನ್ನು ಅಷ್ಟು ದೂರಕ್ಕೆ ಹೆಚ್ಚಿಸಬಾರದಾ ಗಿತ್ತು. ಈಗಲೂ ನಾವು ಉದಾಸೀನರಾಗಿ ಸುಮ್ಮರುವುದರಿಂದಲೇ, ಅವರು ಛತ್ರ,ಚಾಮರ, ವ್ಯಜನ,ಶಂಖ, ಕಿರೀಟ, ಶಾಸನಗಳೇ ಮೊದಲಾದ ರಾಜ ಭೋಗಗಳೆಲ್ಲವನ್ನೂ ಅನುಭವಿಸುತ್ತಿರುವರು.ಮೊದಲು ಅದನ್ನು ನಾವುತಪ್ಪಿಸಿ ಬಿಡಬೇಕು, ಹಾವಿಗೆ ಹಾಲೆರದಂತೆ ನಾವು ಅವರಿಗೆ ಮಾಡಿದ ಉಪ