ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೬ ಅಧ್ಯಾ, ೬೮.] ದಶಮಸ್ಕಂಧವು. ಕಾರವು, ಈಗ ನಮಗೇ ಪ್ರತಿಕೂಲವಾಗಿ ಪರಿಣಮಿಸಿತು.ನನ್ನ ಅನುಗ್ರಹದಿಂ ದ ಇಷ್ಟು ದೂರಕ್ಕೆ ಬಂದವರು, ನಾಚಿಕೆಯಿಲ್ಲದೆ ಈಗ ನಮಗೇ ಆಜ್ಞೆಮಾ ಡುತ್ತಿರುವರಲ್ಲ! ಇದೇನಾಶ್ಚರೈವು! ಕೌರವರಾಜರಾದ ನಾವೂ, ಭೀಷ್ಮ ದ್ರೋಣಾದಿಮಹಾರಥರೂ, ಮನಃಪೂರೈಕವಾಗಿ ಸಮ್ಮತಿಸಿ ಕೊಡದೇ ಇದ್ದ ಐಶ್ವಠ್ಯವನ್ನು ದೇವೇಂದ್ರನಾದರೂ ನಿಶ್ಚಿಂತನಾಗಿ ಅನುಭವಿಸಲಾರ ನು, ಸಿಂಹದ ಬಾಯಲ್ಲಿರುವ ಆಹಾರಪದಾರ್ಥವನ್ನು ಒಂದಾನೊಂದು ಸಣ್ಣ ಮೇಕೆಯು ಬಲಾತ್ಕಾರದಿಂದ ಕಿತ್ತುಕೊಂಡು ಹೋಗುವಂತೆ ನಮ್ಮ ಸಮ್ಮ ತಿಯಿಲ್ಲದೆ ಅನುಭವಿಸತಕ್ಕ ಐಶ್ವಠ್ಯವು ಎಂದಿಗೂ ಅವರಿಗೆ ದಕ್ಕಲಾರದು! ಇರಲಿ! ಆ ಯಾದವರ ರಾಜ್ಯವನ್ನೆ ಕಿತ್ತುಕೊಳ್ಳುವೆವು” ಎಂದರು. ಹೀಗೆ ಕೌರವರೆಲ್ಲರೂ, ತಮ್ಮ ಕುಲಮದದಿಂದಲೂ,ಐಶ್ವರಮದದಿಂದಲೂ, ತಮ ಗೆ ಅನೇಕರಾಜರ ಬಂಧುತ್ವದ ಬಲವುಂಟೆಂಬ ಹೆಮ್ಮೆಯಿಂದಲೂ, ಬಲರಾಮ ನೊಡನೆ ಆಡಬಾರದ ಈ ಮಾತುಗಳನ್ನಾಡಿ, ತಮ್ಮ ಪಟ್ಟಣಕ್ಕೆ ಹಿಂತಿರುಗಿ ದರು. ಆಗ ಬಲರಾಮನು ಕೌರವರ ದುಸ್ಸಭಾವವನ್ನೂ ,ಗರ್ವದಮಾತುಗ ಳನ್ನೂ ಕೇಳಿ ತಡೆಯಲಾರದ ಕೋಪದಿಂದ ಜ್ವಲಿಸುತ್ತ, ಅವರ ಹೆಮ್ಮೆಯ ಮಾತುಗಳಿಗಾಗಿ ತನ್ನಲ್ಲಿ ತಾನೇ ನಕ್ಕು ಹೀಗೆಂದು ಹೇಳುವನು. “ ಮ ದೋನ್ಮತ್ತರಾದ ಆ ಕೌರವರು ಒಳ್ಳೆಮಾತಿನಿಂದ ಸಮಾಧಾನಕ್ಕೆ ಬರುವ ಹಾಗೆ ತೋರಲಿಲ್ಲ! ದುಮ್ಮಗೋವುಗಳು ದಂಡಪ್ರಹಾರದಿಂದಲೇ ವಶವಾ ಗುವಂತೆ, ಅವರನ್ನಡಗಿಸುವುದಕ್ಕೆ ದಂಡೋಪಾಯವೇ ಮೇಲಾದುದು! ಆ ಹಾ ! ಆಕೌರವರಮೇಲೆ ಮಿತಿಮೀರಿ ಕೋಪಗೊಂಡಿದ್ದ ಯಾದವರಿಗೂ, ನನ್ನ ತಮ್ಮನಾದ ಕೃಷ್ಣನಿಗೂ, ನಾನು ಎಷ್ಟೋ ವಿಧದಿಂದ ಸಮಾಧಾನವ ನ್ನು ಹೇಳಿ, ಈ ಉಭಯಕುಲಕ್ಕೂ ಶಾಂತಿಯನ್ನುಂಟುಮಾಡಬೇಕೆಂದು ಇಲ್ಲಿಗೆ ಬಂದೆನು, ಮಂದಬುದ್ಧಿಯುಳ್ಳ ಈ ಕೌರವರಾದರೋ,ಕಲಹದಲ್ಲಿಯೇ ದೃಷ್ಟಿಯಿಟ್ಟು, ನನ್ನನ್ನೂ ಲಕ್ಷ್ಯಮಾಡದೆಗರ್ವೊದ್ರಿಕ್ತರಾಗಿ,ಆಡಬಾರದ ಮಾತುಗಳನ್ನಾಡಿರುವರು. ಆಹಾ!ಆ ಕೌರವರಿಗೆ ಎಷ್ಟು ಕೊಬ್ಬಿರಬಹುದು' ಭೋಜರು, ವೃಷ್ಟಿಗಳು, ಅಂಧಕರು ಮೊದಲಾದ ಯಾದವಕುಲಕ್ಕೆಲ್ಲವೂ ಪ್ರಭುವಾಗಿ, ಇಂದ್ರಾದಿಲೋಕಪಾಲಕರನ್ನೂ ತನ್ನ ಆಜ್ಞಾಧೀನರನ್ನಾಗಿ