ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೮ ಶ್ರೀಮದ್ಭಾಗವತನ [ಅಧ್ಯಾ, 4೮. ಮಾಡಿಕೊಳತಕ್ಕ ಉಗ್ರಸೇನನು ರಾಜನಲ್ಲವಂತೆ! ಅದೂ ಹೋಗಲಿ! ಯಾ ವನು ದೇವೇಂದ್ರನ ಸುಧರ್ಮಾಸಭೆಯನ್ನೇ ಆಕ್ರಮಿಸಿದನೋ, ಯಾವನು ದೇವಲೋಕದಲ್ಲಿದ್ದ ಪಾರಿಜಾತವೃಕ್ಷವನ್ನು ತನ್ನ ಪರಾಕ್ರಮದಿಂದ ಸಾಧಿಸಿ ತಂದು ಈಗಲೂ ಅನುಭವಿಸುತ್ತಿರುವನೋ, ಅಂತಹ ನಮ್ಮ ಕೃಷ್ಣನಿಗೂ ರಾಜಸಿಂಹಾಸನವನ್ನೇರುವ ಯೋಗ್ಯತೆಯಿಲ್ಲವಂತೆ! ಆಹಾ ! ಸತ್ವಿಕೆ ಶ್ವರಿಯಾದ ಸಾಕ್ಷಾನ್ಮಹಾಲಕ್ಷ್ಮಿ ಯೂಕೂಡ, ಯಾವನ ಪಾದಸೇವೆಯನ್ನು ಮಾಡುತ್ತಿರುವಳೋ, ಅಂತಹ ಕೃಷ್ಣನಿಗೆ, ಸಾಮಾನ್ಯವಾದ ಈ ರಾಜಚಿಹ್ನ ಗಳನ್ನು ಧರಿಸುವುದಕ್ಕೆ ಅರ್ಹತೆಯಿಲ್ಲವಂತೆ ? ಅನೇಕಪುಣ್ಯತೀರ್ಥಗಳನ್ನೂ ತಮ್ಮ ಸಂಬಂಧದಿಂದ ಪಾವನಮಾಡತಕ್ಕ ಯೋಗಿಗಳೂ,ಯಾವನ ಪಾದ ರೇಣುವನ್ನು ಪಾವನವನ್ನಾಗಿ ಎಣಿಸಿರುವರೋ, ಇಂದ್ರಾದಿಲೋಕಪಾಲಕ ರೂ ಯಾವನ ಪಾದಪರಾಗವನ್ನು ತಿರಸಾಧಾರಣಮಾಡುತ್ತಿರುವರೋ, ಯಾವನ ಅಂಶಾಂಶಭೂತರೆನಿಸಿಕೊಂಡ ಬ್ರಹ್ಮರುದ್ರರೂ, ನಾನೂ, ಮಹಾಲಕ್ಷ್ಮಿಯೂ, ಯಾವನ ಪಾದಧೂಳಿಯನ್ನು ಅನವರತವೂ ತಲೆಯಲ್ಲಿ ಧರಿಸುತ್ತಿರುವೆವೋ, ಅಂತಹ ಮಹಾತ್ಮನಾದ ಕೃಷ್ಣನಿಗೂ ರಾಜಸಿಂಹಾಸನ ವನ್ನೇರುವ ಯೋಗ್ಯತೆಯಿಲ್ಲವೆ?, ಆಕೌರವರು ಅನುಗ್ರಹಿಸಿಕೊಟ್ಟ ರಾಜ್ಯವ ನೋ ವೃಷ್ಟಿಗಳಾದನಾವು ಅನುಭವಿಸುತ್ತಿರುವೆವಂತೆ!ಆ ಕೌರವರು ತಲೆಗಳಂ ತೆ! ನಾವುಪಾದುಕೆಗಳಂತೆ!ಆಹಾ!'ಮದ್ಯಪಾಯಿಗಳು ಬಾಯಿಗೆ ಬಂದಂತೆ ಬ ಗುಳುವಹಾಗೆ, ಐಶ್ವರಮತ್ತರಾದ ಆಕೌರವರು ನನ್ನೊಡನೆಯೇ ಈ ಅಸಂಬ ದಪ್ರಲಾಪಗಳನ್ನು ಮಾಡಿ ಹೋಗಿರುವರಲ್ಲಾ.ದುಷ್ಟರನ್ನಡಗಿಸತಕ್ಕ ಶಕ್ತಿ ಯುಳ್ಳಯಾವನು ತಾನೇ ಇಂತಹ ಕ್ರೂರವಾಕ್ಯಗಳನ್ನು ಕೇಳಿ ಸುಮ್ಮನಿರು ವನು!ಇದೊ! ಈಗಲೇ ನಾನು ಈ ಭೂಮಿಯಲ್ಲಿ ಕೌರವರ ಹುಟ್ಟೇ ಇಲ್ಲದಂ ತೆ ಮಾಡಿಬಿಡುವೆನು” ಎಂದು ಹೇಳುತ್ತ, ಬಲರಾಮನು ತ್ರಿಲೋಕವನ್ನೂ ದಹಿಸುವಂತೆ ಕೋಪಾವಿಷ್ಟನಾಗಿ, ತನ್ನ ನೇಗಿಲನ್ನು ಕೈಗೆತ್ತಿಕೊಂಡು ನಿಂತನು, ಒಡನೆಯೇ ಆ ನೇಗಿಲಿನ ಕೊನೆಯನ್ನು ಹಸ್ತಿನಾವತಿಯ ದಕ್ಷಿಣ ಪ್ರಾಕಾರದಿಂದಾಚೆಗೆ ನೀಡಿ, ಮೊತ್ತಕ್ಕೆ ಆ ಪಟ್ಟಣವನ್ನೇ ಗಂಗೆಯಲ್ಲಿ ಕೊ ಚ್ಚಿಸಿಬಿಡಬೇಕೆಂದು ನಿಶ್ಚಯಿಸಿ, ಅದನ್ನು ಬಲಾತ್ಕಾರದಿಂದ ಎಳೆದನು.