ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Scot ಅಭ್ಯಾ, ೫.] - ಅಶಮಸ್ಕಂಧವು. ಹೈನು, ಅಣ್ಣನಾದ ಬಲರಾಮನನ್ನು ನೋಡಿ*ctಅಣ್ಣಾ!ಇದೋ ನೋಡು! ನಮಗಾಗಿ ಎರಡುರಥಗಳು ಬಂದಿರುವುವು, ಅವುಗಳಲ್ಲಿ ನಮಗೆ ಇಷ್ಟವಾದ ಆಯುಧಗಳೆಲ್ಲವೂ ಸಿದ್ಧವಾಗಿರುವುವು, ನೀನು ಯುದ್ಧಸನ್ನದ್ಧನಾಗಿ ಈ ರಥವನ್ನೇರು! ಈಗಲಾದರೋ 'ನಮ್ಮ ಯಾದವರಿಗೆ ಮಹತ್ತಾದ ಭಯ ವು ಬಂದೊದಗಿರುವುದು, ಜರಾಸಂಧನ ಸೈನ್ಯವು ನಮ್ಮ ಪಟ್ಟಣವನ್ನು ಮು ತಿರುವುದು, ಈಗಲೇ ನಾವು ರಥಾರೂಢನಾಗಿ ಆ ಸೈನ್ಯವನ್ನು ಧ್ವಂಸಮಾ ಡುವುದಕ್ಕೆ ಯತ್ನಿಸಬೇಕು, ನಮ್ಮ ಯಾದವರಿಗೆ ಬಂದೊದಗಿರುವ ಅಪ ಮೃತ್ಯುವನ್ನು ತಪ್ಪಿಸಬೇಕು, ದುಷ್ಟರನ್ನ ಡಗಿಸಿ ಸಾಧುಗಳಿಗೆ ಕ್ಷೇಮ ವನ್ನುಂಟುಮಾಡುವುದಕ್ಕಾಗಿಯೇ ನಾವಿಬ್ಬರೂ ಅವತರಿಸಿರುವೆವು, ಭೂಮಿ ಗೆ ಭಾರಭೂತವಾದ ಇಪ್ಪತ್ತು ಮೂರು ಅಕ್ಷೆಹಿಣೀ ಸೈನ್ಯಗಳು ಒಂದಾಗಿ ಬಂದು ಸೇರಿರುವುದು, ಇವುಗಳನ್ನು ನಿಗ್ರಹಿಸುವುದರಿಂದ ಬಹಳಮಟ್ಟಿಗೆ ಭೂಭಾರವನ್ನು ಪರಿಹರಿಸಿದಂತಾಗುವುದು” ಎಂದನು. ಹೀಗೆ ರಾಮಕೃಷ್ಣ ರಿಬ್ಬರೂ ತಾವು ಮುಂದೆ ನಡೆಸಬೇಕಾದ ಕಾವ್ಯಗಳನ್ನು ತಮ್ಮೊಳಗೆ ನಿರ್ಧ ರಿಸಿಕೊಂಡು ತಮ್ಮ ತಮ್ಮ ರಥವನ್ನೇರಿದರು, ಅದರಲ್ಲಿ ತಮತಮ ಗೆ ಇಷ್ಟವಾದ ಆಯುಧಗಳನ್ನು ಸಿದ್ಧವಾಗಿ ಕೈಯಲ್ಲಿ ಹಿಡಿದು, ಸೈನ್ಯವನ್ನು ಮಾತ್ರ ಸ್ವಲ್ಪವಾಗಿಯೇ ತಮ್ಮೊಡನೆ ತೆಗೆದುಕೊಂಡು, ಪಟ್ಟಣದಿಂದ ಹೊರ ಟರು. ಶ್ರೀಕೃಷ್ಣನು ದಾರುಕನೆಂಬ ತನ್ನ ಸಾರಥಿಯಿಂದ ಪ್ರೇರಿತವಾದ ರಥದಲ್ಲಿ ಕುಳಿತು,ಪುರದ್ವಾರದಿಂದ ಹೊರಗೆ ಬಂದೊಡನೆ, ಶತ್ರುಸೈನ್ಯಗಳ ಎದೆನಡುಗುವಂತೆ ಪಾಂಚಜನ್ಯವೆಂಬ ತನ್ನ ಶಂಖವನ್ನು ಧ್ವನಿಮಾಡಿದನು. ಈ ಧ್ವನಿಯನ್ನು ಕೇಳಿದೊಡನೆ ಅತ್ತಲಾಗಿ ಜರಾಸಂಧನ, ರಥಾರೂಢರಾಗಿ ಬರು ತಿರುವ ರಾಮಕೃಷ್ಣರಿಬ್ಬರನ್ನೂ ನೋಡಿ, ಕೋಪದಿಂದ ಮೈತಿಳಿಯದೆ ಕೃ ಹೃನನ್ನು ಕುರಿತು (1 ಎಲ ಕೃಷ್ಣಾ! ಪುರುಷಾಥಮಾ ! ನೀನು ನನ್ನ ಅಳಿಯ ನಾದ ಕಂಸನನ್ನು ಕೊಂದವನಾದರೂ, ನಿನ್ನೊಡನೆ ನಾನು ಯುದ್ಧ ಮಾಡ ಇಲ್ಲಿ ಜರಾಸಂಧನ ದಂಡಯಾತ್ರೆಯನ್ನೂ, ದೇವತೆಗಳು ಕೃಷ್ಣನ ಸಹಾ ಯಾರ ವಾಗಿ ಕಳುಹಿಸಿಕೊಟ್ಟ ಯುದ್ಧ ಸಾಧನಗಳನ್ನೂ, ಇನ್ನೂ ವಿವರವಾಗಿ ತೋರಿ ಸುವಂತೆ ಕೆಲವು ಅಧಿಕವಾಡಗಳು ಕೆಲವು ಪ್ರತಿಗಳಲ್ಲಿ ಮಾತ್ರ ಆಗುವುವು.