ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೬೮.] ದಶಮಸ್ಕಂಧವು. ೨೨೨೯ ಬಲರಾಮನು ಎಳೆದ ವೇಗಕ್ಕೆ,ಆ ಹಸ್ತಿನಾಪುರವೇ ಮೊತ್ತಕ್ಕೆ ಕಿತ್ತುಬಂದು, ಪ್ರವಾಹದಲ್ಲಿ ಕೊಚ್ಚಿ ಹೋಗುವ ತೆಪ್ಪದಂತೆ, ಗಿರುಗಿರನೆ ಸುತ್ತುತ್ತ ಗಂಗಾಪ್ರವಾಹದಲ್ಲಿ ಮುಳುಗಿಹೋಗುವ ಸಂಭವವು ತೋರಿತು. ಆಗ ಕೌ ರವರೆಲ್ಲರಿಗೂ ಮನಸ್ಸಿನಲ್ಲಿ ಭಯವು ಹುಟ್ಟಿತು. ಅವರೆಲ್ಲರೂ ತಮ್ಮ ಪ್ರಾ ಇವುಳಿದರೆ ಸಾಕೆಂದೆಣಿಸಿ, ಬಲರಾಮನಲ್ಲಿಯೇ ಶರಣಾಗತರಾಗುವುದಕ್ಕಾಗಿ ನಿಶ್ಚಯಿಸಿಕೊಂಡರು. ದುರೊಧನಾದಿಗಳೆಲ್ಲರೂ, ತಾವು ನಿರ್ಬಂಧಿಸಿಟ್ಟಿದ್ದ ಸಾಂಬನನ್ನೂ, ಅವನ ಪತ್ನಿ ಯಾದ'ಲಕ್ಷಣೆಯನ್ನೂ ಮುಂದಿಟ್ಟುಕೊಂಡು ಬಂದು, ಬಲರಾಮನಮುಂದೆ ಕೈಮುಗಿದು ನಿಂತು, ಹೀಗೆಂದು ಪ್ರಾರ್ಥಿಸು ವರು, 11 ರಾಮಾ ! ರಾಮಾ : ಮೂಢರಾದ ನಾವು ನಿನ್ನ ಮಹಿಮೆಯನ್ನು ತಿಳಿಯದೆ ದುರ್ಬುದ್ಧಿಯಿಂದ ನಿನ್ನಲ್ಲಿ ಅಪರಾಧಿಗಳಾದೆವು. ಸಮಸ್ತಲೋಕ ಕ್ಕೂ ನೀನೇ ಆಧಾರಭೂತನೆಂದು ಈಗ ನಮಗೆ ತಿಳಿಯಿತು.ನಮ್ಮ ಅಪರಾಧ ವನ್ನು ಕ್ಷಮಿಸಬೇಕು. ಓ ! ಪ್ರಭೂ!ನೀನು ಸಾಮಾನ್ಯಯಾದವನಲ್ಲ' ಸರೈ ಶ್ವರನಾದ ಭಗವಂತನೇ ನೀನು! ಪ್ರಪಂಚದ ಸೃಷ್ಟಿ, ಸ್ಥಿತಿ, ಸಂಹಾರಗಳೆಲ್ಲ ಕ್ಕೂ ಸೀನೊಬ್ಬನೇ ಕಾರಣನು, ನಿನಗೆ ನೀನೇ ಆಧಾರನೇಹೊರತು,ನಿನಗೆ ಮ ತ್ತೊಂದು ಆಶ್ರಯವಸ್ತುವಿಲ್ಲ. ಈ ಜಗತ್ತೆಲ್ಲವೂ ನಿನ್ನ ಕ್ರೀಡಾಸಾಮಗ್ರಿಗಳೆಂ ದು ಮಹಾತ್ಮರು ಹೇಳುವರು. ಓ ! ರಾಮಾ ! ಸಹಸ್ರಫಣೆಗಳುಳ್ಳ ಆದಿ ಶೇಷಾವತಾರದಿಂದ ಈ ಭೂಮಂಡಲವೆಲ್ಲವನ್ನೂ ತಲೆಯಲ್ಲಿ ಹೊತ್ತಿರತಕ್ಕ ವನೂ ನೀನೊಬ್ಬನೇ ! ಪ್ರಳಯಕಾಲದಲ್ಲಿ ಅನಿರುದ್ಧರೂಪದಿಂದ ಸಮಸ್ತ ಜಗತ್ತನ್ನೂ ಒಳಗಡಗಿಸಿಕೊಂಡು, ಬೇರೆಯಾವ ವಸ್ತುವನ್ನೂ ಕಾಣಿಸದೆ ಏಕಾಕಿಯಾಗಿ ಮಲಗತಕ್ಕವನೂ ನೀನೇ! ಓ ! ಭಗವಂತಾ ! ನೀನು ಅಂಗೀ ಕರಿಸತಕ್ಕ ಅವತಾರಗಳೆಲ್ಲವೂ ಲೋಕಕ್ಷೇಮಕ್ಕಾಗಿಯೇಹೊರತು ಬೇರೆಯ 2. ಶುದ್ಧಸತ್ವಮೂರ್ತಿಯಾದ ನಿನಗೆ ಒಮ್ಮೆ ಕೋಪವುಂಟಾದರೂ, ಆ ದು ನಮ್ಮಂತವರನ್ನು ಶಿಕ್ಷಿಸಿ ಸನ್ಮಾರ್ಗಕ್ಕೆ ತರುವುದಕ್ಕಾಗಿಯೇ ಹೊರತು, ದ್ವೇಷದಿಂದಲಾಗಲಿ, ಮಾತ್ಸಲ್ಯದಿಂದಾಗಲಿ ಹುಟ್ಟತಕ್ಕುದಲ್ಲ. ಆದುದರಿಂ ದ ಶರಣಾಗತರಾದ ನಮ್ಮನ್ನು ರಕ್ಷಿಸಬೇಕು. ಓ ! ಸರಾತ್ಮಾ ! ಸತ್ವಶಕ್ತಿ ಧಾ! ಅನ್ಯ ಮಾ! ನಿನಗೆ ನಮಸ್ಕಾರವು. ಓ! ವಿಶ್ವಕರ್ತಾ ನಿನಗೆ ವಂದಿಸು