ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩0 ಶ್ರೀಮದ್ಭಾಗವತವು - [ಅಧ್ಯಾ, ೬೯. ವೆವು, ನಮ್ಮನ್ನು ರಕ್ಷಿಸು” ಎಂದು ಪ್ರಾರ್ಥಿಸಿದರು. ಹೀಗೆ ಕೌರವರೆಲ್ಲರೂ ಪ್ರಾಣಭಯದಿಂದ ನಡುಗುತ್ತ, ತನ್ನಲ್ಲಿ ಮರೆಹೊಕ್ಕು ಪ್ರಾರ್ಥಿಸು ತಿರುವುದನ್ನು ಕೇಳಿ ಬಲರಾಮನು, ಅವರಲ್ಲಿ ಪ್ರಸನ್ನ ನಾಗಿ ( ಎಲೈ ಭಯ ಪಡಬೇಡಿರಿ” ಎಂದು ಅಭಯಪ್ರದಾನವನ್ನು ಮಾಡಿದನು. ಆಗ ದು ಧನನು ಸಂತೋಷದಿಂದ ಅರವತ್ತು ವರುಷದ ವಯಸ್ಸುಳ್ಳ ಹನ್ನೆರಡುಸಾ ಪಿರಗಜಗಳನ್ನೂ, ಲಕ್ಷ ಕುದುರೆಗಳನ್ನೂ, ಸೂರತೇಜಸ್ಸುಳ್ಳ ಆರುಸಾವಿ ರ ಸುವರ್ಣಗಡಗಳನ್ನೂ, ಸುವರ್ಣಪದಕದಿಂದಲಂಕೃತರಾದ ಸಾವಿರಮಂ ದಿ ದಾಸಿಯರನ್ನೂ ತನ್ನ ಮಗಳಿಗೆ ಬಳುವಳಿಯಾಗಿ ಕೊಟ್ಟು, ಸಾಂಬನನ್ನೂ ತನ್ನ ಮಗಳಾದ ಲಕ್ಷಣೆಯನ್ನೂ ಬಲರಾಮನವಶಕ್ಕೆ ಒಪ್ಪಿಸಿಕೊಟ್ಟನು. ಆಗ ಬಲರಾಮನು ಅವೆಲ್ಲವನ್ನೂ ಸಂತೋಷದಿಂದ ಸ್ವೀಕರಿಸಿ, ಆ ಕೌರವರ ನ್ನು ಸ್ನೇಹಭಾವದಿಂದ ಮನ್ನಿಸಿ, ಮಗನಾದ ಸಾಂಬನನ್ನೂ , ಸೊಸೆಯನ್ನೂ ತನ್ನೊಡನೆ ಕರೆದುಕೊಂಡು ಬ್ಯಾರಕಗೆ ಬಂದನು.ಆಮೇಲೆ ಇತ್ತಲಾಗಿ ರಾಜ ಸಭೆಯಲ್ಲಿ ನೆರೆದಿದ್ದ ಸಮಸ್ತ ಜನಗಳಿಗೂ ತಾನು ನಡೆಸಿಬಂದ ಕಾರಗಳೆಲ್ಲ ವನ್ನೂ ಆಮೂಲಾಗ್ರವಾಗಿ ತಿಳಿಸಿದನು, ಬಲರಾಮನ ಅದ್ಭುತಮಹಿಮೆ ಯನ್ನು ಕೇಳಿ ಯಾ ದವರೆಲ್ಲರೂ ಅವನನ್ನು ಕೊಂಡಾಡುತಿದ್ದರು. ಓ! ಪರೀ ಕಿದ್ವಾಜಾ ! ನಿಮಗೆ ರಾಜಧಾನಿಯೆನಿಸಿಕೊಂಡ ಹಸ್ತಿನಾಪುರವು ಈಗಲೂ ಆ ಬಲರಾಮನ ಮಹಿಮೆಯನ್ನು ಜನಗಳಿಗೆ ಸೂಚಿಸುವಂತೆ, ದಕ್ಷಿಣ ದಿಕ್ಕಿನಲ್ಲಿ ಗಂಗಾನದಿಯ ಕಡೆಗೆ ಚಾಚಿಕೊಂಡಿರುವುದನ್ನು ನೋಡಬಹುದು” ಎಂದನು. ಇದು ಅರುವತ್ತೆಂಟನೆಯ ಅಧ್ಯಾಯವು. w ನಾರದಮಹರ್ಷಿಯು ಶ್ರೀಕೃಷ್ಣನಬಳಿಗೆ ಬಂದುದು +w ಓ ಪರೀಕ್ಷಿದ್ರಾಜಾ ! ಕೇಳು ! ನರಕಾಸುರನು ಕೃಷ್ಣನಿಂದ ಹತ ನಾದುದನ್ನೂ, ಅವನ ಮನೆಯಲ್ಲಿದ್ದ ಹದಿನಾರುಸಾವಿರಮಂದಿ ರಾಜಕನ್ಯ ಯರನ್ನೂ ಕೃಷ್ಣನೊಬ್ಬನೇ ವಿವಾಹಮಾಡಿಕೊಂಡು, ಅವರೊಡನೆ ಗೃಹಸ್ಸ ಧರವನ್ನು ನಡೆಸುತ್ತಿರುವುದನ್ನೂ ಕೇಳಿ ನಾರದನಿಗೆ, ಆ ಕೃಷ್ಣನ ಕುಟುಂ ಬಲೀಲೆಯನ್ನು ನೋಡಬೇಕೆಂಬ ಕುತೂಹಲವು ಹುಟ್ಟಿತು (t ಆಹಾ!ಇದಲ್ಲ.