ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ودود ಶ್ರೀಮದ್ಭಾಗವತವು [ಅಧ್ಯಾ, ೩೯. ಕೃ ಉಪ್ಪರಿಗೆಗಳುಕಂಗೊಳಿಸುತ್ತಿರುವುವು.ಅದು ಕೃಷ್ಣಪತ್ನಿ ಯರ ಅಂತಃಪುರ ವೆಂಬುದನ್ನು ತಿಳಿದು, ನಾರದನು, ಅವುಗಳಲ್ಲಿ ತನ್ನ ಮನಸ್ಸಿಗೊಪ್ಪಿದ ಒಂದಾ ನೊಂದು ಸಣ್ಣ ಮನೆಯನ್ನು ಪ್ರವೇಶಿಸಿದನು, ಅಲ್ಲಿನ ಸೊಬಗನ್ನು ಕೇಳಬೇಕೆ? ಸುತ್ತಲೂ ಹವಳದ ಕಂಬಗಳು ! ಅದರಮೇಲೆ ವೈಡೂರದ ಹಲಗೆಗಳು! ಇಂದ್ರನೀಲದ ಕಿಟಿಕಿಗಳು! ಆ ಕಿಟಿಕಿಗಳಲ್ಲಿ ಮರಕತದ ಸಲಾ ಕಿಗಳು ! ಮುತ್ತಿನ ಕುಚ್ಚು ಗಳಿಂದ ಚಿತ್ರಿತವಾಗಿ ವಿಶ್ವಕರ್ಮನ ಪೂ ರ್ಣಚಮತ್ಕಾರದಿಂದ ನಿರ್ಮಿತಗಳಾದ ಮೇಲುಕಟ್ಟುಗಳು ! ಎಲ್ಲಿನೋಡಿ ದರೂ ರತ್ನಖಚಿತಗಳಾದ ಮಂಚಗಳು ! ಅದರಮೇಲೆ ಸ್ವಚ್ಛವಾದ ಮೇಲುಹೊದ್ದಿಕೆಗಳು! ಮನೆಯ ನಾನಾದಿಕ್ಕುಗಳಲ್ಲಿಯೂ, ಸ್ವರ್ಣಾ ಭರಣಗಳಿಂದಲೂ, ಶುದ್ಧ ಮಕೂಲಗಳಿಂದ ಅಲಂಕೃತರಾಗಿ ಕೆಲಸ ಮಾಡುತ್ತಿರುವ ದಾದಿಯರು! ಅಲ್ಲಲ್ಲಿ ಸಿಲುವಂಗಿಗಳಿಂದಲೂ, ತಲೆಪಾಗುಗ ಳಿಂದಲೂ, ಪಟ್ಟಿ ಮಡಿಗಳಿಂದಲೂ, ರತ್ನ ಕುಂಡಲಗಳಿಂದಲೂ ಅಲಂಕೃತ ರಾಗಿ ತಿರುಗುತ್ತಿರುವ ಸೇವಕಜನರು, ಕತ್ತಲೆಯ ಸ್ವರೂಪವನ್ನೇ ಕಾಣಿಸ ದಂತೆ ಅನವರತವೂ ಬೆಳಗುತ್ತಿರುವ ರತ್ನ ದೀಪಗಳು! ಮತ್ತು ಆ ಮನೆಯ ಮುಂದಿನ ವಾರಗಳಲ್ಲಿ, ಗವಾಕ್ಷದಿಂದ ಹೊರಟು ಬರತಕ್ಕ ಆಗರು ಧೂಪ ವನ್ನು ನೋಡಿ ನವಿಲುಗಳು, ವರ್ಷೋನ್ಮುಖವಾದ ಮೇಘುವೆಂದು ಭ್ರಮಿ ಸಿ, ಸಂತೋಷದಿಂದ ಕೂಗಿ ಕುಣಿದಾಡುತ್ತಿರುವುವು. ಇಂತಹ ಮನೆಯೊಳಗೆ ಪ್ರವೇಶಿಸಿದೊಡನೆಯೇ ನಾರದನು, ಅಲ್ಲಿ ಮಂಚದಮೇಲೆ ಕುಳಿತಿದ್ದ ಕೃಷ್ಣ ನನ್ನು ಕಂಡನು, ಆವನಸಮೀಪದಲ್ಲಿ ರುಕ್ಷ್ಮಿಣೀದೇವಿಯು,ಗುಣದಲ್ಲಿಯೂ,ರೂ ಪದಲ್ಲಿಯೂ, ವಯಸ್ಸಿನಲ್ಲಿಯೂ ತನಗೆ ಸಮಾನರಾದ ಸಾವಿರಾರುಮಂದಿ ಗೌಡಿಯರೊಡನೆ ಸುವರ್ಣದಂಡವುಳ್ಳ ಚಾಮರವನ್ನು ಹಿಡಿದು ಆ ಕೃಷ್ಣ ನಿಗೆ ಬೀಸುತ್ತಿದ್ದಳು. ಹೀಗಿರುವಾಗ ಕೃಷ್ಣನು, ತನ್ನಲ್ಲಿಗೆ ನಾರದ ಮಹರ್ಷಿಯು ಬಂದುದನ್ನು ಕಂಡೊಡನೆ, ಥಟ್ಟನೆ ತಾನು ಕುಳಿತಿದ್ದ ಆಸನ ದಿಂದ ಮೇಲೆದ್ದು, ಮುಂದೆ ಬಂದು, ಆ ಮಹರ್ಷಿಯ ಪಾದಗಳಿಗೆ ತನ್ನ ಕಿರೀಟವು ಸೋಕುವಂತೆ ನಮಸ್ಕರಿಸಿದನು, ಆತನನ್ನು ಕರೆತಂದು,ತನ್ನ ಆಸನದಲ್ಲಿ ಕುಳ್ಳಿರಿಸಿ ಆತನಪಾದಗಳನ್ನು ತನ್ನ ಕೈಯಿಂದ ತೊಳೆದನು ತಾನೇ