ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೭ ಅಧ್ಯಾ, ೩೯.] ದಶಮಸ್ಕಂಧವು. ಸರೋತ್ತಮನೆನಿಸಿಕೊಂಡಿದ್ದರೂ, ಆ ಮಹರ್ಷಿಯ ಪಾದತೀರ್ಥವನ್ನು ತನ್ನ ತಲೆಗೆ ಪ್ರೋಕ್ಷಿಸಿಕೊಂಡನು. ಓ ! ಪರೀಕ್ಷಿದ್ರಾಜಾ ! ಯಾವನ ಪಾದಸಂಬಂಧದಿಂದಲೇ ಗಂಗಾದಿತೀರ್ಥಗಳೂ ಲೋಕಪಾವನವೆನಿಸಿ ಕೊಂಡಿರುವವೋ, ಅಂತಹ ಶ್ರೀಕೃಷ್ಣನು, ನಾರದನ ಪಾದತೀರ್ಥವನ್ನು ತಲೆಯಲ್ಲಿ ಧರಿಸಿದುದು ಅವನ ಪವಿತ್ರತೆಗಾಗಿಯೇ ಎಂದು ತಿಳಿಯಬೇಡ! ತನಗೆ ಬ್ರಾಹ್ಮಣರಲ್ಲಿರುವ ವಿಶೇಷವಾದ ಪ್ರೀತಿವಿಶ್ವಾಸಗಳನ್ನು ಲೋಕ ಕೈ ತೋರಿಸುವುದಕ್ಕಾಗಿಯೂ, ತನಗೆ ಬ್ರಹ್ಮಣ್ಯದೇವನೆಂದು ಲೋಕ ಪ್ರಸಿದ್ದವಾದ ಹೆಸರನ್ನು ಸಾರ್ಥಕಗೊಳಿಸಬೇಕೆಂಬ ಉದ್ದೇಶದಿಂದಲೂ, ಹೀಗೆ ಮಾಡಿದನೆಂದು ತಿಳಿ ! ಆ ಭಗವಂತನು ನರನಾರಾಯಣಾವತಾರದಲ್ಲಿ ತಾನೇ ಪುರಾತನಮಹರ್ಷಿಯೆನಿಸಿಕೊಂಡಿದ್ದರೂ, ದೇವರ್ಷಿಯಾದ ನಾರ ದನನ್ನು ವಿಧ್ಯುಕ್ತವಾಗಿ ಪೂಜಿಸಿ, ಅಮೃತಸಮಾನವಾದ ಮಿತಭಾಷಣ ದಿಂದ ಅವನನ್ನು ಮಾತಾಡಿಸುತ್ತ ( ಸ್ವಾಮೀ ! ಪೂಜ್ಯರಾದ ತಮಗೆ ಈಗ ನನ್ನಿಂದ ಆಗಬೇಕಾದ ಕಾಲ್ಯವೇನುಂಟು ! ಅವಶ್ಯವಾಗಿ ತಿಳಿಸಬೇಕು!” ಎಂದನು. ಅದಕ್ಕಾನಾರದನು, “ಓ ಪ್ರಭೂ! ಸಮಸ್ತಲೋಕಕ್ಕೂ ನೀನೇ ಪಾಲಕನಾದುದರಿಂದ, ನಿನಗೆ ಸಮಸ್ತಜನರಲ್ಲಿಯೂ ಈ ವಿಧವಾದ ಪ್ರೇಮವೂ, ದುಷ್ಯನಿಗ್ರಹವೂ, ಸಹಜವೇಹೊರತು ಇದರಲ್ಲಿ ಆಶ್ಚಯ್ಯ ವೇನೂ ಕಾಣುವುದಿಲ್ಲ ! ನೀನು ಸೈಜ್ಞೆಯಿಂದ ಪರಿಗ್ರಹಿಸತಕ್ಕ ಇಂತಹ ಅವತಾರಗಳೆಲ್ಲಕ್ಕೂ, ಈ ಪ್ರಪಂಚವನ್ನು ಧರಿಸುವುದು, ಅದನ್ನು ರಕ್ಷಿಸು ವುದು, ಆಶ್ರಿತರಿಗೆ ಮೋಕ್ಷವನ್ನು ಕೊಡುವುದು, ಇವೇ ಮುಖ್ಯಪ್ರಯೋ ಜನಗಳೆಂಬುದನ್ನು ನಾನು ಬಲ್ಲೆನು. ಆದುದರಿಂದ ದುಷ್ಟನಿಗ್ರಹಶಿಷ್ಯ ಪರಿಗ್ರಹಗಳೆರಡೂ ನಿನಗೆ ಯುಕ್ತವೇ ! ನಿನ್ನಿಂದ ನನಗೆ ಆಗಬೇಕಾದುದೇ ನೆಂದು ಕೇಳಿದೆಯಲ್ಲವೆ? ಪ್ರಸನ್ನರಿಗೆ ಮೋಕ್ಷಪ್ರದವಾಗಿಯೂ, ಬ್ರಹ್ಮಾದಿ ಯೋಗೀಶ್ವರರಿಗೂ ಪ್ರತ್ಯಕ್ಷವಲ್ಲದೆ ಕೇವಲ ಧ್ಯಾನಮಾತ್ರವಿಷಯವಾ ಗಿಯೂ, ಅಗಾಧವಾದ ಜ್ಞಾನಕ್ಕೆ ಆಶ್ರಯವಾಗಿಯೂ, ಸಂಸಾರವೆಂಬ ಕೂಪದಲ್ಲಿ ಬಿದ್ದವರನ್ನು ಕರೆಯೇರಿಸತಕ್ಕುದಾಗಿಯೂ ಇರುವ, ಈ ನಿನ್ನ ದಿವ್ಯಪಾದಾರವಿಂದಗಳನ್ನು ಈಗ ನಾನು ಪ್ರತ್ಯಕ್ಷವಾಗಿ ಕಂಡೆನಲ್ಲವೆ ?