ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೦ ಅಧ್ಯಾ. ೬೯. ದಶಮಸ್ಕಂಧವು. ಷಾನ್ನವನ್ನು ಭಕ್ತಿಯಿಂದ ಭುಜಸುತ್ತಿರುವನು, ಮತ್ತೊಂದು ಮನೆಯಲ್ಲಿ ಆಗಲೇ ಸಂಧ್ಯಾವಂದನೆಗಾಗಿ ಕುಳಿತಿರುವನು, ಮತ್ತೊಂದುಮನೆಯಲ್ಲಿ ವೇದಮಂತ್ರವನ್ನು ಜಪಿಸುತ್ತಿರುವನು. ಇನ್ನೊಂದು ಮನೆಯಲ್ಲಿ ಮೂಗನ್ನು ಹಿಡಿದು ಮೌನವ್ರತದಿಂದ ಆತ್ಮಧ್ಯಾನದಲ್ಲಿ ಕುಳಿತಿರುವನು, ಮತ್ತೊಂದು ಮನೆಯಲ್ಲಿ ಕತ್ರಿಗುರಾಣಿಗಳನ್ನು ಹಿಡಿದು ಕತ್ತಿಯ ವರಸೆಗಳನ್ನು ಅಭ್ಯಸಿಸು ತಿರುವನು, ಮತ್ತೊಂದು ಮನೆಯಲ್ಲಿ, ಆನೆ, ಕುದುರೆ, ರಥ, ಮೊದಲಾದ ವಾಹನಗಳನ್ನೇರಿ, ಅವುಗಳನ್ನು ಚಮತ್ಕಾರವಾಗಿ ನಡೆಸುತ್ತಿರುವನು. ಮತ್ತೊಂದು ಮನೆಯಲ್ಲಿ ಮಂಚದಮೇಲೆ ಸುಖವಾಗಿ ಮಲಗಿ ಸ್ತುತಿ ಪಾಠಕರಿಂದ ಸ್ತುತಿಸಲ್ಪಡುವನು, ಮತ್ತೊಂದು ಮನೆಯಲ್ಲಿ ಉದ್ಯವಾದಿ ಮಂತ್ರಿಗಳೊಡನೆ ಕಲೆತು ಮಂತ್ರಾಲೋಚನೆಯನ್ನು ನಡೆಸುತ್ತಿರುವನು. ಇನ್ನೊಂದು ಮನೆಯಲ್ಲಿ ವಾರಸ್ತಿಯರೊಡನೆ ಜಲಕ್ರೀಡೆಯನ್ನಾಡುತ್ತಿರು ವನು, ಇನ್ನೊಂದುಮನೆಯಲ್ಲಿ ಬ್ರಾಹ್ಮಣರಿಗೆ ಗೋದಾನಗಳನ್ನು ನಡೆಸು ತಿರುವನು. ಇನ್ನೊಂದುಮನೆಯಲ್ಲಿ ಬ್ರಾಹ್ಮಣರಮಲಕವಾಗಿ ಇತಿ ಹಾಸಪುರಾಣಗಳನ್ನೂ , ಮಂಗಳಚರಿತ್ರಗಳನ್ನೂ ಭಕ್ತಿಯಿಂದ ಕೇಳುತ್ತಿರು ವನು, ಮತ್ತೊಂದುಮನೆಯಲ್ಲಿ ತನ್ನ ಪ್ರಿಯೆಯೊಡನೆ ಹಾಸ್ಯದ ಮಾತುಗಳ ನ್ಯಾಡಿ ನಗುತ್ತಿರುವನು.ಒಂದುಮನೆಯಲ್ಲಿ ಧರ್ಮಗಳನ್ನು ನಡೆಸುತ್ತಿರುವನು ಇನ್ನೊಂದು ಮನೆಯಲ್ಲಿ ಅರ್ಧ ಕಾಮಗಳನ್ನು ಸೇವಿಸುತ್ತಿರುವನು, ಇನ್ನೊ೦ ದುಮನೆಯಲ್ಲಿ ಜೀವಪ್ರಕೃತಿಗಳಿಗಿಂತಲೂ ಬೇರೆಯಾದ ಪರಮಪುರುಷನ ದಿವ್ಯಾತ್ಮಸ್ವರೂಪವನ್ನು ಧ್ಯಾನಿಸುತ್ತಿರುವನು. ಇನ್ನೊಂದು ಮನೆಯಲ್ಲಿ ಗುರುಶುಶ್ರತೆಯನ್ನು ಮಾಡುತ್ತ, ಅವರಿಗೆ ಬೇಕಾದ ಕೋರಿಕೆಗಳನ್ನೂ ಭೋಗಸಾಮಗ್ರಿಗಳನ್ನೂ ಒದಗಿಸುತ್ತಿರುವನು, ಮತ್ತೊಂದು ಮನೆಯಲ್ಲಿ ತನಗೆ ಸಮಾನಸ್ಕಂಧರಾದ ಕೆಲವು ಪುರುಷರೊಡನೆ ಜಗಳವಾಡುತ್ತಿರುವನು. ಮತ್ತೊಂದುಕಡೆಯಲ್ಲಿ ಜಗಳವಾಡತಕ್ಕವರಿಗೆ ಸಮಾಧಾನಹೇಳಿ ಸಂಧಿ ಯನ್ನು ಮಾಡುತ್ತಿರುವನು, ಮತ್ತೊಂದುಮನೆಯಲ್ಲಿ ಬಲರಾಮನೊಡನೆ ಕಲೆತು,ಸಾಧುಗಳಿಗೆ ಕ್ಷೇಮಕರವಾದ ಆಲೋಚನೆಯನ್ನು ನಡೆಸುತ್ತಿರುವನು. ಇನ್ನೊಂದುಮನೆಯಲ್ಲಿ, ತನ್ನ ಗಂಡುಮಕ್ಕಳಿಗೆ ಅನುರೂಪರಾದ ವಧುಗಳೊ