ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೮ ನ, ನಾರದಾಗಮನದ •w ಶ್ರೀಮದ್ಭಾಗವತವು [ಅಧ್ಯಾ, ೬೦. ೮ ಜರಾಸಂಧನ ನಿರ್ಬಂಧದಲ್ಲಿದ್ದ ರಾಜರು ಕೃಷ್ಣನಿಗೆ | +1 ಸಂದೇಶವನ್ನು ಕಳುಹಿಸಿದುದು, ನಾರದಾಗಮನವು ) | ಓ ಪರೀಕ್ಷಿದ್ರಾಜಾ' ! ಹೀಗೆ ಕೃಷ್ಣನು ಹದಿನಾರುಸಾವಿರಮಂದಿ ರಾಜಕುಮಾರಿಯರೊಡನೆ ಕುಟುಂಬಥರ ವನ್ನು ನಡೆಸುತಿದ್ದಾಗ, ಅವನ ದಿನ ಚರೈಯನ್ನು ತಿಳಿಸುವೆನು ಕೇಳು ! ರಾತ್ರಿಯಲ್ಲಿ ಕೃಷ್ಣನು ಆ ಸ್ತ್ರೀ ಯರೊಡನೆ ಸುಖಶಯ್ಕೆಯಲ್ಲಿದ್ದು, ಬೆಳಗಿನ ಜಾವದಲ್ಲಿ, ಮೊದಲನೇ ಕೋ ಆಯು ಕೂಗಿದೊಡನೆ ಎಚ್ಚರಗೊಳ್ಳುವನು. ಆಗ ಕೃಷ್ಣನ ಕಂಠವನ್ನು ದೃಢವಾಗಿ ಆಲಿಂಗಿಸಿಕೊಂಡು ಪರಮಾನಂದದಿಂದ ಮಲಗಿದ್ದ ಆ ಸೀ ಯರೆಲ್ಲರೂ, ಆತನ ಅಗಲಿಕೆಯನ್ನು ಸಹಿಸಲಾರದೆ ತಮ್ಮೊಳಗೆ ತಾವು ಯ್ಯೋ ! ಈ ಹಾಳುಕೋಳಿಗಳು ಈಗಾಗಲೇ ಕೂಗುತ್ತಿರುವುವಲ್ಲಾ!” ಎಂದು ಅವುಗಳನ್ನು ಶಪಿಸುವರು. ಸ್ವಲ್ಪ ಹೊತ್ತಿನೊಳಗಾಗಿಯೇ ರೈ ಹೋದ್ಯಾನದಿಂದ ಮಂದಾರಪುಷ್ಪಗಳ ಸುಗಂಧದೊಡನೆ ಬೆಳಗಿನ ಗಾಳಿ ಯು ತಂಪಾಗಿ ಬೀಸುತ್ತ, ಅದರೊಡನೆ ಭ ಮರಝಂಕಾರಗೆ ಳು ಕೇಳಿಬರುವುವು, ಕೃಷ್ಣನನ್ನು ಸುಪ್ರಭಾತಸ್ತುತಿಗಳಿಂದ ಎಚ್ಚರಗೊಳಿ ಸುವುದಕ್ಕಾಗಿ ಬಂದ ಸ್ತುತಿಪಾಠಕರಂತೆ, ವನಪಕ್ಷಿಗಳು ಕಿವಿಗಿಂಪಾಗಿ ಕೂಗುವುವು, ಪ್ರಭಾತಸಮಯವು ಹೀಗೆ ಸಜನಮನೋರಂಜಕವಾ ಗಿದ್ದರೂ, ಶ್ರೀಕೃಷ್ಣನ ಭುಜಗಳಿಂದ ಆಲಿಂಗಿತರಾಗಿ ಮಲಗಿದ್ಯ ರುಕ್ಕಿಣಿ ಮೊದಲಾದ ಸ್ತ್ರೀಯರಿಗೆ, ಆ ಸುಖವು ತಪ್ಪಿ ಹೋಗುವುದೆಂಬ ಭಯದಿಂದ, ಆಕಾಲವೂ ಮನಸ್ಸಿಗೆ ಬಹಳ ಅಸಮರ್ಪಕವಾಗಿಯೇ ತೋರುವುದು, ಹೀಗೆ ಬೆಳಗಾಗುವುದಕ್ಕೆ ಮೊದಲು,ಬ್ರಾಹ್ಮಮುಹೂರ್ತದಲ್ಲಿಯೇ ಕೃಷ್ಣನುಹಾಸಿಗೆ ಯಿಂದೆದ್ದು,ಆಚಮನಾದಿಗಳಿಂದ ಶುದ್ಧನಾಗಿ, ಪ್ರಕೃತಿಗಿಂತಲೂ ವಿಲಕ್ಷಣ ವಾಗಿಯೂ ತನಗೆ ಮೇಲಾದ ಆಥವಾ ಸಮಾನವಾದ ಬೇರೆ ವಸ್ತುವಿಲ್ಲದುದಾ ಗಿಯೂ, ಸ್ವಯಂಪ್ರಕಾಶವಾಗಿಯೂ,ಸಮಸ್ತ ಜಗತ್ತನ್ನೂ ತನಗೆ ಶರೀರವಾ ಗಿ ಹೊಂದಿರುವುದರಿಂದ ಎಲ್ಲವೂ ತಾನೇ ಆಗಿಯೂ, ಜಾಡ್ಯಾಡಿಕಲ್ಪನೆಗಳಿ ಲ್ಲದುದರಿಂದ ಅವ್ಯಯವಾಗಿಯೂ, ಪಾಪಪುಣ್ಯಗಳ ಸಂಬಂಧವಿಲ್ಲದುದರಿಂದ ನಿಷ್ಕಲ್ಮಷವಾಗಿಯೂ, ನಿರ್ವಿಕಾರವಾಗಿಯೂ, ಈ ಪ್ರಪಂಚದ ಉತ್ಪತ್ತಿ