ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨O೯೦ ಶ್ರೀಮದ್ಭಾಗವತವು [ಅಧ್ಯಾ, ೫೦. ತಕ್ಕವನಲ್ಲ, ಹಿಂದೆ ಹೋಗು!ನೀನು ಸೋದರಮಾವನನ್ನೇ ಕೊಂದ ಮಹಾ ಪಾಪಿಯು! ಮತ್ತು ಮೂಢನು, ಮಹಾಪರಾಕ್ರಮಿಗಳು ಸಣ್ಣ ಮಕ್ಕಳೊಡ ನೆ ಯುದ್ಧಕ್ಕೆ ನಿಲ್ಲುವಂತೆ, ನಿನ್ನೊಡನೆ ಯುದ್ಧಕ್ಕೆ ನಿಲ್ಲುವುದು ನನಗೆ ಲಜ್ಞಾ ವಹವಾಗಿರುವುದು, ನಿನ್ನ ಬಂಧುಗಳಲ್ಲಿ ಯಾರನ್ನಾದರೂ ಮುಂದೆ ನಿಲ್ಲಿಸಿ ನೀನು ತಲೆತಪ್ಪಿಸಿಕೊಂಡು ಹೋಗು ” ಎಂದು ಹೇಳಿ ಬಲರಾಮನಕಡೆಗೆ ತಿ ರುಗಿ, c« ಓ ರಾಮಾ ! ನಿನಗೆ ನನ್ನೊಡನೆ ಯುದ್ಧ ಮಾಡಬೇಕೆಂಬ ಅಕ್ಕರೆ ಯಿದ್ದ ಪಕ್ಷದಲ್ಲಿ, ದೈತ್ಯದಿಂದ ಮುಂದೆಬಂದು ನಿಲ್ಲು ! ನಿನ್ನ ಶಕ್ತಿಯಿದ್ದಹಾ ಗೆ ಯುದ್ಧ ಮಾಡು. ನನ್ನ ಬಾಣಗಳಿಂದ ಹತನಾಗಿ ವೀರಸ್ವರ್ಗವನ್ನು ಹೊಂ ದು! ಹಾಗಿಲ್ಲವೇ ನಿನ್ನ ಪರಾಕ್ರಮದಿಂದ ನನ್ನನ್ನು ಕೊಲ್ಲು ” ಎಂದನು. ಆಗ ಶ್ರೀಕೃಷ್ಣನು ಮದೋನ್ಮತ್ತನಾದ ಆ ಜರಾಸಂಧನ ವೀರವಾದಗಳನ್ನು ಕೇಳಿ, « ಎಲೆಮೂಢಾ!ಶೂರರಾದವರು ಎಂದಿಗೂ ಹೀಗೆ ಆತ್ಮಸ್ತುತಿಮಾಡಿ ಕೊಳ್ಳಲಾರರು, ಕಾಠ್ಯದಿಂದ ತಮ್ಮ ಪೌರುಷವನ್ನು ತೋರಿಸತಕ್ಕವರೇ ಥೀ ರರು, ಅಥವಾ ಮರಣೋನ್ಮುಖರಾದವರು ಬಾಯಿಗೆ ಬಂದಂತೆ ಬಗುಳುವು ದೂ ಸಹಜವೇ. ಅದರಂತೆಯೇ ಈಗಲೂ ನೀನು ಸಾಯುವುದಕ್ಕಾಗಿಯೇ ಇಲ್ಲಿ ಬಂದವನಾದುದರಿಂದ, ಅಸಂಬದ್ಧ ಪ್ರಲಾಪವನ್ನು ಮಾಡುವಹಾಗಿದೆ. ಈ ನಿನ್ನ ಮಾತುಗಳಿಗೆ ನಾವು ಕಿವಿಗೊಡತಕ್ಕವರಲ್ಲ. ಶಾಲ್ಯವಿದ್ದರೆ ಮುಂದೆ ಬಾ!” ಎಂದನು. ಓ! ಪರೀಕ್ಷಿದ್ರಾಜಾ ! ಈ ಮಾತನ್ನು ಕೇಳಿದೊಡನೆ ಜರಾ ಸಂಧು, ತನ್ನ ದೊಡ್ಡ ಸೈನ್ಯವನ್ನು ಮುಂದೆಬಿಟ್ಟುಕೊಂಡು ಆ ರಾಮಕೃಷ್ಣ ರನ್ನು ಇದಿರಿಸಿನಿಂತನು, ವಾಯುವು ಮೇಫುಗಳಿಂದ ಸೂರನನ್ನೂ, ಧೂಳು ಗಳಿಂದ ಅಗ್ನಿ ಯನ್ನೂ ಮರೆಸುವಂತೆ, ಜರಾಸಂಧನು ಆ ರಾಮಕೃಷ್ಣರಿಬ್ಬರ ನ್ಯೂ ಬಾಣಪರಂಪರೆಯಿಂದ ಮುಚ್ಚಿ, ಅವರ ರಥವಾಗಲಿ, ರಥಾಶ್ರವಾಗಲಿ ಧ್ವಜವಾಗಲಿ, ಸೈನ್ಯಗಳಾಗಲಿ ಯಾವುದೂ ಕಣ್ಣಿಗೆ ಕಾಣದಂತೆ ಮಾಡಿಬಿ “ನು, ಆಗ ಮದುರಾಪುರದಲ್ಲಿ ಉಪ್ಪರಿಗೆಗಳನ್ನೂ , ಅಟ್ಟಲೆಗಳನ್ನೂ, ಗೋ ಪುರಗಳನ್ನೂ ಏರಿ, ಈ ಯುದ್ಧವನ್ನು ಅತ್ಯಾತುರದಿಂದ ನೋಡುತ್ತಿದ್ದ ಪುರ ಸ್ತ್ರೀಯರೆಲ್ಲರೂ, ತಾಲಧ್ವಜ ಗರುಡಧ್ವಜಗಳಿಂದ ಶೋಭಿತಗಳಾದ ರಾಮಕೃ ಹರ ರಥಗಳೆರಡೂ ಜರಾಸಂಧನ ಬಾಣಪರಂಪರೆಗಳಲ್ಲಿ ಮರೆಸಿಹೋದುದ