ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾ, ೩೦.] ದಶಮಸ್ಕಂಧವು. ೨೨೩೯ ಸ್ಥಿತಿಲಯಗಳಿಗೆ ಕಾರಣವೆನಿಸಿಕೊಂಡ ನಿಜಧರ್ಮಗಳಿಂದ ಕೂಡಿ, ಸತ್ಯಜ್ಞಾ ನಾನಂದಸ್ವರೂಪವಾಗಿಯೂ ಇರುವ ಪರಬ್ರಹ್ಮಾತ್ಮಕವಾದ ತನ್ನ ಸ್ವರೂಪವನ್ನೇ ತಾನು ಧ್ಯಾನಮಾಡುತ್ತ ಕುಳ್ಳಿರುವನು. ಆಮೇಲೆ ಶುದ್ಧ ಜಲದಲ್ಲಿ ಸ್ನಾನಮಾಡಿ, ಶಾಸ್ಕೂಕ್ತವಾದ ಕರ್ಮಗಳನ್ನು ನಡೆಸಿ, ದೌತೆ ವಸ್ತ್ರಗಳನ್ನು ಧರಿಸಿ, ಸಂಧ್ಯಾವಂದನಾದಿಗಳನ್ನು ನಡೆಸುವನು. ಅಗ್ನಿ ಹೋ ತ್ರಕಾರಗಳನ್ನು ಮಾಡಿದಮೇಲೆ ಮೌನದಿಂದ ಗಾಯತ್ರಿಯನ್ನೂ ಜಪಿಸುವ ನು, ಆಗಲೇ ಉದಿಸಿಬರುವ ಸೂರನಿಗಿದಿರಾಗಿ ನಿಂತು, ಉಪಸ್ಥಾನವನ್ನು ಮಾ ಡುವನು, ತನಗೆ ಅಂಶಭೂತರಾದ ದೇವತೆಗಳನ್ನೂ, ಋಷಿಗಳನ್ನೂ, ಪಿತೃ ದೇವತೆಗಳನ್ನೂ, ಗುರುಹಿರಿಯರನ್ನೂ, ಬ್ರಾಹ್ಮಣರನ್ನೂ ವಿಧ್ಯುಕ್ತವಾಗಿ ತರ್ಪಣಾದಿಗಳಿಂದ ಪೂಜಿಸುವನು. ಆಮೇಲೆ ಉತ್ತಮರಾದ ಬ್ರಾಹ್ಮಣರನ್ನು ಕರೆಸಿ, ಅವರನ್ನು ವಸ್ತಾದಿಗಳಿಂದಲಂಕರಿಸಿ, ಅವರಿಗೆ ಸುವರ್ಣಶೃಂಗಗಳಿಂ ದಲೂ, ಬೆಳ್ಳಿಯ ಗೊರಸಲುಗಳಿಂದಲೂ, ಉತ್ತಮವಸ್ತ್ರಗಳಿಂದಲೂ, ಅಲಂಕೃತಗಳಾದ, ಆಗಲೇ ಕರುಹಾಕಿದ, ಅನೇಕಗೋವುಗಳನ್ನು ದಾನಮಾ ಡುವನು, ಮತ್ತು ಅನೇಕ ಬ್ರಾಹ್ಮಣರಿಗೆ ಭೌತವಸ್ತ್ರಗಳು, ಕೃಷ್ಣಾಜಿನಗಳು ಎಳ್ಳು, ಮೊದಲಾದ ಸಾಮಗ್ರಿಗಳೊಡನೆ ಒಂದೊಂದುದಿನವೂ ಒಂದೊಂ ದುಪದ್ಮ ಸಂಖ್ಯೆಯುಳ್ಳ ಸುವರ್ಣವನ್ನು ದಾನಮಾಡುವನು. ಹಾಗೆಯೇ ಗೋಬ್ರಾಹ್ಮಣರನ್ನೂ, ಗುರುಗಳನ್ನೂ, ವೃದ್ಧರನ್ನೂ, ಸಮಸ್ತಭೂತಗಳ ನ್ಯೂ ನಮಸ್ಕರಿಸಿಬರುವನು. ಕಪಿಲೆ ಮೊದಲಾದ ಮಂಗಳವಸ್ತುಗಳನ್ನು ಕೈ ಯಿಂದ ಸ್ಪರ್ಶಿಸಿಸುವನು.ಸಮಸ್ತಲೋಕಕ್ಕೂ ತಾನೇಭೂಷಣವಾಗಿದ್ದರೂ ಗಂಧ, ಪುಷ್ಪ, ವಸ್ತ್ರಾಭರಣಗಳಿಂದ ತನ್ನ ದೇಹವನ್ನಲಂಕರಿಸಿಕೊಳ್ಳುವನು. ತನ್ನ ಅಂತಃಪುರದಲ್ಲಿಯೂ, ಪಟ್ಟಣದಲ್ಲಿಯೂ, ದೇಶದಲ್ಲಿಯೂ ಇರ ತಕ್ಕ ಸಮಸ್ತವರ್ಣದವರಿಗೂ,ಮಂತ್ರಿ ಮೊದಲಾದ ಪ್ರಕೃತಿಗಳಿಗೂ, ಆವ ರವರಿಗೆ ಬೇಕಾದ ಇಷ್ಟವಸ್ತುವನ್ನು ಕೊಡಿಸಿ ತೃಪ್ತಿಪಡಿಸುವನು, ಮತ್ತು ಬ್ರಾಹ್ಮಣರನ್ನು ಸಾಲಾಗಿ ತನ್ನ ಮುಂದೆ ಕುಳ್ಳಿರಿಸಿ, ಅವರನ್ನು ಗಂಧಪುಷ್ಟ ತಾಂಬೂಲಾದಿಗಳಿಂದ ಪೂಜಿಸುವನು, ಆಮೇಲೆ ಪ್ರಾತಃಕಾಲದಲ್ಲಿ ಮಂಗ ಳಾರ್ಥವಾಗಿ ನೋಡಬೇಕಾದ ತುಪ್ಪ, ಕನ್ನಡಿ, ಗೋವುಗಳು, ಬ್ರಾಹ್ಮ