ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೨ ಶ್ರೀಮದ್ಭಾಗವತವು [ಅಧ್ಯಾ, ೭೦. ಪಾತ್ರರಾಗಿ ದುಃಖಿಸುವುದೇಕೆಂದರೆ, ಅವರು ನಿನ್ನ ಆಜ್ಞೆಯನ್ನು ಮೀರಿ ನಡೆದುದರಿಂದಲೋ, ಅಥವಾ ತಮ್ಮ ಪಾಪಫಲದಿಂದಲೋ ಹಾಗೆ ದುಃಖ ಭಾಗಿಗಳಾಗಿರಬೇಕು.ಇದುಹೊರತು ಬೇರೆ ಕಾರಣವೇನೂ ನಮಗೆ ತೋರುವು ದಿಲ್ಲ. ದೇವಾ ! ಈಗ ನಾವು ಜರಾಸಂಧನ ನಿರ್ಬಂಧದಲ್ಲಿ ಸಿಕ್ಕಿ ಆ ದುಃಖನಿವೃತ್ತಿಗಾಗಿಮಾತ್ರವೇ ನಿನ್ನಲ್ಲಿ ಮರೆಹೊಕ್ಕಿರುವೆವೆಂದು ತಿಳಿಯ ಬಾರದು, ನಾವೂ ಹುಟ್ಟಿದುದುಮೊದಲು ಅಂತಹ ಕಷ್ಟಗಳಲ್ಲಿಯೇ ಸಿಕ್ಕಿ ನರಳುತ್ತಿರುವೆವು, ನಮ್ಮ ರಾಜ್ಯಸುಖವೆಂಬುದು ಕೇವಲ ಸ್ಪಷ್ಟ ಪ್ರಾ ಯವಾಗಿ ಅಸ್ಥಿರವೆನಿಸಿರುವುದು, ಮತ್ತು ಇದು ಕರಾಧೀನವಾಗಿ ಬಂ ದುದು. ಈ ರಾಜ್ಯಾಧಿಕಾರವಿರುವವರೆಗೂ ಶತ್ರುಗಳ ಭಯವು ತಪ್ಪಿದುದಲ್ಲ. ಈ ನಮ್ಮ ರಾಜಶರೀರವೆಂಬುದು ಶವಪ್ರಾಯವಾಗಿ ಆತ್ಮಕ್ಕೆ ಕೇವಲ ಭಾರಭೂತವಲ್ಲದೆ ಬೇರೆಯಲ್ಲ. ಆದುದರಿಂದ ಓ ಈಶಾ ! ಈಗ ನಾವು ನಿಷ್ಕಾಮರಾದ ಯೋಗಿಗಳಿಗೂ ನಿನ್ನ ಅನುಗ್ರಹಬಲದಿಂದಲೇ ಲಭಿಸಬಹು ದಾದ, ನಿನ್ನ ಧ್ಯಾನರೂಪವಾದ ಸುಖವನ್ನು ನಿರಾಕರಿಸಿ, ನಿನ್ನ ಮಾಯೆ ಯಿಂದ ಮೋಹಿತರಾಗಿ, ಈ ಲೋಕದಲ್ಲಿ ಅನೇಕಕಷ್ಟಕ್ಕೆ ಸಿಕ್ಕಿ ತೊಳಲು ತಿರುವೆವು. ಆದುದರಿಂದ ಆತರ ದುಃಖವನ್ನು ನೀಗಿಸತಕ್ಕ ಓ ಕೃಷ್ಣಾ! ಹೀಗೆ ಮೊದಲಿಂದಲೂ ದುಃಖಭಾಗಿಗಳಾಗಿದ್ದು, ಈಗ ಜರಾಸಂಧನ ಸ್ಥಿತಿ ಯಲ್ಲಿ ಕಟ್ಟುಬಿದ್ದು ವಿಶೇಷ ದುಃಖಕ್ಕೊಳಗಾಗಿರುವ ನಮ್ಮನ್ನು ಈ ನಿರ್ಬಂಧ ದಿಂದಲೂ, ಕರೆ ಬಂಧದಿಂದಲೂ ಬಿಡಿಸಿ ಉದ್ಧರಿಸಬೇಕು. ಆ ಜರಾಸಂಧನು ತಾನೊಬ್ಬನೇ ಹತ್ತು ಸಾವಿರ ಆನೆಯಬಲ ವುಳ್ಳವನಾಗಿ, ಸಿಂಹವು ಕುರಿಗಳ ಹಿಂಡನ್ನು ಹಿಡಿಯುವಂತೆ ನಮ್ಮೆಲ್ಲರನ್ನೂ ಸಾಗಿಸಿತಂದು, ತನ್ನ ಅರಮನೆಯಲ್ಲಿ ನಿರ್ಬಂಧಿಸಿಟ್ಟಿರುವನು. .ನೀನೂ ಆತನ ಪರಾಕ್ರಮವನ್ನು ಕಾಣದವನಲ್ಲ. ಇದಕ್ಕೆ ಹಿಂದೆ ಹದಿನೇಳಾವರ್ತಿ ಅವನು ನಿನ್ನಿಂದ ಯುದ್ಧದಲ್ಲಿ ಪರಾಜಿತನಾಗಿ ಹೋಗಿದ್ದರೂ, ಕೊನೆಗೆ ಹದಿನೆಂಟನೆಯ ಯುದ್ಧದಲ್ಲಿ ನಿನ್ನನ್ನು ಜಯಿಸಿಬಿಟ್ಟೆನೆಂಬ ಮದದಿಂದ, ನಿನ್ನ ಕಡೆಯವರಾದ ನಮ್ಮನ್ನು ಬಹಳವಾಗಿ ಗೋಳಾಡಿಸುತ್ತಿರುವನು. ಆದರೆ ಕೃಷ್ಣಾ! ನಿನ್ನನ್ನು ನಿಗ್ರಹಿಸತಕ್ಕ ಶಕ್ತಿಯು ಬೇರೊಬ್ಬರಿಗಿಲ್ಲವಾ