ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩ ಆಧ್ಯಾ, ೭೦ ] ದಶಮಸ್ಕಂಥವು. ದರೂ, ಮನುಷ್ಯಲೀಲೆಯನ್ನು ನಟಿಸುವುದಕ್ಕಾಗಿ,ನೀನು ಅವನಿಂದ ಪರಾಜಿತ ನಾದಂತೆ ಓಡಿ ಹೋದುದನ್ನು ನೋಡಿ, ಮೂಢನಾದ ಜರಾಸಂಧನು ತಾನೇ ಜಯಿಸಿದೆನೆಂಬ ಗತ್ವದಿಂದ ಬೀಗುತ್ತಿರುವನು. ಅವನನ್ನು ನಿಗ್ರಹಿಸಿ ನಮ್ಮ ನುದ್ಧರಿಸಬೇಕು” ಎಂದು ಆ ರಾಜದೂತನು, ಕೃಷ್ಣನಿಗೆ ತಮ್ಮ ರಾಜರು ಹೇಳಿ ಕಳುಹಿಸಿದ ಸಂದೇಶವನ್ನು ತಿಳಿಸಿ, ತನ್ನ ಮಾತಿನಿಂದ ತಿರುಗಿ ಕೃಷ್ಣ ನನ್ನು ಕುರಿತು, 14 ಓ ಪ್ರಭ ! ಜರಾಸಂಧನ ನಿರ್ಬಂಥದಲ್ಲಿರುವ ಆ ರಾಜ ರೆಲ್ಲರೂ ನಿನ್ನ ಪಾದಮೂಲವನ್ನೇ ತಮಗೆ ದಿಕ್ಕೆಂದು ನಂಬಿ, ನಿನ್ನ ದರ್ಶನ ಕ್ಯಾಗಿ ತವಕಿಸುತ್ತಿರುವರು.ನೀನು ಅವರ ಕಷ್ಟವನ್ನು ನೀಗಿಸಿ ಕ್ಷೇಮವನ್ನುಂ ಟುಮಾಡಬೇಕು” ಎಂದನು. ರಾಜದೂತನು ಈ ಮಾತನ್ನು ಹೇಳಿ ಮುಗಿಸು ವಷ್ಟರಲ್ಲಿ, ಒವ್ಯತೇಜೋವಿಶಿಷ್ಟನಾದ ನಾರದಮಹರ್ಷಿಯು, ಪಿಂಗಳ ರ್ಣವಾದ ತನ್ನ ಜಟಾಭಾರದಿಂದ ಸೂರನೇ , ಉದಿಸಿಬಂದಂತೆ, ಆ ಸಭೆಗೆ ಪ್ರವೇಶಿಸಿದನು. ಆ ಮಹರ್ಷಿಯು ಸಭಾಪ್ರವೇಶವನ್ನು ಮಾಡು ವಾಗ, ತನಗೆ ಪ್ರಿಯನಾದ ಕೃಷ್ಣನ ಜನ್ಮಗಳನ್ನೂ , ಕಲೈಗಳನ್ನೂ ಸ್ತುತಿ ಸುತ್ತ, ತನ್ನ ಗಾನಾಮೃತದಿಂದ ಕೃಷ್ಣನನ್ನೂ ,ಆ ಸಭಾಜನರನ್ನೂ , ಇತರ ಸಮಸ್ತ ಜನಗಳನ್ನೂ ಆನಂದಗೊಳಿಸುತಿದ್ದನು, ಸಮಸ್ಯೆ ಲೋಕಪಾಲಕ “ರಿಗೂ ಪ್ರಭುವಾದ ಕೃಷ್ಣನು, ನಾರಪನನ್ನು ಕಂಡೆ.ಡನೆ, ಅಲ್ಲಿ ಸಮಸ್ತ ಪರಿವಾರಗಳೊಡನೆ ಇತರೆಷ್ಟು, ತಲೆಬಗ್ಗಿ ನಮಸ್ಕರಿಸಿ, ಯಥೋ ಚಿತವಾದ ಆಸನವನ್ನು ಕೊಟ್ಟು ಸತ್ಕರಿಸಿ, ಕುಳ್ಳರಿಸಿದಮೇಲೆ, ಮೈಮಮ ಧುರ ವಾಕ್ಯದಿಂದ ಹೀಗೆಂದು ಪ್ರಶ್ನೆ ಮಾಡುವನು. “ ಓ ಮುಸೀಂದ್ರಾ ! ತೈಲೋಕ್ಯವೂ ನಿರ್ಭಯವಾಗಿ ನೆಮ್ಮದಿಯಿಂದಿರುವುದಷ್ಟೆ ? ತಾವು ಲೋಕಸಂಚಾರವನ್ನು ಮಾಡುತ್ತಿರುವುದು ನಮಗೆ ಪರಮಲಾಭವು. ಏಕೆಂ ದರೆ, ನಿಮ್ಮಿಂದ ಆಗಾಗ ನಮಗೆ ಲೋಕವೃತ್ತಾಂತವೆಲ್ಲವೂ ತಿಳಿದು ಬರು ತಿರುವುದು, ಈಶ್ವರನಿರ್ಮಿತವಾದ ಎಲ್ಲಾ ಲೋಕಗಳಲ್ಲಿಯೂ, ನಿಮಗೆ ತಿಳಿಯದ ವೃತ್ತಾಂತವಿಲ್ಲ ! ಆದುದರಿಂದ ಈಗ ಪಾಂಡವರು ಏನು ಮಾಡು ತಿರುವರೆಂಬುದನ್ನು ತಿಳಿಸಬೇಕು. ಎಂದನು. ಆದಕ್ಕಾನಾರದನು ಮಗು qಗೆಯಿಂದ ಕೃಷ್ಣನನ್ನು ಕುರಿತು, ( ಕೃಷ್ಣಾ ! ಇದೀಗ ಚೆನ್ನಾಯಿತು?