ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೪ ಶ್ರೀಮದ್ಭಾಗವತವು [ಅಧ್ಯಾ ೭೦. ನೀನು ಪಾಂಡವರ ವೃತ್ತಾಂತವನ್ನು ನನ್ನಿಂದಲೇ ಕೇಳಿತಿಳಿಯಬೇಕಲ್ಲವೆ ? ಸಕಲಭೂತಗಳಲ್ಲಿಯೂ ಅಂತರಾತ್ಮನಾಗಿ, ಸತ್ವಜ್ಞತ್ಯಾದಿಗುಣಗಳಿಂದ ಕೂಡಿದ ನೀನು, ಪ್ರಪಂಚವ್ಯಾಪಾರವನ್ನು ಬೇರೊಬ್ಬರಿಂದ ಕೇಳಿ ತಿಳಿಯ ಬೇಕೆ ? ಸೃಷ್ಟಿಕರ್ತನಾದ ಬ್ರಹ್ಮ ನನ್ನೂ ನಿಜಮಾಯೆಯಿಂದ ಮೋಹ ಗೊಳಿಸತಕ್ಕ ನೀನು, ಲೋಕವ್ಯಾಪಾರವನ್ನೇ ತಿಳಿಯದವನಂತೆ ನನ್ನನ್ನು ಪ್ರಶ್ನೆ ಮಾಡುವುದೂಕೂಡ, ನಮ್ಮಂತವರನ್ನು ಮೋಹಗೊಳಿಸತಕ್ಕೂ ಒಂದು ಮಾಯೆಯೆಂಗೆಣಿಸಬೇಕಾಗಿದೆ, ಬೂದಿಮುಚ್ಚಿ ದಕೆಂಡದಂತೆ ನಿನ್ನ ಶಕ್ತಿಯ ನ್ನು ಹೊರಕ್ಕೆ ಕಾಣಿಸದೆ, ನಮ್ಮಂತವರನ್ನು ಮೋಸಗೊಳಿಸುವುದಕ್ಕಾಗಿ ಈ ಪ್ರಶ್ನೆಗಳನ್ನು ಹೇಳುವೆ. ಮಾಯಾನಾಟಕ ಸೂತ್ರಧಾರಿಯಾದ ನಿನ್ನ ವಿಷಯ ದಲ್ಲಿ ಇದೇನೂ ನನಗೆ ಆಶ್ರಕರವಾಗಿ ತೋರುವುದಿಲ್ಲ! ನಿನ್ನ ಮಾಯೆಯು ಎಂತವರಿಗ . ದುರತಿಕ್ರಮವಾದುದು. ನೀನು ನಿನ್ನ ಮಾಯೆಯಿಂದಲೇ ಈ ಪ್ರಪಂಚದ ಸೃಷ್ಟಿಸ್ಥಿತಿ ಸಂಹಾರಗಳೆಲ್ಲವನ್ನೂ ನಡೆಸತಕ್ಕವನು, ನಿನ್ನ. ಸಂಕಲ್ಪವನ್ನು ಲೋಕದಲ್ಲಿ ಬೇರೆ ಯಾವನೂ ಹೀಗೆಂದು ತಿಳಿಯಲಾರನು ? ಹೀಗೆ ಯಾರಿಗೂ ಅಗೋಚರವಾದ ಮನಸ್ಸಂಕಲ್ಪವುಳ್ಳವನಾಗಿಯೂ, ಸತ್ವವಿಲಕ್ಷಣಸ್ವರೂಪನಾಗಿಯೂ ಇರುವ ನಿನ್ನನ್ನು , ಇದೋ ! ಈ ನಮ ಸ್ವಾರವೊಂದರಿಂದಹೊರತು ನಾನು ಬೇರೆಯಾವ ಉಪಾಯದಿಂದಲೂ ತೃಪ್ತಿಪಡಿಸಲಾರೆನು. ಸಂಸಾರದಲ್ಲಿ ಬಿದ್ದು, ಕೇವಲದುಃಖಪ್ರಚುರವಾದ ಮನುಷ್ಯ ಶರೀರದಿಂದ ಬಿಡುಗಡೆಹೊಂದುವುದಕ್ಕೆ ತಕ್ಕ ಉಪಾಯವನ್ನು , ಕಾಣದೆ ಕಳವಳಿಸುತ್ತಿರುವ ಜೀವಿಗಳಿಗೆ, ನಿನ್ನ ಕೀರ್ತಿಯೇ ಆ ಅಜ್ಞಾನಾಂಧ ಕಾರವನ್ನು ಸಿಗಿಸತಕ್ಕ ದೀಪದಂತಿರುವುದು, ಹೀಗೆ ಲೀಲಾರವಾಗಿ ಕೈಕೊಂಡ ಅವತಾರಗಳಿಂದ ಜ್ಞಾನಪ್ರಕಾಶವನ್ನುಂಟುಮಾಡತಕ್ಕ ಸಿನ್ನ ನ್ನು ನಾನು ಶರಣುಹೊಂದಿರುವೆನು. ನಮ್ಮಂತಹ ಚೇತನರೆಲ್ಲರಿಗೂ ನೀನೇ ಸಕಲವಿಧದಲ್ಲಿಯೂ ಜ್ಞಾನೋಪದೇಶಕನೆಂಬುದನ್ನು ನಾನು ಬಲ್ಲವ ನಾಗಿದ್ದರೂ, ಈಗ ನೀನು ಮನುಷ್ಯಲೀಲೆಯನ್ನನುಕರಿಸುತ್ತ, ಏನೂ ತಿಳಿ ಯದವನಂತೆ ನನ್ನನ್ನು ಪ್ರಶ್ನೆ ಮಾಡಿದಮೇಲೆ ನಾನು ನನಗೆ ತಿಳಿದ ವಿಚಾರ ವನ್ನು ನಿನ್ನ ಮುಂದೆ ವಿಜ್ಞಾಪಿಸದೆ ತೀರದು! ಹೇಳುವೆನು ಕೇಳು ! ನಿನ್ನ