ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೫ ಅಧ್ಯಾ, ೩೦.] ದಶಮಸ್ಕಂಧವು. ಸೋದರತ್ತೆಯ ಮಗನಾಗಿಯೂ, ನಿನಗೆ ಭಕ್ತನಾಗಿಯೂ ಇರುವ ಧರ ರಾಜನು, ಬ್ರಹ್ಮಲೋಕಪ್ರಾಪ್ತಿಗಾಗಿ ರಾಜಸೂಯವೆಂಬ ಯಾಗ ದಿಂದ ನಿನ್ನನ್ನೇ ಆರಾಧಿಸತೊಡಗಿರುವನು. ನೀನು ಅದನ್ನ ನುಮೋದಿಸಬೇಕು. ಪ್ರಖ್ಯಾತರಾದ ಅನೇಕರಾಜಾಧಿರಾಜರು ಅದನ್ನು ನೋಡುವುದಕ್ಕಾಗಿ ಬಂದು ಸೇರುವರು. ನೀನೂ ಅಲ್ಲಿಗೆ ಬಂದು,ನಿನ್ನ ಸಾನ್ನಿಧ್ಯದಿಂದ ಆ ಯಾಗ ವನ್ನು ಸಫಲಗೊಳಿಸಬೇಕು. ಕೇವಲಪತಿತರಾಗಿದ್ದವರೂಕೂಡ, ಕಾಮ ಕ್ರೋಧಾದಿಗಳಿಂದಲಾದರೂ, ನಿನ್ನನ್ನು ಸ್ಮರಿಸಿದರೆ, ಅಥವಾ ನಿನ್ನ ನಾಮ ವನ್ನು ಚ್ಚರಿಸಿದರೆ, ಪಾಪವಿಮುಕ್ತರಾಗಿ ದೇಹಾವಸಾನದಲ್ಲಿ ನಿನ್ನನ್ನು ಸೇರು ವರು, ಹೀಗಿರುವಾಗ, ಬ್ರಹ್ಮ ಸ್ವರೂಪನಾದ ನಿನ್ನನ್ನು ಪ್ರತ್ಯಕ್ಷವಾಗಿ ನೋಡುವಂತಾದರೆ ಅವರ ಭಾಗ್ಯವನ್ನು ಹೇಳಬೇಕಾದುದೇನು? ಓ! ಭುವನ ಮಂಗಳಾ ! ನಿನ್ನ ಕೀರ್ತಿಯು ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮೂರು ಲೋಕಗಳಿಗೂ ಮೇಲುಕಟ್ಟಿನಂತೆ ಭೂಷಣವಾಗಿರುವುದು, ನಿನ್ನ ಪಾದ ಜಲವು ಆ ಮೂರುಲೋಕಗಳಲ್ಲಿಯೂ ಕ್ರಮವಾಗಿ ಮಂದಾಕಿನಿಯೆಂದೂ, ಗಂಗೆಯಂದೂ, ಭೋಗವತಿಯೆಂದೂ ಹೆಸರುಗೊಂಡು, ಆ ತೈಲೋಕ್ಯ ವನ್ನೂ ಪಾವನಮಾಡುತ್ತಿರುವುದು. ಆದುದರಿಂದ ನೀನು ಆ ಥರರಾಜನ ಯಾಗಸಭೆಗೆ ಬಂದು ಅವನನ್ನು ಕೃತಾರನನ್ನಾಗಿ ಮಾಡಬೇಕು” ಎಂದನು. ಹೀಗೆ ನಾರದನು ಧರರಾಜನ ರಾಜಸೂಯಾಗಕ್ಕಾಗಿ ಹೊರಡಬೇ ಕೆಂದು ಕೃಷ್ಣನನ್ನು ನಿರ್ಬಂಧಿಸುತ್ತಿರುವಷ್ಟರಲ್ಲಿ, ಅಲ್ಲಿದ್ದ ಕೆಲವು ಯಾದ ನವೀರರು, ( ಈಗ ಜರಾಸಂಧನಮೇಲೆ ಯುದ್ಧಕ್ಕೆ ಹೊರಡಬೇಕಾ ದುದೇ ನಮಗೆ ಪ್ರಧಾನಕಾರವೇಹೊರತು, ಧಮ್ಮರಾಜನ ರಾಜಸೂಯ ಯಾಗಕ್ಕೆ ಹೋಗುವುದು ಕಾಲೋಚಿತವಲ್ಲ” ಎಂದು ವೀರವಾದಗಳನ್ನು ಮಾಡುತ್ತ ಗುಸುಗುಟ್ಟುತಿದ್ದರು, ಆದನ್ನು ನೋಡಿ ಕೃಷ್ಣನು, ತನ್ನ ಮಂತ್ರಿ ವರನಾದ ಉದ್ಯವನನ್ನು ಕುರಿತು ಮೃದುವಾಕ್ಯದಿಂದ (4 ಉದ್ಧವಾ ! ಈ ವಿಚಾರದಲ್ಲಿ ನಿನ್ನ ಅಭಿಪ್ರಾಯವೇನು ಹೇಳು ! ನೀನು ನಮಗೆ ನೇತ್ರಪ್ರಾ ಯನು, ಕಾಲೋಚಿತವಾದ ಮಂತ್ರಾಲೋಚನೆಯನ್ನು ಬಲ್ಲವನು, ಮತ್ತು ನಮಗೆ ಸತ್ವವಿಧದಲ್ಲಿಯೂಹಿತವನ್ನು ಯೋಚಿಸತಕ್ಕವನು.ಆದುದರಿಂದ ನಿನ್ನ