ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೮ ಶ್ರೀಮದ್ಭಾಗವತವು [ಅಥ್ಯಾ ೭೧. ಬಾಯಿಗೆ ಸಿಕ್ಕಿಬಿದ್ದ ಗಜೇಂದ್ರನನ್ನು ರಕ್ಷಿಸಿದೆ. ಮತ್ತೊಮ್ಮೆ ರಾವಣನ ಸೆರೆಯಲ್ಲಿ ಸಿಕ್ಕಿದ ಸೀತಾದೇವಿಯನ್ನು ಸೆರೆಯಿಂದ ಬಿಡಿಸಿದೆ. ಈ ಅವತಾರ ದಲ್ಲಿಯೂ ನೀನು ಹುಟ್ಟಿದೊಡನೆಯೇ, ಕಂಸನ ಸೆರೆಯಲ್ಲಿ ಸಿಕ್ಕಿದ್ದ ನಿನ್ನ ತಾಯಿತಂದೆಗಳನ್ನು ಬಿಡಿಸಿದೆ. ಹೀಗೆ ಆಶ್ರಿತಬಂಧವಿಮೋಚನರೂಪವಾ ದ ನಿನ್ನ ಕೀರ್ತಿಯು, ಈಗಲೂ ಅಲ್ಲಲ್ಲಿ ಕೊಂಡಾಡಲ್ಪಡುವಂತೆ, ಪ್ರಕೃತದ ಸ್ಥೆ ಜರಾಸಂಧನ ಸೆರೆಯಿಂದ ವಿಮುಕ್ತರಾಗುವ ರಾಜರಪತ್ತಿ ಯರೂಕೂಡ ಮನೆಮನೆಗಳಲ್ಲಿ ನಿನ್ನ ಕೀರ್ತಿಯನ್ನು ಅನವರತವೂ ಕೊಂಡಾಡುವರು. ಆದು ದರಿಂದ ಓ ! ಕೃಷ್ಣಾ! ಈಗ ನೀನು ರಾಜಸೂಯಯಾಗಕ್ಕೆ ಹೋಗುವುದ ರಿಂದ, ಅಲ್ಲಿ ಭೀಮನ ಕೈಯಿಂದ ಜರಾಸಂಧನನ್ನು ಕೊಲ್ಲಿಸಬಹುದು, ಅದು ಜರಾಸಂಧನ ವಧದಲ್ಲಿಮಾತ್ರವೇ ಮುಗಿಯುವಹಾಗಿಲ್ಲ. ಇದರಿಂದ ಇನ್ನೂ ಅನೇಕ ಪ್ರಯೋಜನಗಳುಂಟು. ಇದೇನೆವದಿಂದ ನಿನ್ನ ವೈರಿಯಾದ ಶಿಶುಪಾ ಲಾಡಿಗಳೂ ನಿನ್ನ ೩ ದಿರಿಸಿ ನಿನ್ನಿಂದ ಹತರಾಗಬಹುದು. ಧರ್ಮರಾಜನ ಯಾ ಗದಲ್ಲಿ ನಿನಗಿರತಕ್ಕ ಅಕ್ಕರೆಯನ್ನೂ ತೋರಿಸಿದಂತಾಗುವುದು. ಆದುದರಿಂದ ನೀವು ಮೊದಲು ಇಂದ್ರಪ್ರಸ್ಥಕ್ಕೆ ಹೊರಡುವುದೇ ಉಚಿತವು” ಎಂದನು. ಹೀಗೆ ಉಭಯಪಕ್ಷಕ್ಕೂ ಅನುಕೂಲಿಸುವಂತೆ ಹೇಳಿದ ಉದ್ಯವನ ವಾಕ್ಯವ ನ್ನು ಕೇಳಿ, ಕೃಷ್ಣನೂ, ಬಲರಾಮನೂ, ನಾರದನೂ, ಯದುವೃದ್ದರೂ ಆದನ್ನು ಮನಃಪೂರೈಕವಾಗಿ ಅನುಮೋದಿಸಿದರು. ಒಡನೆಯೆ ಕೃಷ್ಣನು ಗುರುಗಳಿಗೂ, ವೃದ್ಧರಿಗೂ ನಮಸ್ಕರಿಸಿ, ಅವರ ಅನುಮತಿಯನ್ನು ಪಡೆದು, ತನ್ನ ಕೃತ್ಯರಾದ ದಾರುಕ ಜೈತ್ರರಿಗೆ ಪ್ರಯಾಣಸನ್ನದ್ಧರಾಗುವಂತೆ ಆಜ್ಞಾ ಪಿಸಿದನು, ಮತ್ತು ತನ್ನ ಅಂತಃಪುರಸ್ತಿಯರನ್ನೂ, ಮಕ್ಕಳನ್ನೂ, ತಮ್ಮ ತಮ್ಮ ಪರಿವಾರಗಳೊಡನೆ ಇಂದ್ರಪ್ರಸ್ಥಕ್ಕೆ ಹೊರಡುವಂತೆ ಆಜ್ಞಾಪಿಸಿ ದನು. ಯದುರಾಜನಾದ ಉಗ್ರಸೇನನ ಮತ್ತು ಬಲರಾಮನ ಅನುಜ್ಞೆಯನ್ನು ಪಡೆದು, ಗರುಡಧ್ವಜದಿಂದಲಂಕೃತವಾದ ತನ್ನ ರಥವನ್ನೇರಿದನು, ರಥ, ಗಜ ತುರಗ, ಪದಾತಿಗಳೊಡನೆ ಚತುರಂಗಸೈನ್ಯವೂ ಅವನಹಿಂದೆ ಹೊರಟಿತು. ಶಂಖ, ಭೇರಿ, ಮೃದಂಗ, ಗೋಮುಖ ಮೊದಲಾದ ವಾದ್ಯಗಳೆಲ್ಲವೂ ಮೊಳ ಗುತಿದ್ದುವು.ರುಸ್ಮಿಣಿ ಮೊದಲಾದ ಅಂತಃಪುರಸ್ತಿಯರೆಲ್ಲರೂ ತಮ್ಮ ತಮ್ಮ