ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೭೧.] ದಶಮಸ್ಕಂಧವು. ೨೨೪೯ ಮಕ್ಕಳೊಡನೆ, ಗಂಧಪುಷ್ಪವನ್ನಾಭರಣಾದಿಗಳಿಂದ ಅಲಂಕೃತರಾಗಿ, ಚಿನ್ನ ದ ಪಲ್ಲಕ್ಕಿಗಳಮೇಲೆಯೂ, ರಥಗಳಮೇಲೆಯ, ಕುದುರೆಗಳಮೇಲೆಯೂ ಏರಿ, ಕೃಷ್ಣನನ್ನು ಹಿಂಬಾಲಿಸಿದರು. ವೀರಭಟರು ಖಡ್ಡಪಾಣಿಗಳಾಗಿ ಆ ಸ್ತ್ರೀಯರಿಗೆ ಬೆಂಗಾವಲಾಗಿ ಬರುತಿದ್ದರು. ಇವರಹಿಂದೆ ವಾರಕ್ಕಿಯರೂ ಗೌಡಿಯರೂ, ತಮತಮಗೆ ಯೋಗ್ಯವಾದ ಅಲಂಕಾರಗಳನ್ನು ಧರಿಸಿ ಹೊ ರಟರು. ಇವರೆಲ್ಲರೂ ಎತ್ತು ಕುದುರೆ, ಎಮ್ಮೆ, ಒಂಟಿ, ಬಂಡಿ, ಆನೆ, ಮನು ಪೈರು ಮೊದಲಾದ ವಾಹನಗಳಲ್ಲಿ, ಹಾಸಿಗೆ, ಹೊದ್ದಿಕೆ, ಕಂಬಳಿ, ಹುಲ್ಲಿನ ತಡಿಕೆ, ಗುಡಾರ ಮೊದಲಾದ ಸಾಮಗ್ರಿಗಳನ್ನು ಸಾಗಿಸಿಕೊಂಡು ಬರುತ್ತಿದ್ದರು. ಕೃಷ್ಣನನ್ನು ಹಿಂಬಾಲಿಸಿ ಬರುತ್ತಿದ್ದ ಸೈನ್ಯವು, ಛತ್ರ ಚಾಮರ ಧ್ವಜಗಳಿಂದಲೂ, ನಾನಾಯುಧಗಳಿಂದಲೂ, ಆಭರಣಗಳಿಂದಲೂ ಕವಚಾಟಗಳಿಂದಲೂ ಅಪೂಲ್ವಶೋಭೆ ಯನ್ನು ಬೀರುತ್ತ, ಮಹಾಧ್ವನಿಯೊ ಡನೆ ಹೊರಟುಬರುವಾಗ, ತಿಮಿಂಗಿಲಾದಿಜಲಜಂತುಗಳಿಂದಲೂ, ದೊಡ್ಡ ಅಲೆಗಳಿಂದಲೂ ಕೂಡಿ, ಸೂರಕಿರಣಸಂಬಂದದಿಂದ ಹೊಳೆಯುತ್ತಿರುವ ಮ ಹಾಸಮುದ್ರದಂತೆ ತೋರುತ್ತಿತ್ತು.ಹೀಗೆ ಪ್ರಯಾಣಸನ್ನದ್ಧನಾಗಿ ಹೊರಟ ಕೃಷ್ಣನ ಮನೋನಿಶ್ಯವನ್ನು ತಿಳಿದುಕೊಂಡು ನಾರದನು, ಆತನ ದರ್ಶನ ದಿಂದುಂಟಾದ ಆನಂದದಿಂಮಕ್ಕುತ್ಯ, ಆತನ ಅನುಜ್ಞೆಯನ್ನು ಪಡೆದು, ಅವ ನಿಂದಸತ್ತನಾಗಿ ಕೈಮುಗಿದು ಆಕಾಶಮಾರ್ಗದಿಂದ ಹೊರಟುಹೋದನು. ಆಮೇಲೆ ಕೃಷ್ಣನು ಇತ್ತಲಾಗಿ ತನ್ನ ಆಜ್ಞೆಯನ್ನು ನಿರೀಕ್ಷಿಸುತ್ತಿದ್ದ ರಾಜ ದೂತನನ್ನು ನೋಡಿ ಓ ! ದೂತಾ! ಇನ್ನು ನೀನು ಹೊರಡು! ನಿನಗೆ ಮಂ ಗಳವಾಗಲಿ ! ನಿನ್ನ ರಾಜರಿಗೆ ನಾನು ಅಭಯವನ್ನು ಕೊಟ್ಟಿರುವುದಾಗಿ ತಿಳಿಸು! ತೀಘ್ರದಲ್ಲಿಯೇ ನಾನು ಜರಾಸಂಧನನ್ನು ಸಂಹರಿಸುವುದಾಗಿಯೂ ಅವರಿಗೆ ಹೇಳು !” ಎಂದನು. ಅದರಂತೆಯೇ ದೂತನು ಅಲ್ಲಿಂದ ಹೊರಟುಬಂ ದು, ನಡೆದ ಸಂಗತಿಗಳನ್ನೆಲ್ಲಾ ರಾಜರಿಗೆ ತಿಳಿಸಿದನು. ಅವರೆಲ್ಲರೂ ಆ ಮಾ ತನ್ನು ಕೇಳಿ ಸಂತುಷ್ಟರಾಗಿ, ಕೃಷ್ಣನು ಯಾವಾಗ ತಮಗೆ ಸಂದರ್ಶನವನ್ನು ಕೊಟ್ಟು ತಮ್ಮನ್ನು ಸೆರೆಯಿಂದ ಬಿಡಿಸುವನೋ ಎಂದು ಕಾಲನಿರೀಕ್ಷಣೆಯ ಲ್ಲಿರುತ್ತಿದ್ದರು. ಇತ್ತಲಾಗಿ ಕೃಷ್ಣನು ಇಂದ್ರಪ್ರಸ್ಥವನ್ನು ಕುರಿತು ಪ್ರ