ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೦ ಶ್ರೀಮದ್ಭಾಗವತವು. [ಅಧ್ಯಾ, ೭೧ ಗವತವು ಯಾಣವನ್ನು ಬೆಳೆಸಿ, ಕ್ರಮವಾಗಿ, ಆನರ್ತ, ಸೌವೀರ, ಕುರು, ಏನಶನ, ಮೊದಲಾದ ದೇಶಗಳ ಮಾರ್ಗವಾಗಿ, ನಡುನಡುವೆ ಅನೇಕಪರ್ವತಗಳನ್ನೂ, ನದಿಗಳನ್ನೂ, ಸಣ್ಣಸಣ್ಣ ಗ್ರಾಮಗಳನ್ನೂ, ಬೇಡರ ಹಳ್ಳಿಗಳನ್ನೂ, ದೃಷ ದ್ವತೀ, ಸರಸ್ವತೀ ನದಿಗಳನ್ನೂ, ದಾಟಿ, ಪಾಂಚಾಲ ಮತ್ತ್ವದೇಶಗಳಮಾ ರ್ಗವಾಗಿ ಇಂದ್ರಪ್ರಸ್ಥಪುರದ ಎಲ್ಲೆಗೆ ಬಂದು ಸೇರಿದನು, ಇಷ್ಟರಲ್ಲಿಯೇ ಅತ್ತಲಾಗಿ ಧಮ್ಮ ರಾಜನಿಗೆ ಈ ವೃತ್ತಾಂತವು ತಿಳಿದುಬಂದಿತು. ಮಹಾಯೋ ಗಿಗಳಿಗಲ್ಲದೆ ಇತರಸಾಮಾನ್ಯ ಮನುಷ್ಯರಿಗೆ ದುರ್ಲಭದರ್ಶನನಾದ ಆಕೃಷ್ಣ ನನ್ನು ನೋಡಬೇಕೆಂಬ ಆತುರದಿಂದ, ಅಜಾತಶತ್ರುವು, ತನ್ನ ಇಷ್ಟಮಿತ್ರ, ಪುರೋಹಿತಾದಿಗಳನ್ನೂ ಸಂಗಡ ಕರೆದುಕೊಂಡು, ಗೀತವಾದ್ಯಘೋಷ ದೊಡನೆಯೂ, ವೇದಘೋಷದೊಡನೆಯೂ ಕೃಷ್ಣನನ್ನು ಇದಿರುಗೊಂಡು ಕರೆತರುವುದಕ್ಕಾಗಿ, ಪ್ರಾಣವನ್ನಿ ದಿರುಗೊಳ್ಳುವುದಕ್ಕಾಗಿ ಹೋಗುವ ಪಂ • ಚೇಂದ್ರಿಯಗಳಂತೆ ತನ್ನ ತಮ್ಮಂದಿರೊಡನೆ ಉಲ್ಲಾಸದಿಂದ ಹೊರ ಟನು, ಬಹುಕಾಲದಿಂದ ಕಾಣದಿದ್ದ ಕೃಷ್ಣನನ್ನು ಕಂಡೊಡನೆ, ಸಂತೋಷ ಪರವಶನಾಗಿ,ಎರಡುತೋಳುಗಳನ್ನೂ ನೀಡಿ,ಬಾರಿಬಾರಿಗೂ ಅವನನ್ನು ಆಲಿಂ ಗಿಸಿಕೊಂಡನು. ಸಾಕಾಂಕ್ಷಿ ದೇವಿಗೆ ನಿವಾಸಭೂತನಾದ ಆಕೃಷ್ಣನ ದೇಹ ಸ್ಪರ್ಶದಿಂದ ಆಗಲೇ ತನ್ನ ಜನ್ಮವು ಪವಿತ್ರವಾಯಿತೆಂದು ತಿಳಿದುಕೊಂಡನು. ಅವನ ಕಣ್ಣುಗಳಲ್ಲಿ ಆನಂದಬಾಷ್ಪವು ತುಳುಕುತ್ತಿತ್ತು, ಅವನ ದೇಹವೆಲ್ಲವೂ ಪುಳಕಿತವಾಯಿತು. ಅವನಿಗೆ ಆಗಿನ ಆನಂದಾತಿಶಯದಿಂದ ಈ ಲೋಕವ್ಯಾ ಪಾರವೇ ಮರೆತುಹೋಗುವಂತಾಯಿತು. ಭೀಮಾರ್ಜುನನಕುಲಸಹದೇವ ರೂ ಕ್ರಮವಾಗಿ ಮುಂದೆ ಬಂದು,ಕೃಷ್ಟನನ್ನಾ ೦ಲಿಗಿಸಿ, ಕಣ್ಣುಗಳಲ್ಲಿ ಅನಂ ದಬಾಷ್ಟ್ರವನ್ನು ಸುರಿಸುತ್ತಿದ್ದರು. ಆಗ ಕೃಷ್ಣನು, ಯುಧಿಷ್ಠಿರನಿಗೂ, ಭೀಮನಿಗೂ ಭಕ್ತಿಯಿಂದ ಪಾದವಂದನವನ್ನು ಮಾಡಿ, ಅರ್ಜುನನ್ನು ಪ್ರೀತಿ ಯಿಂದಾಲಿಂಗಿಸಿಕೊಂಡನು. ತನಗೆ ನಮಸ್ಕರಿಸಿದ ನಕುಲಸಹದೇವರನ್ನು ಮನ್ನಿಸಿ ಆಶೀಶ್ವಡಿಸಿದನು, ಆಮೇಲೆ ಧರ ರಾಜನೊಡನೆ ಬಂದಿದ್ದ ಬ್ರಾಹ್ಮ ಣರನ್ನೂ , ಕುಲವೃದ್ಧರನ್ನೂ, ಯಥಾಯೋಗ್ಯವಾಗಿ ನಮಸ್ಕರಿಸುತ್ತ ಬಂದ ನು, ಕುರು, ಸೃಂಜಯ, ಕೇಕಯಾದಿರಾಜರನ್ನು ಯಥೋಚಿತವಾಗಿ ಗೌರ