ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೧ ಅಥ್ಯಾ. ೭೧] ದಶಮಸ್ಕಂಧವು, ವಿಸಿ, ಅವರು ತನ್ನಲ್ಲಿ ತೋರಿಸಿದ ಗೌರವವನ್ನೂ ಪ್ರೀತಿಯಿಂದಕ್ಕೆ ಕೊಂಡನು. ಆಗ ಧಮ್ಮರಾಜನೊಡನೆ ಬಂದಿದ್ದ, ಸೂತ, ಮಗಧ, ವಂದಿಗಳೂ,ವಿದೂಷಕ ರೂ, ಗಾಯಕರೂ, ಬ್ರಾಹ್ಮಣರೂ ಮುಂದೆ ಬಂದು,ವೀಣಾವೇಣು,ಮೃದಂ ಗಾದಿವಾದ್ಯಗಳ ಕೋಲಾಹಲಗಳೊಡನೆ ಕೃಷ್ಣನನ್ನು ಸ್ತುತಿಸಿದರು, ನರ್ತ ಕರು ನೃತ್ಯವನ್ನು ಮಾಡುತಿದ್ದರು. ಈ ಸಮಸ್ಯವೈಭವಗಳೊಡನೆ ಪುಣ್ಯಶೆ ಕಶಿಖಾಮಣಿಯಾದ ಕೃಷ್ಣನು, ಸಾಲಂಕಾರಭೂಷಿತವಾದ ಇಂದ್ರ ಪ್ರಸ್ಥಪುರವನ್ನು ಪ್ರವೇಶಿಸಿದನು. ಆಗ ಆಪಟ್ಟಣದ ಸೊಗಸನ್ನು ಕೇಳಬೇಕೆ? ಪುರವೀಧಿಗಳೆಲ್ಲವೂ ಎಡೆಬಿಡದೆ ಸುತ್ತುತ್ತಿರುವ ಆನೆಗಳ ಮದಜಲದಿಂದ ಸೇಚಿತವಾಗಿ ಫುಮಘಮಿಸುತ್ತಿರುವುವು. ಚಿತ್ರವಿಚಿತ್ರಗಳಾದ ಧ್ವಜ ಗಳೂ, ಸುವರ್ಣತೋರಣಗಳೂ ತೂಗಾಡುತ್ತಿರುವುವು. ಅಲ್ಲಲ್ಲಿ ಮಂಗ ೪ಾರವಾದ ಪೂರ್ಣಕುಂಭಗಳು ಶೋಭಿಸುತ್ತಿರುವುವು. ಆ ಪಟ್ಟಣದ ಶ್ರೀ ಪುರುಷರೆಲ್ಲರೂ ಮಂಗಳಸ್ನಾನವನ್ನು ಮಾಡಿ, ವಸ್ತ್ರಾಭರಣಗಂಧಮಾಲ್ಯಾ ದಿಗಳಿಂದ ದೇಹವನ್ನಲಂಕರಿಸಿಕೊಂಡು, ಸಂಭ್ರಮದಿಂದೋಡಾಡುತ್ತಿರು ವರು, ಮನೆಮನೆಯ ಬಾಗಿಲುಗಳೂ ದೀಪಗಳಿಂದಲೂ, ಪಷ್ಟೋಪಹಾರಗ ಳಿಂದಲೂ, ಆಗರುರೂಪಗಳಿಂದಲೂ, ಧ್ವಜತೋರಣಳಿಂದಲೂ, ಬಂಗಾ ಗದ ಶಿಖರವುಳ್ಳ ಬೆಳ್ಳಿಯ ಕಲಶಗಳಿಂದಲೂ ಅಲಂಕೃತಗಳಾಗಿರುವುವು. ಕೃಷ್ಣನು ಹೀಗೆ ಸಾಲಂಕಾರಭೂಷಿತಗಳಾದ ಪುರವೀಥಿಗಳನ್ನು ನೋ ಡುತ್ತ ಬರುತಿದ್ದನು. ಪುರಸ್ತಿಯರೆಲ್ಲರೂ ಈ ಸಂಗತಿಯನ್ನು ಕೇಳಿದೊಡನೆ, ಆಕೃಷ್ಣನನ್ನು ನೋಡುವ ಆತುರದಲ್ಲಿ, ಬಿಚ್ಚಿದ ತಲೆಯನ್ನೂ, ಸಡಿಲಿದ ದು ಕೂಲವನ್ನೂ ತಿಳಿಯದೆ, ತಾವು ಮಾಡುತಿದ್ದ ಗೃಹಕಾರಗಳನ್ನೂ ಅಷ್ಟ್ರ ಕೈ ಬಿಟ್ಟು, ಸಮೀಪದಲ್ಲಿ ಮಲಗಿದ್ದ ತಮ್ಮ ಪತಿಗಳನ್ನೂ ಲಕ್ಷ್ಯಮಾಡದೆ, ಹೊರಟುಬಂದು, ಉಪ್ಪರಿಗೆಗಳ ಮೇಲೇರಿ ನೋಡುತಿದ್ದರು. ರಥಗಜಾದಿ ಚತುರಂಗಸೈನ್ಯದಿಂದ ಕಿಕ್ಕಿರಿಸಿ ತುಂಬಿದ ರಾಜಮಾರ್ಗಗದಲ್ಲಿ, ಕೃಷ್ಣನೂ, ಅವನ ಭಾರೈಯರೂ ಅತಿವೈಭವದಿಂದ ಬರುತ್ತಿರುವುದನ್ನು ಕಂಡು,ಒಬ್ಬೊ ಬ್ಬರೂ ಅವನಮೇಲೆ ಪಷ್ಟವರ್ಷವನ್ನು ಕರೆಯುತಿದ್ದರು, ಒಬ್ಬೊ ಬ್ಬರೂ ಆ ಕೃಷ್ಣನ ಸೌಂದರಕ್ಕೆ ಮರುಳಾಗಿ, ತಮ್ಮ ತಮ್ಮ ಮನಸ್ಸಿ