ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೩ ಆ ಅಧ್ಯಾ, ೭೨.] ದಶಮಸ್ಕಂಧವು. ಜಿಯೆಂಬ ಅಷ್ಟ ಮಹಿಷಿಯರನ್ನೂ, ಇತರಸ್ತೀಯರನ್ನೂ ಗಂಧಪುಷ್ಟ ವಸ್ತ್ರಾಲಂಕಾರಗಳಿಂದ ಯಥೋಚಿತವಾಗಿ ಸತ್ಕರಿಸಿದಳು. ಹಾಗೆಯೇ ಧರ್ಮರಾಜನೂಕೂಡ, ಕೃಷ್ಣನಿಗೂ, ಆತನ ಪತ್ನಿ ಯರಿಗೂ ಸೈನಿಕರಿಗೂ, ಅನುಚರರಿಗೂ, ಹೊಸಹೊಸ ಭೋಗಸಾಮಗ್ರಿಗಳಿಂದ ತುಂಬಿದ ಬೇರೆಬೇರೆ ಬಿಡದಿಗಳನ್ನು ಮಾಡಿಕೊಟ್ಟನು. ಓ ಪರೀಕ್ಷೆ ದ್ರಾಜಾ ! ಕೃಷ್ಣನು ಅಲ್ಲಿ ದ್ದಾಗ ಅರ್ಜುನನೊಡನೆ ಕಲೆತ: ಖಾಂಡವ ದಹನದಿಂದ ಅಗ್ನಿಗೆ ತೃಪ್ತಿಯ ನುಂಟುಮಾಡಿ, ಅಲ್ಲಿ ಮಯನನ್ನು ಅಪಾಯದಿಂದ ತಪ್ಪಿಸಿ, ಅವನಮೂಲಕ ವಾಗಿ ಧರ್ಮರಾಜನಿಗೆ ಒಂದು ದಿವ್ಯಭವನವನ್ನು ಮಾಡಿಸಿಕೊಟ್ಟನು. ಹೀಗೆಯೇ ಕೃಷ್ಣನು ಅರ್ಜುನನೊಡನೆ ರಥಾರೂಢನಾಗಿ, ಅಲ್ಲಲ್ಲಿ ವಿನೋದ ದಿಂದ ವಿಹರಿಸುತ್ಯಧರ್ಮರಾಜನ ಸಂತೋಷಾರ್ಥವಾಗಿ ಕೆಲವು ತಿಂಗಳುಗಳ ವರೆಗೆ ಆ ಅರಮನೆಯಲ್ಲಿಯೇ ಇರುತ್ತಿದ್ದನು. ಇದು ಎಪ್ಪತ್ತೊಂದನೆಯ ಅಧ್ಯಾಯವು. w+ ದಿಗ್ವಿಜಯ ಜರಾಸಂಧವಧಾದಿ ವೃತ್ತಾಂತಗಳು.ww ಓ ಪರೀಕ್ಷಿದ್ರಾಜಾ ! ಕೇಳು ! ಒಮ್ಮೆ ಧರರಾಜನು ತನ್ನ ತಮ್ಮಂ ದಿರೊಡನೆ ಸಭಾಸ್ಥಾನದಲ್ಲಿ ಕುಳಿತಿದ್ಯಾಗ, ಅಲ್ಲಿ ಅನೇಕಮಹರ್ಷಿಗಳೂ, ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಂಬ ಮೂರುವರ್ಣದವರೂ, ಆಚಾರರೂ, ಕುಲವೃದ್ಧರೂ, ಜ್ಞಾತಿಗಳೂ, ನಂಟರಿಷ್ಟರೂ ನೆರೆದಿದ್ದರು. ಅವರೆಲ್ಲರೂ ಕೇಳುತ್ತಿರುವಹಾಗೆ ಧರರಾಜನು, ಕೃಷ್ಣನಮುಂದೆ ಕೈಮುಗಿದು ವಿಜ್ಞಾ ಪಿಸಿದನು, 11 ಓ ಗೋವಿಂದಾ ! ಈಗ ನಾನು ರಾಜಸೂಯವೆಂಬ ಮಹಾ ಯಾಗದಿಂದ ನಿನ್ನ ಅಂಶಭೂತರಾದ ದೇವತೆಗಳನ್ನು ಆರಾಧಿಸಬೇಕೆಂದಿರು ವೆನು. ಈ ಉದ್ದೇಶವು ನಿನ್ನ ಸಹಾಯವಿಲ್ಲದೆ ಕೈಗೂಡಲಾರದು. ಇದ ನ್ನು ಪೂರ್ತಿಗೊಳಿಸತಕ್ಕ ಭಾರವು ನಿನ್ನ ದು. ಕೃಷ್ಣಾ! ಸಮಸ್ತ ಪಾಪಗಳ ನ್ಯೂ , ಅಮಂಗಳಗಳನ್ನೂ ನೀಗಿಸತಕ್ಕ ನಿನ್ನ ಪಾದಾರವಿಂದಗಳನ್ನು, ಮನೋ ವಾಕ್ಕಾಯಗಳೆಂಬ ತ್ರಿಕರಣಗಳಿಂದಲೂ ಯಾರು ಉಪಾಸನೆಮಾಡುವ ರೋ, ಅಂತವರುಮಾತ್ರವೇ ಸಂಸಾರನಿವೃತ್ತಿರೂಪವಾದ ಮೋಕ್ಷವನ್ನೂ,