ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೫ ಅಧ್ಯಾ, ೭೨.] ದಶಮುಸ್ಕಂಧವು. ಕಳುಹಿಸಿ, ಶತ್ರುರಾಜರನ್ನು ಜಯಿಸು ! ಸಮಸ್ತಭೂಮಿಯನ್ನೂ ಸ್ವಾಧೀನ ಪಡಿಸಿ ಅಲ್ಲಲ್ಲಿಂದ ಈ ಯಜ್ಞಕ್ಕೆ ಬೇಕಾದ ಸಾಮಗ್ರಿಗಳೆಲ್ಲವನ್ನೂ, ಸಿದ್ಧಪಡಿಸಿಕೊಂಡು, ಯಜ್ಞವನ್ನಾರಂಭಿಸು: ದಿಗ್ವಿಜಯವಿಷಯದಲ್ಲಿ ನೀನು ಸ್ವಲ್ಪವೂ ಸಂದೇಹಿಸಬೇಕಾದುದಿಲ್ಲ. ಈ ನಿನ್ನ ನಾಲ್ವರು ತಮ್ಮಂದಿರೂ ಮಹಾವೀರಾಗ್ರೇಸರರು ! ಲೋಕಪಾಲಾಂಶದಿಂದಲೇ ಹುಟ್ಟಿದವರು. ರಾಜಾ ! ನಿನಗೆ ಶತ್ರುರಾಜರು ವಶವಾಗುವುದು ಹಾಗಿರಲಿ ! ಎಂತಹ ಜಿತೇಂ ಬ್ರಿಯರಾದ ಯೋಗಿಗಳಿಗೂ ವಶನಾಗದ ನಾನೇ ನಿನ್ನ ಭಕ್ತಿಗೆ ವಶನಾ ಗಿರುವೆನು ! ಇನ್ನು ನಿನಗೆ ಅಸಾಧ್ಯವಾದುದೊಂದೂ ಇಲ್ಲವೆಂದು ತಿಳಿ! ನನ್ನ ಕ್ಲಿಯೇ ದೃಢಮನಸ್ಸಿಟ್ಟು ನನ್ನನ್ನು ನಂಬಿದವರಿಗೆ, ಎಲ್ಲಿಯೂ ಪರಾಭವವಿಲ್ಲ. ಅಂತವರನ್ನು ಸಾಕ್ಷಾದೇವೇಂದ್ರನಾದರೂ ತನ್ನ ತೇಜಸ್ಸಿನಿಂದಲಾಗಲಿ, ಯಶಸ್ಸಿನಿಂದಲಾಗಲಿ, ಸಂಪತ್ತಿನಿಂದಲಾಗಲಿ, ಸೇನೆ ಮೊದಲಾದ ಸಹಾಯ ಸಮೃದ್ಧಿಗಳಿಂದಾಗಲಿ ಮೀರಲಾರನು. ಇನ್ನು ಸಾಮಾನ್ಯರಾಜರಮಾ ತೇನು” ಎಂದನು. ಈ ಮಾತನ್ನು ಕೇಳಿದೊಡನೆ ಧರ್ಮರಾಜನು ಸಂತೋಷ ಬಂದರಳಿದಮುಖವುಳ್ಳವನಾಗಿ, ದೇವಾಂಶಸಂಭೂತರಾದ ತನ್ನ ತಮ್ಮಂದಿರನ್ನು ಕರೆದು, ದಿಗ್ವಿಜಯಕ್ಕಾಗಿ ಹೊರಡುವಂತೆ ನಿಯಮಿಸಿದನು. ಸಹದೇವನನ್ನು ಸೃಂಜಯರೊಡನೆ ದಕ್ಷಿಣದಿಕ್ಕಿಗೆ ಕಳುಹಿಸಿದನು. ನಕುಲ ನನ್ನು ಪಶ್ಚಿಮದಿಕ್ಕಿಗೂ, ಅರ್ಜುನನನ್ನು ಉತ್ತರದಿಕ್ಕಿಗೂ, ಭೀಮನನ್ನು ಮತ್ಕೇಕಯ, ಮದ್ರರಾಜರೊಡನೆ ಪೂಊದಿಕ್ಕಿಗೂ ಕಳುಹಿಸಿದನು. ಇವರೆಲ್ಲರೂ ಆಯಾದಿಕ್ಕಿಗೆ ಹೋಗಿ, ತಮ್ಮ ಬಲಪರಾಕ್ರಮಗಳಿಂದ ಅನೇಕ ರಾಜರನ್ನು ಜಯಿಸಿ, ಯಾಗರೀಕ್ಷಿತನಾದ ಧರ್ಮರಾಜನಿಗೆ ಅಪಾರಧನವನ್ನು ತಂದೊಪ್ಪಿಸಿದರು. ಆದರೇನು ? ಜರಾಸಂಧನೊಬ್ಬನುಮಾತ್ರ ಕೈವಶ ನಾಗದೆ, ಹೆಮ್ಮೆಯಿಂದಿರುವುದನ್ನು ನೋಡಿ, ಅವನನ್ನು ಜಯಿಸುವ ಉಪಾ ಯವೇನೆಂದು ಧರ್ಮರಾಜನು ತನ್ನಲ್ಲಿ ತಾನು ಚಿಂತಿಸುತ್ತಿದ್ದನು. ಸರಜ್ಞ ನಾದ ಕೃಷ್ಣನು ಇದನ್ನು ತಿಳಿದು ಧರ್ಮರಾಜನನ್ನು ಕುರಿತು, “ಓ ರಾಜೇಂ ದ್ರಾ! ನೀನು ಚಿಂತಿಸಬೇಡ ! ಆ ಜರಾಸಂಧನನ್ನು ನಿಗ್ರಹಿಸುವವಿಷಯ ದಲ್ಲಿ ಉದ್ದವನು ನಮಗೊಂದುಪಾಯವನ್ನು ತಿಳಿಸಿರುವನು ಆ ಉಪಾಯ