ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೩ ಶ್ರೀಮದ್ಭಾಗವತವು ಅಧ್ಯಾ, ೭೨. ದಿಂದ ಶೀಘ್ರದಲ್ಲಿಯೇ ನಾವು ಅವನನ್ನು ನಿಗ್ರಹಿಸಿ ಬರುವೆವು ” ಎಂದನು. ಒಡನೆಯೇ ಕೃಷ್ಣನೂ, ಭೀಮಾರ್ಜುನರೂ ಬ್ರಾಹ್ಮಣವೇಷವನ್ನು ಧರಿಸಿ, ಜರಾಸಂಧನ ರಾಜಧಾನಿಯಾದ ಗಿರಿವಜಕ್ಕೆ ಬಂದರು. ಅಲ್ಲಿ ಜರಾಸಂಧನು ಗೃಹಮೇಥಿಯಾಗಿ ಕರ್ಮಗಳನ್ನು ನಡೆಸಿ, ಬ್ರಾಹ್ಮಣರಿಗೆ ಆತಿಥ್ಯವನ್ನು ಮಾಡಿ ಸುತ್ತಿದ್ದ ಸಮಯಕ್ಕೆ ಸರಿಯಾಗಿ, ಈ ಮೂವರೂ ಬ್ರಾಹ್ಮಣ ಪ್ರಿಯನಾದ ಆ ಜರಾಸಂಧನನ್ನು ಕಂಡು ( ಅಯ್ಯಾ ! ನಿನಗೆ ಶುಭವಾಗಲಿ! ನಾವು ಬ್ರಾ ಹ್ಮಣರು! ಬಹುದೂರದಿಂದ ನಿನ್ನಲ್ಲಿಗೆ ಅತಿಥಿಗಳಾಗಿ ಬಂದಿರುವೆವು ನಾವು ಈಗ ಯಾವಕೋರಿಕೆಯಿಂದ ನಿನ್ನಲ್ಲಿಗೆ ಬಂದಿರುವೆವೋ ಅದನ್ನು ನಡೆಸಿಕೊಂ ಡುವಂತೆ ಮೊದಲು ನಮಗೆ ವಾಗ್ದಾನಮಾಡಬೇಕು! ಆದರೆ! (ಕೊಡಬಾರದ ವಸ್ತುವನ್ನು ಕೇಳಿದರೆ ಕೊಡುವುದಕ್ಕಾದೀತೆ ” ಎಂದು ನೀನು ಶಂಕಿಸ ಬಾರದು! ಸಹನಗುಣವುಳ್ಳವರಿಗೆ ಸಹಿಸಬಾರದುದೊಂದಿಲ್ಲ! ಹುಷ್ಯರಿಗೆ ಮಾಡಬಾರದುದಿಲ್ಲ! ಉದಾರಿಗಳಿಗೆ ಕೊಡಬಾರದುದಿಲ್ಲ. ಸಮದೃಷ್ಟಿ ಯುಳ್ಳವರಿಗೆ ಹೆರವರೆಂಬುದಿಲ್ಲ! ಈ ನ್ಯಾಯವನ್ನು ಸೀನೂ ಚೆನ್ನಾಗಿ ತಿಳಿದೇ ಇರುವೆ. ಲೋಕದಲ್ಲಿ ಯಾವಮನುಷ್ಯನು, ಅನಿತ್ಯವಾದ ಈ ಶರೀರದಿಂದ ಶಾಶ್ವತವಾದ ಯಶಸ್ಸನ್ನು ಸಂಪಾದಿಸಿಡುವನೋ ಅವನೇ ಉತ್ತಮನು. ಆ ಶಕ್ತಿಯಿರುವಾಗಲೂ ಕೀರ್ತಿಯನ್ನು ಗಳಿಸದಿರುವನೇ ನಿಂದ್ಯನು, ಅಂತ ವನ ಸ್ಥಿತಿಗಾಗಿ ಎಷ್ಟು ಪರಿತಪಿಸಿದರೂ ಸಾಲದು, ಅಷ್ಟೇಕೆ ? ಪೂರದಲ್ಲಿ ಹರಿಶ್ಚಂದ್ರನು ವಿಶ್ವಾಮಿತ್ರನಿಗಾಗಿ ತನ್ನ ಹೆಂಡರು ಮಕ್ಕಳನ್ನು ವಿಕ್ರಯಿಸಿ ತಾನೂ ಚಂಡಾಲನಾಗಲಿಲ್ಲವೆ ? ರಂತಿದೇವನು ನಾಲ್ವತ್ತೆಂಟುದಿನಗಳವರೆಗೆ ತನ್ನ ಹೆಂಡಿರುಮಕ್ಕಳೊಡನೆ ಅನ್ನಾ ಹಾರವಿಲ್ಲದೆ ತನಗೆ ಲಭಿಸಿದುದನ್ನೆಲ್ಲಾ ಆರ್ಥಿಗಳಿಗೆ ಕೊಡುತ್ತಿರಲಿಲ್ಲವೆ ? ಬಲಿಚಕ್ರವರ್ತಿಯು ವಾಮನನಿಗೆ ಭೂದಾ ನವನ್ನು ಮಾಡುವಾಗ, ತನ್ನ ತಲೆಯನ್ನೇ ಒಡ್ಡಲಿಲ್ಲವೆ ? ಹೀಗೆಯೇ ಉಂಛ ವೃತ್ತಿಯಲ್ಲಿದ್ದ ಮುದಲನು, ಆರುತಿಂಗಳವರಿಗೆ ತನ್ನ ಕುಟುಂಬದೊ ಡನೆ ಅನ್ನಾಹಾರವಿಲ್ಲದೆ ಕಷ್ಟಪಡುತ್ತಿದ್ದು, ತಾನುಮಾಡಿದ ಆತಿಥ್ಯದಿಂದ ಬ್ರಹ್ಮಲೋಕವನ್ನು ಸೇರಲಿಲ್ಲವೆ ? ತಿಬಿಚಕ್ರವರ್ತಿಯು ಒಂದು ಕಪೋತ ವನ್ನು ರಕ್ಷಿಸುವುದಕ್ಕಾಗಿ ಗಿಡುಗನಿಗೆ ತನ್ನ ದೇಹಮಾಂಸವನ್ನೇ ಒಪ್ಪಿಸ.