ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೮ ಶ್ರೀಮದ್ಭಾಗವತವು ಅಧ್ಯಾ, ೩೨೦ ಯಕುಲದಲ್ಲಿ ಹುಟ್ಟಿದವನು, ಎಂದಿದ್ದರೂ ನಾಶಹೊಂದತಕ್ಕ ಈ ಶರೀರ ದಿಂದ, ಆರ್ಥಿಗಳಾಗಿ ಬಂದ ಬ್ರಾಹ್ಮಣರನ್ನು ತೃಪ್ತಿಗೊಳಿಸಿ, ಅದರಿಂದ ಉತ್ತಮಕೀರ್ತಿಯನ್ನು ಸಂಪಾದಿಸದಿದ್ದ ಮೇಲೆ, ಅವನ ಜನ್ಮ ದಿಂದ ಪ್ರಯೋ ಜನವೇನು ?”ಎಂದು ಯೋಚಿಸುತ್ತ, ಅಜರಾಸಂಧನು ಉದಾರಬುದ್ಧಿಯಿಂದ ಕಷ್ಟಾರ್ಜುನಭೀಮರನ್ನು ಕುರಿತು « ಓ ಬ್ರಾಹ್ಮಣರೆ ! ನಿಮಗೆ ಬೇಕಾದು ದನ್ನು ಕೇಳಿರಿ : ನನ್ನ ತಲೆಯನ್ನಾ ದರೂ ಕತ್ತರಿಸಿಕೊಡುವುದಕ್ಕೆ ಸಿದ್ಧನಾ ಗಿರುವೆನು” ಎಂದನು. ಅದಕ್ಕಾ ಕೃಷ್ಣನು (4 ಓ ರಾಜೇಂದಾ ! ನಾವು ಮೂವರೂ ನಿನ್ನೊಡನೆ ದ್ವಂದ್ವಯುದ್ಧಕ್ಕಾಗಿ ಆಸೆಪಟ್ಟು ಬಂದಿರುವೆವು. ನಿನಗೆ ಸಮ್ಮತವಾದರೆ, ಈ ಯುದ್ಧಭಿಕ್ಷೆಯನ್ನು ಕೊಟ್ಟು ನಮ್ಮ ಕೋರಿಕೆಯ ಡೇರಿಸು!ನಾವು ಕ್ಷತ್ರಿಯರಾದುದರಿಂದ, ಯುದ್ಧವನ್ನ ಪೇಕ್ಷಿಸಿ ಬಂದವರೇ ಹೊರತು, ಇನ್ನಭಿಕ್ಷೆಗಾಗಿ ಬಂದವರಲ್ಲ! ಇದೋ ! ಇವನು ತುಂತಿಯ ಮಗ ನಾದ ವೃಕೋದರನು. ಇವನು ಅವನ ತಮ್ಮನಾದ ಅರ್ಜುನನು, ನಾನು ನಿನ್ನ ಶತ್ರುವಾದ ಕೃಷ್ಣನು. ಇವರಿಬ್ಬರಿಗೂ ಮಾವನ ಮಗನು!”ಎಂದನು. ಈ ಮಾತನ್ನು ಕೇಳಿದೊಡನೆ ಜರಾಸಂಘವು ತನ್ನ ಪಿರಮದದಿಂದ ಕೇಕೆ ಹಾಕಿ ನಗುತ್ತ,ಕೊಪಯುಕನಾಗಿ,ಕೃಷ್ಣನನ್ನು ಕುರಿತು ಓಮೂಢಾಃ ಕೃ ಪ್ರಾ! ನಿಮಗೆ ನನ್ನೊಡನೆ ಯುದ್ಧಮಾಡಬೇಕೆಂಬ ಆಸೆಯೆ? ಹಾಗೆಯೇ ಆಗ © .ಯುದ್ಧವನ್ನೇ ಕೂಡುವೆನು. ಆದರೆ ನೀನು ಇದಕ್ಕೆ ಮೊದಲು ನನ್ನೊ ಡನೆ ಯುದ್ಧ ಮಾಡಲಾರದೆ ಭಯಪಟ್ಟು, ಮಧುರಾಪುರಿಯನ್ನೇ ಬಿಟ್ಟು ಓಡಿ ಹೋಗಿ ಸಮುದ್ರಮಧ್ಯದಲ್ಲಿ ಸೇರಿಕೊಂಡವನಲ್ಲವೆ ? ಆದುದರಿಂದ ಭೀರು ವಾದ ನಿನ್ನೊಡನೆ ತಿರುಗಿ ಯುದ್ಧಕ್ಕೆ ನಿಲ್ಲುವುದು ನನಗೆ ಅವಮಾನಕರವಾದು ದರಿಂದ, ನಿನ್ನೊಡನೆ ಯುದ್ಧಮಾಡಲಾರೆನು. ಈ ಅರ್ಜುನನಾದರೂ ವಯಸ್ಸಿನಲ್ಲಿ ನನಗಿಂತಲ ಬಹಳಸಣ್ಣವನು, ಪರಾಕ್ರಮದಲ್ಲಿಯೂ ನನಗೆ ಸಮಾನನಲ್ಲ ! ಆದುದರಿಂದ ಇವನೊಡನೆಯೂ ನಾನು ಯುದ್ಧಮಾಡ ಲಾರೆನು, ನಿಮ್ಮಲ್ಲಿ ಈ ಭೀಮನೊಬ್ಬನೇ ! ನನಗೆ ಸಮಾನಬಲವುಳ್ಳವನುಅವನೊಡನೆ ಯುದ್ಧಮಾಡುವೆನು” ಎಂದು ಹೇಳಿ,ತನ್ನಲ್ಲಿದ್ದ ಒಂದಾನೊಂದು ದೊಡ್ಡಗದೆಯನ್ನು ತಂದು,ತಾನೇಭೀಮನ ಕೈಗೆ ಕೊಟ್ಟನು.ತಾನೂ ಒಂದು