ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

of ಶ್ರೀಮದ್ಭಾಗವತವು [ಅಧ್ಯಾ. ೫೦ ಅತ್ತಲಾಗಿ ಬಲರಾಮನೂಕೂಡ, ತನ್ನ ಮುಸಲಾಯುಧವನ್ನು ಹಿಡಿದು, ಸಮುದ್ರದಂತೆ ದುರ್ಗಮವಾದ ಜರಾಸಂಧನ ಸೈನ್ಯವನ್ನು ಪ್ರವೇಶಿಸಿ, ತನ್ನ ಅಪ್ರಮೇಯವಾದ ಪರಾಕ್ರಮದಿಂದ ನಾನಾಕಡೆಗಳಲ್ಲಿಯೂ ಧ್ವಂಸಮಾ ಡುತ್ತಬಂದನು. ಲೋಕನಾಯಕರಾದ ಆ ರಾಮಕೃಷ್ಣರಿಬ್ಬರೇ ಹೀಗೆ ಆ ಜರಾಸಂಧನ ಸಮಸ್ತಸೈನ್ಯವನ್ನೂ .ಲೀಲಾಮಾತ್ರದಿಂದ ನಿಗ್ರಹಿ ಸುತ್ತ ಬಂದರು. ಓ ಪರಿಕ್ಷಿದ್ರಾಜಾ ! ಆ ರಾಮಕೃಷ್ಣರ ಪರಾಕ್ರಮಕ್ಕೆ ಇಪ್ಪತ್ತು ಮೂರು ಆ ಆಕ್ರೋಹಿಣೀಸೈನ್ಯವನ್ನು ನಾಶಮಾಡುವುದೇನೂ ವಿಶೇಷವೆಂದು ತಿಳಿಯಬೇಡ ! ಅನಂತಕಲ್ಯಾಣಗುಣಪರಿಪೂರ್ಣನಾದ ಯಾವ ಭಗವಂತನು, ತನ್ನ ಇಚ್ಛಾಮಾತ್ರದಿಂದಲೇ ಮೂರುಲೋಕಗಳ ಸೃಷ್ಟಿಸ್ಥಿತಿ ಸಂಹಾರೆಗಳನ್ನು ನಡೆಸುತ್ತಿರುವನೋ, ಅವನಿಗೆ ಈ ಸ್ವಲ್ಪ ಸೈನ್ಯವನ್ನ ಡಗಿಸುವುದೊಂದು ಕಷ್ಟವೆ? ಹಾಗಿದ್ದರೂ ಆತನು ಈಗ ಮನುಷ್ಯಲೀಲೆಯನ್ನನುಕರಿಸುತ್ತಿರುವಾಗ, ಸಾಮಾನ್ಯ ಮನುಷ್ಯರಿಗೆ ಸಾಧ್ಯ ವಲ್ಲದ ಈ ಕಾವ್ಯವನ್ನು ನಡೆಸಿದುದರಿಂದ, ಇದೊಂದು ಆಶ್ವರ ಚರಿತ್ರವಾಗಿ ವರ್ಣಿಸಲ್ಪಡುವುದೇಹೊರತು ಬೇರೆಯಲ್ಲ. ಹೀಗೆ ತನ್ನ ಸಮಸ್ತ ಸೈನ್ಯ ಗಳೂ ಹತವಾಗುತ್ತಿರುವುದನ್ನೂ, ಅಲ್ಲಲ್ಲಿ ಸತ್ತುಳಿದ ಕೆಲವು ಸೈನ್ಯಗಳು ನಾನಾಕಡೆಗೆ ಪಲಾಯನಮಾಡುತ್ತಿರುವುದನ್ನೂ ನೋಡಿ ಜರಾಸಂಧನಿಗೆ ಅತ್ಯಾಕ್ರೋಶವುಂಟಾಯಿತು. ಈ ಕೋಪದಿಂದ ಜರಾಸಂಧನು ತನ್ನ ರಥ ವನ್ನು ಬಲರಾಮನ ಸಮೀಪಕ್ಕೆ ವೇಗದಿಂದ ನಡಿಸಿಕೊಂಡು ಹೋಗಲು, ಬಲರಾಮನು ಅವನ ರಥವನ್ನು ಮುರಿದು, ಸಿಂಹವು ಕ್ಷುದ್ರಮೃಗವನ್ನು ಹಿಡಿ ಯುವಂತೆ ಅವನನ್ನು ಹಿಡಿದು ಕಟ್ಟುವುದಕ್ಕೆ ಯತ್ನಿಸಿದನು. ಸಮಸ್ತ ಸೈನ್ಯವೂ ಹತವಾಗಿ ಪ್ರಾಣಮಾತ್ರದಿಂದುಳಿದಿರುವ ಆ ಜರಾಸಂಧನನ್ನು ಹಿಡಿದುತಂದು,ಬಲರಾಮನು ಹಗ್ಗಗಳಿಂದಲೂ, ವರುಣಪಾಶಗಳಿಂದಲೂಕಟ್ಟೆ ರುವುದನ್ನು ನೋಡಿ ಕೃಷ್ಣನು, ಮುಂದೆ ತಮ್ಮಿಂದ ನಡೆಯಬೇಕಾದ ಕಾಲ್ಯ ಗಳಿಗಾಗಿ ಆ ಜರಾಸಂಧನನ್ನು ಬಿಟ್ಟುಬಿಡುವಂತೆ ತನ್ನಣ್ಣನಾದ ಬಲರಾಮ ನನ್ನು ಪ್ರಾರ್ಥಿಸಿಕೊಂಡನು. ಅದರಂತೆಯೇ ಬಲರಾಮನು, ಆ ಜಲಸಂಧ ನನ್ನು ಬಿಟ್ಟು ಬಿಟ್ಟ ಮೇಲೆ, ಆತನು ಲಜ್ಜೆಯಿಂದ ಬೇರೊಬ್ಬರಿಗೆ ಮುಖವನ್ನು