ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೦ ಶ್ರೀಮದ್ಭಾಗವತವು [ಅಧ್ಯಾ, ೭೨. ಯವೇನೆಂದು ತನ್ನಲ್ಲಿ ನಿಶ್ಚಯಿಸಿಕೊಂಡನು, ಒಡನೆಯೇ ಭೀಮನಲ್ಲಿ ತನ್ನ ತೇಜೋಬಲವನ್ನು ಆರೋಪಿಸಿ, ಅವನಿಗೆ ವೀರೋದ್ರೇಕವನ್ನುಂಟು ಮಾಡಿದನು. ಆಭೀಮನು ನೋಡುತ್ತಿರುವಹಾಗೆಯೇ ಸಮೀಪದಲ್ಲಿದ್ದ ಒಂ ದಾನೊಂದು ಮರದ ಕೊಂಬೆಯನ್ನು ಸೀಳುವ ನೆವದಿಂದ ಜರಾಸಂಧನ ದೇ ಹವನ್ನು ಸೀಳಿಹಾಕತಕ್ಕ ರೀತಿಯನ್ನು ಆ ಭೀಮನಿಗೆ ಸಂಜ್ಞೆ ಮಾಡಿ ತೋರಿಸಿ ದನು. ಒಡನೆಯೇ ಭೀಮನು ಈ ಸಂಜ್ಞೆಯನ್ನು ತಿಳಿದುಕೊಂಡು ಮುಂದೆ ನುಗ್ಗಿ, ಆ ಜರಾಸಂಧನನ್ನು ಬಲಾತ್ಕಾರದಿಂದ ಹಿಡಿದು, ಅವನ ಒಂದುಕಾ ಕಾಲನ್ನು ತನ್ನ ಕಾಲಿನಿಂದ ಮೆಟ್ಟಿಕೊಂಡು, ಮತ್ತೊಂದು ಕಾಲನ್ನು ತನ್ನ ಎರಡುಕೈಗಳಿಂದಲೂ ಬಲವಾಗಿ ಹಿಡಿದು, ಆನೆಯು ಮರದ ಕೊಂಬೆಯನ್ನು ಸೀಳುವಂತೆ ಗುದದ್ವಾರದಿಂದ ಮೇಲಕ್ಕೆ ಅವನದೇಹವನ್ನು ಸೀಳಿ,ಅವೆರಡನ್ನೂ ಪ್ರತ್ಯೇಕವಾಗಿ ದೂರದೂರಕ್ಕೆ ಬಿಸಾಡಿಬಿಟ್ಟನು. ಜರಾಸಂಧನ ದೇಹವು ಎ ರಡುಸೀಳಾಗಿ ಬಿದ್ದಿತು,ಒಂದೊಂದು ತುಂಡಿನಲ್ಲಿಯೂ, ಒಂದು ಕಾಲು, ಒಂ ದು ತೊಡೆ, ಒಂದುಬೀಜ, ಅರ್ಧನಡು, ಅರ್ಧಬೆನ್ನು, ಒಂದೇಮೊಲೆ, ಒಂದೇ ಹೆಗಲು,ಒಂದೇತೋಳು, ಒಂದೇಹುಬ್ಬು, ಒಂದೇಕಣ್ಣು, ಒಂದೇ ಕಿವಿ, ಹೀಗೆ ಅರ್ಧಾವಯವಗಳುಮಾತ್ರವೇ ಇರುವುದನ್ನು ನೋಡಿ, ಜನರೆಲ್ಲರೂ ಭಯಾ ಶರಗಳಿಂದ ಸ್ತಬ್ಬರಾಗಿದ್ದರು. ಜರಾಸಂಧನ ವಧವನ್ನು ನೋಡಿ ಅವನ ಕಡೆ ಯವರೆಲ್ಲರೂ ಹಾಹಾಕಾರದಿಂದ ಅರಚುತಿದ್ದರು, ಕೃಷ್ಣಾರ್ಜುನರಿಬ್ಬರೂ ಮುಂದೆ ಬಂದು ಭೀಮನನ್ನಾಲಿಂಗಿಸಿ ಮನ್ನಿಸಿದರು. ಪರಮಪುರುಷನಾದ ಕೃಷ್ಣನ ಅಂಗಸ್ಪರ್ಶಮಾತ್ರದಿಂದ ಭೀಮನಿಗೆ ಯುದ್ಧಶ್ರಮವೇ ತೋರದೆ, ಅವನ ಮುಖದಲ್ಲಿ ಉಲ್ಲಾಸವು ತುಳುಕುತ್ತಿತ್ತು, ಆಮೇಲೆ ಕೃಷ್ಣ ನು, ಜರಾಸಂಧನ ಮಗನಾದ ಸಹದೇವನಿಗೆ ಮಗಧರಾಜ್ಯದ ಪಟ್ಟಾಭಿ ಷೇಕವನ್ನು ಮಾಡಿ, ಜರಾಸಂಧನು ಸೆರೆಯಲ್ಲಿಟ್ಟಿದ್ದ ರಾಜರೆಲ್ಲರನ್ನೂ ಬಿಡಿಸಿ,ಅವರವರ ರಾಜ್ಯಗಳಿಗೆ ಕಳುಹಿಸಿಕೊಟ್ಟನು, ಇದು ಎಪ್ಪತ್ತೆರಡನೆಯ ಅಧ್ಯಾಯವು.