ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೨ ಶ್ರೀಮದ್ಭಾಗವತವು [ಅಧ್ಯಾ, ೭೩. ವೂ ನಿನ್ನದಾಗಿದೆ! ಓನಾಥಾ ! ಮಧುಸೂದನಾ ! ಆ ಜರಾಸಂಧನು ನಮ್ಮ ನ್ನು ಸೆರೆಯಲ್ಲಿ ನಿರ್ಬಂಧಿಸಿಟ್ಟಿದ್ದುದಕ್ಕಾಗಿ ನಾವು ಸ್ವಲ್ಪವೂ ಅವನಮೇಲೆ ಕೋಪಿಸಲಾರೆವು, ಏಕೆಂದರೆ, ನಾವು ರಾಜ್ಯಭಷ್ಟರಾಗಿ ಸೆರೆಯಲ್ಲಿ ಸಿಕ್ಕಿ ಬಿದ್ದುದರಿಂದಲ್ಲವೇ, ಈಗ ನಿನ್ನ ಅನುಗ್ರಹಕ್ಕೆ ಪಾತ್ರರಾ : ನಿನ್ನನ್ನು ಸಾಕ್ಷಾ ತಾಗಿ ನೋಡುವ ಭಾಗ್ಯವು ಲಭಿಸಿತು. ಆದುದರಿಂದ ಜರಾಸಂಧನ ನಿರ್ಬo ಧವೂ ನಮಗೆ ಗುಣರೂಪವಾಗಿಯೇ ಪರಿಣಮಿಸಿತು. ರಾಜ್ಯಾಧಿಕಾರದಲ್ಲಿರ ತಕ್ಕ ರಾಜನು, ತನ್ನ ಐಶ್ವರಮದದಿಂದ ಬೀಗಿಬೆರೆಯುತ್ತ,ತನ್ನ ಶ್ರೇಯಸ್ಸಿಗೆ ದಾರಿಯನ್ನೇ ತಿಳಿಯಲಾರನು. ಅಂತವನು ನಿನ್ನ ಮಾಯೆಯಿಂದ ಮೋಹಿತ ನಾಗಿ, ಅನಿತ್ಯವಾದ ಭೋಗಸಮೃದ್ಧಿಯನ್ನೆ ನಿತ್ಯವೆಂದು ಭ್ರಮಿಸುವನು. ಅರಿಯದ ಬಾಲಕರು ಬಿಸಿಲ್ಗೊರೆಯನ್ನು ಕಂಡು ಸೀರೆಂದು ಭಮಿಸು ವಂತೆ, ಅವಿವೇಕಿಗಳು ನಿನ್ನ ಮಾಯಾವಿಕಾರಗಳಾದ ಭೋಗಸಾಮಗ್ರಿಗಳ « ತಮಗೆ ಸುಖಹೇತುವೆಂದು ಭ್ರಮಿಸುವರು.ಓ ಪ್ರಭೂ! ಹಿಂದೆ ನಾವು ರಾಜ್ಯಾಧಿಕಾರದಲ್ಲಿರುವಾಗ, ಐಶ್ವ-ಮದದಿಂದ ಮುಂಗಾಣದಿದ್ದೆವು. ರಾಜ್ಯವನ್ನು ಹೆಚ್ಚಿಸಬೇಕೆಂಬ ದುರಾಸೆಯಿಂದ, ನಮ್ಮ ರಾಜಕುಲ ದಲ್ಲಿಯೇ ಒಬ್ಬರಿಗೊಬ್ಬರು ಹೋರಾಡುತ್ತ, ನಮ್ಮ ಬೆನ್ನ ಹಿಂದೆ ಕಾದಿರುವ ಮೃತ್ಯುವನ್ನೂ ತಿಳಿಯದೆ, ದಯಾಶೂನ್ಯರಾಗಿ ಪ್ರಜೆಗಳನ್ನು ಕೊಲ್ಲು ತಿದ್ದೆವು. ಹಾಗೆ ಮದಾಂಧರಾಗಿದ್ದ ನಾವೇ, ಈಗ, ನಿನ್ನ ಶರೀರಭೂ ತವಾದ ಕಾಲದಿಂದ, ರಾಜ್ಯಭಷ್ಯರಾಗಿ, ಹೆಮ್ಮೆಯಡಗಿದ್ದೆವು ! ನಿನ್ನ ಅನುಗ್ರಹದಿಂದಲೇ ಈಗ ನಿನ್ನ ಪಾದಸಾನ್ನಿಧ್ಯವನ್ನು ಸೇರಿದೆವು. ಆದುದ ರಿಂದ, ಇನ್ನು ಮೇಲಾದರೂ ನಮಗೆ, ಅನೇಕರೋಗಗಳಿಗೆ ಗುರಿಯಾಗಿ,ಯಾ ವಾಗಲೋ ನಾಶಹೊಂದತಕ್ಕ ಈದೇಹದಲ್ಲಿ ಮೃಗತೃಷ್ಟೆ (ಬಿಸಿಲ್ಗೊರೆ) ಗೆ ಸಮಾನವಾದ ರಾಜ್ಯಸುಖದಾಸೆಯು ಹುಟ್ಟಿದಂತೆ ಅನುಗ್ರಹಿಸು, ಮತ್ತು, ದೇಹಾವಸಾನದಲ್ಲಿ ಯಜ್ಞಯಾಗಾದಿಕರಗಳಿಗೆ ಫಲವಾಗಿ ಲಭಿಸತಕ್ಕ ಸ್ವ ರ್ಗಾದಿಸುಖಗಳೂಕೂಡ,ಕೇಳುವಾಗಮಾತ್ರ ಕಿವಿಗಿಂಪಾಗಿರುವುದೇ ಹೊರ ತು,ಅದನ್ನನುಭವಿಸುತ್ತಿರುವಷ್ಟು ಕಾಲವೂ,ಆಪುಣ್ಯಫಲವು ಎಂದಿಗೆ ತೀರಿಹೋ ಗುವುದೋ ಎಂಬಭಯಕ್ಕೆ ಕಾರಣವಾಗಿ, ದುಃಖಮಿಶ್ರವಾಗಿಯೇ ಇರುವುದು.