ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನ್ಯಾ. ೭೩ -] ದಶಮಸ್ಕಂಧನ. ೨೨೬೩ ಆದುದರಿಂದ ಆ ಸ್ವರ್ಗಾದಿಸುಖಗಳನ್ನೂ ನಾವು ಕೋರುವವರಲ್ಲ. ನಮಗೆ ಈ ಸಂಸಾರಸಂಬಂಧವು ಬಿಟ್ಟು ಹೋಗುವವರೆಗೆ, ನಿನ್ನ ಪಾದಾರವಿಂದಗಳ ಸ್ಮರಣವು ತಪ್ಪದಿರುವುದಕ್ಕೆ ಉಪಾಯವೇನೋ ಅದನ್ನು ಅನುಗ್ರಹಿಸ ಬೇಕು, ಕೃಷ್ಣಾ ! ವಾಸುದೇವಾ ! ಹರೀ ! ಪರಮಾತ್ಮಾ ! ಆರ್ತಾರ್ತಿ ಹರಾ ! ಗೋವಿಂದಾ ! ನಿನಗೆ ಬಾರಿಬಾರಿಗೂ ನಮಸ್ಕಾರವು” ಎಂದರು. ಹೀಗೆ ರಾಜರು ಸ್ತೋತ್ರಮಾಡುವುದನ್ನು ಕೇಳಿ, ಭಕ್ತವತ್ಸಲನಾದ ಕೃಷ್ಣನು ಕೃಪಾವಶನಾಗಿ, ಅವರನ್ನು ಕುರಿತು ಮಧುರವಾಕ್ಯದಿಂದ ಹೀಗೆಂ ದು ಹೇಳುವನು, (1 ಎಲೈ ರಾಜರೆ ! ಅದೃಷ್ಟವಶದಿಂದ ನಿಮಗೆ ಈ ಸದ್ದು ಹೈಯು ಹುಟ್ಟಿರುವುದು, ಇದುಮೊದಲು ನಿಮಗೆ, ನಿಮ್ಮ ಉದ್ದೇಶದಂತೆ, ಅಖಿಲೇಶ್ವರನಾದ ನನ್ನಲ್ಲಿ ದೃಢವಾದ ಭಕ್ತಿಯು ಹುಟ್ಟಲಿ ! ಮನುಷ್ಯರು ಐಶ್ವರದಿಂದಲೂ, ಅಧಿಕಾರದಿಂದಲೂ ಮತ್ತರಾಗಿ ತಮ್ಮ ಶ್ರೇಯಸ್ಸನ್ನು ಕಾಣದಿರುವರೆಂದು ನೀವು ಹೇಳಿದುದೇನೋ ವಾಸ್ತವವೇ ! ಈಗ ನಿಮ್ಮ ಪ್ರವರ್ತನವು ಸಾಧುಸಮ್ಮತವಾದುದು, ಹಿಂದೆ ಕಾರ್ತವೀರ್, ನಹುಷ, ವೇನ, ರಾವಣ, ನರಕಾಸುರಾದಿರಾಜರೂ, ಇನ್ನೂ ಅನೇಕದೇವದಾನವರೂ ತಮ್ಮ ಐಶ್ವರಮದದಿಂದಲೇ ತಮಗಿದ್ದ ಉತ್ತಮಪದವಿಯನ್ನು ಕಳೆದು ಕೊಂಡರು. ಇದನ್ನು ನೀವು ಚೆನ್ನಾಗಿ ನೆನಪಿನಲ್ಲಿಟ್ಟು, ಈ ದೇಹಾದಿಗಳು ಹುಟ್ಟಿದಹಾಗೆ ಎಂದಿದ್ದರೂ ನಾಶಹೊಂದತಕ್ಕವುಗಳೆಂಬುದನ್ನೂ ತಿಳಿದು, ನಿಮ್ಮ ಜೀವಿತಕಾಲದವರೆಗೆ ಯಜ್ಞಾದಿಗಳಿಂದ ನನ್ನ ನ್ಯಾ ರಾಧಿ ಸುತ್ತ, ಧಮ್ಮದಿಂದ ಪ್ರಜೆಗಳನ್ನು ಪಾಲಿಸುತ್ತಿರಬೇಕು, ಪುತ್ರಪೌತ್ರಾದಿ ಗಳಿಂದ ನಿಮ್ಮ ಸಂತಾನವನ್ನು ವೃದ್ಧಿಗೊಳಿಸಬೇಕು! ಜನನಮರಣಗಳಲ್ಲಿಯಾ ಗಲಿ, ಸುಖದುಃಖಾದಿದ್ವಂದ್ವಗಳಲ್ಲಿಯಾಗಲಿ ಮನಸ್ಸು ಕಲಗದೆ, ಸಮಬುದ್ದಿ ಯಿಂದ ಸಹಿಸಿಕೊಳ್ಳುತ್ತ, ನನ್ನಲ್ಲಿಯೇ ನಟ್ಟ ಮನಸ್ಸುಳ್ಳವರಾಗಿ, ನಿಮ್ಮ ಕಾ ಲಶೇಷವನ್ನು ಕಳೆಯಿರಿ! ದೇಹಾದಿಗಳಲ್ಲಿ ಅಹಂಕಾರಮಮಕಾರಗಳನ್ನು ತ್ಯಜಿಸಿ,ಉದಾಸೀನರಾಗಿದ್ದು, ಆತ್ಮ ಪರಮಾತ್ಮತತ್ವವನ್ನು ಯಥಾಸ್ಥಿತವಾಗಿ ತಿಳಿಯುತ್ತಿರಿ ! ಈ ರೀತಿಯಿಂದ ನಿಮ್ಮ ಪ್ರಾರಬಕರಗಳನ್ನು ಕಳೆದ ಮೇಲೆ, ನೀವು ನನ್ನ ಸಾನ್ನಿಧ್ಯವನ್ನು ಸೇರಬಹುದು.”ಎಂದನು, ಸಲ್ವೇಶ್ವರನಾ 113 B