ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೬ ಶ್ರೀಮದ್ಭಾಗವತವು [ಅಧ್ಯಾ ೭೪. ವೃದ್ಧಿಗಳು ನಿನ್ನಲ್ಲಿಲ್ಲವೆಂಬುದನ್ನು ಹೇಳತಕ್ಕುದೇನು ? ಹೀಗೆ ಸಭೂತ ಸಮನಾದ ನೀನು, ಈಗ ನನ್ನಿಂದ ನಡೆಸಲ್ಪಡುವ ಯಜ್ಞವು ಪೂರ್ತಿಯಾಗು ವಂತೆ ಅನುಗ್ರಹಿಸಬೇಕು ” ಎಂದು ಹೇಳಿ ಕೃಷ್ಣನ ಅನುಜ್ಞೆಯನ್ನು ಪ ಡೆದು, ಯೋಗ್ಯವಾದ ಕಾಲದಲ್ಲಿ, ಬ್ರಹ್ಮವಾದಿಗಳಾದ ಬ್ರಾಹ್ಮಣೋ ತಮರನ್ನು ತನ್ನ ಯಾಗದಲ್ಲಿ ಋತ್ವಿಕ್ಕುಗಳಾಗಿರುವಂತೆ ಪ್ರಾರ್ಥಿಸಿ ಕೊಂಡನು. ಇದಕ್ಕಾಗಿ ಕೃಷ್ಣಪಾಯನ, ಭರದ್ವಾಜ, ಸುಮಂ ತು, ಗೌತಮ, ಅಸಿತ, ವಸಿಷ್ಠ, ಚ್ಯವನ, ಕಣ್ಯ, ಮೈತ್ರೇಯ, ಕವಷ, ತ್ರಿತ, ವಿಶ್ವಾಮಿತ್ರ, ವಾಮದೇವ, ಸುಮತಿ, ಜೈಮಿನಿ, ಕೃತು, ಪೈಲ, ಪರಾಶರ, ಆಗಸ್ಯ, ವೈಶಂಪಾಯನ, ಆಧರೂ, ಕಶ್ಯಪ, ದೌಮ್ಯ, ಪರಶು ರಾಮ, ಆಸುರಿ, ವೀತಿಹೋತ್ರ, ಮಧುಚಂದ, ವೀರಸೇನ, ಆಕೃತವ್ರಣ, ಮುಂತಾದ ಮಹರ್ಷಿಶ್ನೆಷ್ಟರೆಲ್ಲರನ್ನೂ ಕರೆಸಿದನು. ಭೀಷ್ಮದೋಣಕೃಪಾ ಒಗಳನ್ನೂ ಪ್ರಾರ್ಥಿಸಿ ಕರೆತಂದನು. ದುರೊಧನನೇ ಮೊದಲಾದ ನೂರು ಮಂದಿ ಪುತ್ರರೊಡನೆ, ದೃತರಾಷ್ಟ್ರನನ್ನೂ , ಮಹಾಥೀಮಂತನಾದ ವಿದು ರನನ್ನೂ ಆಹ್ವಾನಮಾಡಿದನು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಣದವರೂ, ಅನೇಕವೇಶಾಧಿಪತಿಗಳೂ, ಅವರ ಕಡೆಯ ಆಥಿ ಕಾರಿಗಳೂ, ಈ ಯಜ್ಞವನ್ನು ನೋಡಬೇಕೆಂಬ ಕುತೂಹಲದಿಂದ ಬಂದು ಸೇರಿದರು, ಆಮೇಲೆ ಕೆಲವುಬ್ರಾಹ್ಮಣೋತ್ತಮರು, ಚಿನ್ನ ದ ನೇಗಿಲಿನಿಂದ ಯಾಗಭೂಮಿಯನ್ನು ಉತ್ತು ಶುದ್ಧಿಮಾಡಿ, ಧರ್ಮರಾಜನನ್ನು ಶಾಸ್ಕೂಕ್ಕ ವಾಗಿ ದೀಕ್ಷೆಯಲ್ಲಿರಿಸಿದರು. ಹಿಂದೆ ವರುಣಯಾಗದಲ್ಲಿ ಹೇಗೋಹಾಗೆ ಸುವರಮಯವಾದ ಉಪಕರಣಗಳನ್ನಿಟ್ಟು ಯಜ್ಞವನ್ನಾರಂಭಿಸಿದರು. ಇಂದ್ರಾದಿಲೋಕಪಾಲಕರೂ, ಬ್ರಹ್ಮರುದ್ರರೂ, ಸಿದ್ಧ ಗಂಧತ್ವ ವಿಧ್ಯಾಧರ ರಾಕ್ಷಸ ಮಹೋರಗರೂ, ಪನ್ನ ಗರೂ, ಕಿನ್ನರರೂ, ಚಾರ ಣರೂ, ಅನೇಕಮಹರ್ಷಿಗಳೂ, ರಾಜರೂ, ರಾಜಪತ್ನಿ ಯರೂ ಬಂದುಸೇರಿ ದರು.ಸಾಕ್ಷಾತ್ತಾಗಿ ಕೃಷ್ಣನ ಅನುಗ್ರಹದಿಂದ ನಡೆಯತಕ್ಕ ಈಧರ್ಮರಾಜನ ರಾಜಸೂಯಯಾಗದ ವೈಭವವನ್ನು ನೋಡಲು, ಎಲ್ಲರೂ ಕುತೂಹಲ ವಿಶಿಷ್ಯರಾಗಿದ್ದರು, ಹಿಂದೆ ದೇವತೆಗಳು ವರುಣನಿಂದ ಹೇಗೋಹಾಗೆ,