ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೦.] ದಶಮಸ್ಕಂಧವು. ತೋರಿಸಲಾರದೆ, ಅಲ್ಲಿಂದ ಹಾಗೆಯೇ ತಪಸ್ಸಿಗಾಗಿ ಕಾಡಿಗೆ ಹೋಗಬೇ ಕೆಂದು ನಿಶ್ಚಯಿಸಿ ಹೊರಟುಬಿಟ್ಟನು.ಇಷ್ಟರಲ್ಲಿ ಅವನ ಮಿತ್ರರಾದ ಶಿಶುಪಾ ಲಾದಿರಾಜರು, ದಾರಿಯಲ್ಲಿ ಅವನನ್ನು ತಡೆದು, ಅವನ ಮನಸ್ಸಿಗೊಪ್ಪುವಂತೆ ನ್ಯಾಯನೀತಿಗಳಿಂದ ಸಮಾಧಾನವನ್ನು ಹೇಳತೊಡಗಿ «ಓ ವೀರಾಗ್ರಣೀ ! ನೀನಾದರೋ ಲೋಕೈಕವೀರನು. ಅಲ್ಪಬಲವುಳ್ಳ ಯಾದವರಿಂದ ನಿನಗೆ ಈ ವಿಧವಾದ ಪರಾಭವವುಂಟಾಗಬೇಕಾದರೆ, ಇದು ನಿನ್ನ ದುಷ್ಕಾಲವಲ್ಲದೆ ಬೇರೆಯಲ್ಲ. ಕಾಲವು ಆನುಕೂಲಿಸಿ ಬರುವವರೆಗೂ ನಾವು ನಮ್ಮ ಪ್ರಯತ್ನ ವನ್ನು ಬಿಡಬಾರದು,” ಎಂದು ಹೇಳಿ ತತ್ವಬೋಧೆಗಳಿಂದಲೂ, ಲೌಕಿಕ ನ್ಯಾಯಗಳಿಂದಲೂ, ಅವನನ್ನು ನಿವಾರಿಸಿದರು. ಕೊನೆಗೆ ಜರಾ ಸಂಧು ಅವರ ಮಾತನ್ನು ನಿರಾಕರಿಸಲಾರದೆ, ತನ್ನ ಸೈನ್ಯಗಳೆಲ್ಲವೂ ಹತ ವಾದುದನ್ನೂ, ತನಗುಂಟಾದ ಅವಮಾನವನ್ನೂ ನೆನೆಸಿಕೊಂಡು ದುಖಿ ಸುತ್ತ ತನ್ನ ರಾಜಧಾನಿಯನ್ನು ಸೇರಿದನು. ಇತ್ತಲಾಗಿ ಶ್ರೀಕೃಷ್ಣನೂ ಕೂಡ, ತನ್ನ ಸೈನ್ಯಗಳಿಗೆ ಯಾವ ಅಪಾಯವೂ ಇಲ್ಲದೆ ತಾನು ಶತ್ರುಸೈನ್ಯ ವೆಂಬ ಮಹಾಸಮುದ್ರವನ್ನು ಸುಲಭವಾಗಿ,ದಾಟಿ,ತನ್ನ ಅರಮನೆಗೆ ಹಿಂತಿರು ಗಿದನು. ದೇವತೆಗಳೆಲ್ಲರೂ ನಾನಾವಿಧವಾಗಿ ಕೃಷ್ಣನನ್ನು ಸ್ತುತಿಸುತ್ತ ಪುಷ್ಪ ವರ್ಷವನ್ನು ಕರೆದರು. ಮಧುರಾಪುರನಿವಾಸಿಗಳೆಲ್ಲರೂ ಸಂತೋಷ ದಿಂದ ಕೊಂಡಾಡುತಿದ್ದರು. ಸೂತ, ಮಾಗಧ, ವಂದಿಗಳೆಲ್ಲರೂ ಜಯಘೋಷವನ್ನು ಮಾಡುತಿದ್ದರು. ಆ ಪಟ್ಟಣದ ನಾನಾಕಡೆಗಳಲ್ಲಿಯೂ ಶಂಖ, ದುಂದುಭಿ, ಭೇರಿ, ತೂರ, ವೀಣೆ, ಮೃದಂಗಗಳೇ ಮೊದಲಾದ ವಾದ್ಯಗಳು ನುಡಿಸಲ್ಪಡುತ್ತಿದ್ದುವು. ಬೀದಿಬೀದಿಗಳಲ್ಲಿಯೂ ಜನರು ಸಂತೋ ಷದಿಂದ ಗುಂಪುಗೂಡಿದ್ದರು. ಆ ಪಟ್ಟಣದ ಒಂದೊಂದು ಬೀದಿಯೂ ಧ್ವಜಪತಾಕೆಗಳಿಂದಲೂ, ಜಲಸೇಚನದಿಂದಲೂ, ಮಕರತೋರಣಗಳಿಂ ದಲೂ, ಬ್ರಾಹ್ಮಣರ ವೇದಘೋಷಗಳಿಂದಲೂ ಶೋಭಿಸುತ್ತಿತ್ತು. ಹೀಗೆ ಸಾಲಂಕಾರಭೂಷಿತವಾದ ಆ ಮಧುರಾಪುರದ ಬೀದಿಯಲ್ಲಿ ಕೃಷ್ಣನು ಬರುತ್ತಿರುವಾಗ, ಅಲ್ಲಿನ ಪರಸ್ತ್ರೀಯರೆಲ್ಲರೂ ಮೊಸರು, ಅಕ್ಷತೆ, ಗರಿಕೆ ಪಷಮಾಲಿಕೆ, ಮೊದಲಾದ ಮಂಗಳದ್ರವ್ಯಗಳೊಡನೆ ಬಂದು, ಆ ತ್ರಿ