ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೭ ಅಧ್ಯಾ, ೭೪.] ದಶಮಸ್ಕಂಧವು. ದೇವವರ್ಚಸ್ಸುಳ್ಳ ಯಾಜಕರು, ಧರ್ಮರಾಜನಿಂದ ಶಾಸೊಕ್ಕವಾಗಿ ಯಾಗವನ್ನು ನಡೆಸಿದರು. -++ಶಿಶುಪಾಲ ವಧವೃತ್ತಾಂತವು.w - ಯಾಗವು ಪೂರ್ಣವಾಯಿತು.ಆ ಮೇಲೆ ಸೋಮಾಭಿಷವವೆಂಬ ದಿನದ ಕ್ಲಿ,ಧರರಾಜನು,ಅಲ್ಲಿ ನೆರೆದಿದ್ದ ಸದಸಸ್ಸತಿಗಳನ್ನೂ, ಯಾಜಕರನ್ನೂ,ಇತರ ಮಹಾತ್ಮರನ್ನೂ ತಕ್ಕ ಸತ್ತಾರಗಳಿಂದ ಪೂಜಿಸತೊಡಗಿದನು, ಆದರೆ ಅವರಲ್ಲಿ ಮೊದಲು ಯಾರಿಗೆ ಅಗ್ರಪೂಜೆಯನ್ನು ನಡೆಸಬೇಕೆಂದು ಅವನಿಗೆ ತೋರದೆ ಹೋಯಿತು. ಆ ಸಭೆಯಲ್ಲಿ ಅಂತಹ ಆಗ್ರಪೂಜೆಯನ್ನು ಹೊಂದುವುದಕ್ಕೆ ಯೋಗ್ಯರಾದವರನೇಕಮಂದಿಯಿದ್ದುದರಿಂದ, ಅವರಲ್ಲಿ ಯಾರನ್ನು ಪುರಸ್ಕ ರಿಸಬೇಕೆಂದು ತೋರದೆ ಥರರಾಜನು ಯೋಚಿಸುತ್ತ ನಿಂತಿರುವಾಗ, ಪಂಚ ಪಾಂಡವರಲ್ಲಿ ಕಿರಿಯವನಾಗಿದ್ದರೂ ಮಹಾಬುದ್ಧಿಶಾಲಿಯೆನಿಸಿಕೊಂಡ ಸಹದೇವನು ಹೀಗೆಂದು ಹೇಳುವನು. ಅಣ್ಣಾ! ಇಲ್ಲಿ ನಿನಗೆ ಸಂದೇಹವೇ ನಿದೆ ? ಇದೋ! ಬ್ರಹ್ಮವಿದರಿಗೆ ಸ್ವಾಮಿಯಾದ ಈ ಕೃಷ್ಣನೇ ಇಲ್ಲಿನ ಆಗ್ರ ಪೂಜೆಗೆ ತಕ್ಕ ಪಾತ್ರವು, ಭಗವಂತನೇ ಸಯ್ಯದೇವತಾಸ್ವರೂಪನು. ಈ ಯಾಗಕ್ಕೆ ವಿಹಿತಗಳಾದ ದೇಶಕಾಲಧನಾದಿಗಳೆಲ್ಲವೂ ಇವನ ಸ್ವರೂ ಪವೇ! ಆಕೆ ? ಈ ಪ್ರಪಂಚವೇ ಈತನ ಶರೀರರೂಪವಾಗಿರುವುದು. ಸಮಸ್ತಕ್ರತುಗಳೂ ಏತನ್ಮಯವಾದುವು. ಆಗ್ನಿ ದೇವನೂ, ಆಹುತಿಗಳೂ, ಮಂತ್ರಗಳೂ, * ಸಾಂಖ್ಯಯೋಗಗಳೂ ಇವೆಲ್ಲವೂ ತನ್ಮಯವಾದುದು. ಚರಾಚರಾತ್ಮಕವಾದ ಸಮಸ್ತ ಪ್ರಪಂಚಕ್ಕೂ ಈತನೇ ಅಂತರಾತ್ಮನು. ಇವ ನೇಜಗತೃಷ್ಟಿಗೆಮೊದಲು, ಚಿದಚಿದಾತ್ಮಕವಾದ ಪ್ರಪಂಚದೊಡನೆ ಕಲೆತು, ತಾನೊಬ್ಬನೇ ಒಬ್ಬನಾಗಿದ್ದವನು, ಇವನಿಗೆ ಬೇರೆ ಕಾರಣವಸ್ತುವಿಲ್ಲ ವಾದುದರಿಂದ ಅದ್ವಿತೀಯನು, ಈ ಭಗವಂತನು ತನಗೆ ತಾನೇ ಆಧಾರನೇ ಹೊರತು, ಇವನಿಗೆ ಬೇರೆ ಆಶ್ರಯವಸ್ತುವಿಲ್ಲ! ತನ್ನನ್ನೇ ತಾನು ಉಪಕರಣ

  • ಸಾಂಖ್ಯವೆಂದರೆ ಆತ್ಮಸ್ವರೂಪ ವಿಮರ್ಶನವು, ಯೋಗವೆಂದರೆ ಪರಮಾತ್ತೊ ಪಾಸನವು, ಇವೆರಡಕ್ಕೂ ಭಗವಂತನೇ ನಿರ್ವಾಹಕನೆಂದು ಭಾವವು.