ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೮ ಶ್ರೀಮದ್ಭಾಗವತವು - [ಅಧ್ಯಾ, ೩೪, ವಾಗಿಟ್ಟುಕೊಂಡು, ಸಮಸ್ತಭೂತಗಳ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ನೆರ ವೇರಿಸುವನು. ಹೀಗೆ ತಾನೇ ಜಗದ್ರೂಪವಾಗಿ ಪರಿಣಮಿಸಿದ್ದರೂ, ಆ ಜಗ ತಿನ ಉತ್ತತ್ತಿವಿನಾಶಾದಿವಿಕಾರಗಳಿಗೆ ಒಳಗಾಗದೆ, ಅಜನೆನಿಸಿಕೊಂಡಿರು ವನು. ಹೀಗೆ ನಿರ್ವಿಕಾರನಾಗಿದ್ದರೂ, ಈತನು ಮನುಷ್ಯಾವತಾರವ ನೈತಿ ಕರ್ಮಗಳನ್ನು ನಡೆಸುವುದು, ಈ ಲೋಕಕ್ಕೆ ಧರ್ಮಾದಿಪುರುಷಾರ್ಥ ಸಿದ್ಧಿಗೆ ದಾರಿಯನ್ನು ತೋರಿಸುವುದಕ್ಕೇಹೊರತು ಬೇರೆಯಲ್ಲ. ಆದುದ ರಿಂದ ಆಣ್ಣಾ! ಮಹಾತ್ಮನಾದ ಈ ಕೃಷ್ಣನಿಗೇ ಅಗ್ರಪೂಜೆಯನ್ನು ನಡೆಸು! ಇವನೊಬ್ಬನನ್ನು ಸತ್ಕರಿಸುವುದರಿಂದ ಸಮಸ್ತಭೂತಗಳನ್ನೂ ಪೂಜಿಸಿದಂ ತೆಯೇ ಆಗುವುದು, ಈತನು ಸಾಂತಶ್ಯಾಮಿಯಾದುದರಿಂದ ನಿನ್ನ ಆತ್ಮಕ್ಕೂ ಇದರಿಂದ ತೃಪ್ತಿಯುಂಟು. ಸಮಸ್ತಭೂತಗಳಿಗೂ ಅಂತರಾತ್ಮ ನಾಗಿ, ಸತ್ವಶರೀರಕನಾಗಿ, ರಾಗದ್ವೇಷಾದಿಗಳಿಲ್ಲದೆ ಶಾಂತನಾಗಿ, ಪೂರ್ಣ ಕಾಮನಾದುದರಿಂದ, ನಿತ್ಯಸಂತೋಷಯಾಗಿರುವ ಈ ಕೃಷ್ಣನಿಗೆ ನೀನು ಪೂಜೆಯನ್ನು ಮಾಡಿದಪಕ್ಷದಲ್ಲಿ, ಆ ನಿನ್ನ ಪೂಜೆಗೆ ಅಪಾರವಾದ ಫಲವುಂ ಟು. ಕರ್ಮಗಳಿಗೆ ಸಾರ್ಥಕ್ಯವನ್ನ ಪೇಕ್ಷಿಸುವವರೊಬ್ಬೊಬ್ಬರೂ ಇವ ನನ್ನೇ ಪೂಜಿಸಬೇಕು” ಎಂದನು. ಕೃಷ್ಣನ ಪ್ರಭಾವವನ್ನು ತಿಳಿದ ಸಹ ದೇವನು ಹೀಗೆಂದು ಹೇಳಿ ಸುಮ್ಮನಿರಲು, ಅಲ್ಲಿದ್ದ ಬ್ರಾಹ್ಮಣೋತ್ತಮ ರೆಲ್ಲರೂ ಭಲೆ ಶಹಬಾಸ್” ಎಂದು ಆ ಸಹದೇವನ ಮಾತನ್ನು ಸಂತೋಷ ದಿಂದ ಅನುಮೋದಿಸಿದರು. ಇದೆಲ್ಲವನ್ನೂ ಕೇಳಿದಮೇಲೆ ಧರ್ಮರಾಜನು, ಸಂತೋಷದಿಂದ ಮುಂದೆ ಬಂದು, ಕೃಷ್ಣನಿಗೆ ಆಗ್ರಪೂಜೆಯನ್ನು ಮಾಡ ತೊಡಗಿದನು. ಮೊದಲು ಕೃಷ್ಣನ ಪಾದಗಳನ್ನು ತೊಳೆದು, ಆ ಪಾದತೀರ ವನ್ನು ತನ್ನ ತಲೆಗೆ ಪ್ರೋಕ್ಷಿಸಿಕೊಂಡನು. ತನ್ನ ಪತ್ನಿ ಯಾದ ದೌಪದಿಗೂ, ತಮ್ಮಂದಿರಿಗೂ, ಮಂತ್ರಿವರ್ಗಗಳಿಗೂ ಅದನ್ನು ತಿರಸಾಧಾರಣಮಾಡುವಂತೆ ಹೇಳಿದನು, ಆಮೇಲೆ ಕೃಷ್ಣನಿಗೆ ಅಮೂಲ್ಯವಾದ ಪೀತಾಂಬರಗಳನ್ನೂ , ಬೆಲೆ ಯುಳ್ಳ ಆಭರಣಗಳನ್ನೂ, ಕಾಣಿಕೆಯಾಗಿ ಸಮರ್ಪಿಸಿ, ಆತನ ಪಾದ ಪೂಜೆಯನ್ನು ಮಾಡುತ್ತ, ಆಗ ತನಗುಂಟಾದ ಸಂತೋಷದಿಂದ ಕಣ್ಣಿನಲ್ಲಿ ಅನಂದಬಾಷ್ಪವು ಉಕ್ಕಿಬರುತ್ತಿರಲು, ಆ ಕೃಷ್ಣನ ದಿವ್ಯಮೂರ್ತಿಯನ್ನು