ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೯ ಅಧ್ಯಾ, ೭೪.j ದಶಮಸ್ಕಂಧವು. ನೋಡುವುದಕ್ಕೂ ಅವಕಾಶವಿಲ್ಲದೆ ಸುಮ್ಮನೆ ಮೈಮರೆತು ನಿಂತಿದ್ದನು. ಹೀಗೆ ಧರ್ಮರಾಜನು ಕೃಷ್ಣನಿಗೆ ಪೂಜೆಗಳನ್ನು ನಡೆಸುವಾಗ, ಅಲ್ಲಿ ನೆರೆದಿದ್ದ ಸಮಸ್ತಜನವೂ ತಲೆಯಮೇಲೆ ಕೈಜೋಡಿಸಿ « ನಮೋ ನಮಃ” ಎಂದು ಜಯಘೋಷವನ್ನು ಮಾಡುತಿತ್ತು, ಆಕಾಶದಿಂದ ಪುಷ್ಪವೃಷಿ ಯು ಸುರಿಯಿತು, ಅಲ್ಲಿ ನೆರೆದಿದ್ದ ಸಭಾಜನವೆಲ್ಲವೂ ಏಕವಾಕ್ಯದಿಂದ ಕೃಷ್ಣನ ಗುಣಗಳನ್ನು ಕೊಂಡಾಡುತ್ತಿದ್ದರು. ಇದನ್ನು ಕೇಳಿ ಅಲ್ಲಿದ್ದ ಶಿಶುಪಾಲ ನಿಗೆ ಸಹಿಸಲಾರದ ಸಂಕಟವುಂಟಾಯಿತು. ತಾನು ಕುಳಿತಿದ್ದ ಪೀಠದಿಂದ ಥಟ್ಟನೆ ಮೇಲೆದ್ದು, ಕೈಯನ್ನು ಮೇಲಕ್ಕೆತ್ತಿ, ಆ ಮಹಾಸಭೆಯಲ್ಲಿ ನಿರ್ಭಯವಾಗಿ ನಿಂತು, ಭಗವಂತನಾದ ಆ ಕೃಷ್ಣನನ್ನು ಪರುಷವಾಕ್ಯಗ ಳಿಂದ ಹೀಗೆಂದು ನಿಂದಿಸತೊಡಗಿದನು. <t ಆಹಾ ! ಕಾಲಗತಿಯನ್ನು ಮೂರು ವುದು ಯಾರಿಗೂ ಸಾಧ್ಯವಲ್ಲವೆಂದೂ, ಬ್ರಹ್ಮಾದಿಗಳೂ ಆ ಕಾಲವಶದಿಂದ ಬುದ್ಧಿಗೆಟ್ಟು ಹೋಗುವರೆಂದೂ ಹೇಳುವ ಲೋಕವಾಯುಯಥಾರ್ಥವೇ? ಏಕೆಂದರೆ, ಇಲ್ಲಿ ವಯೋವೃದ್ಧರಾದವರಿಗೂ ಕೂಡ ಅತ್ಯಲ್ಪನಾದ ಒಬ್ಬ ಸಣ್ಣ ಹುಡುಗನ ಮಾತಿನಿಂದ ಬುದ್ಧಿಯು ಕೆಟ್ಟು ಹೋಯಿತಲ್ಲ! ಎಲೈ ಸದ ಸ್ಯರೆ ! ನೀವು ಪಾತ್ರಾಪಾತ್ರಗಳನ್ನು ಚೆನ್ನಾಗಿ ಬಲ್ಲವರಾಗಿದ್ದೂ, ಹುಡುಗ ನಾದ ಈ ಸಹದೇವನ ಮಾತನ್ನು ಕೇಳಿ, ಈ ಕೃಷ್ಣನೇ ಇಲ್ಲಿನ ಆಗ್ರಪೂ ಜೆಗೆ ಅರ್ಹನೆಂದು ನಂಬಬಹುದೆ ! ತಪಸ್ಸಿನಲ್ಲಿಯೂ, ವ್ರತದಲ್ಲಿಯೂ, ಜ್ಞಾನದಲ್ಲಿಯ ಮೇಲೆನಿಸಿಕೊಂಡು, ಆ ಜ್ಞಾನಬಲದಿಂದ ಪಾಪಗಳೆಲ್ಲ ವನ್ನೂ ಕಳೆದು, ಬ್ರಹ್ಮನಿಷ್ಠರಾದ ಪರಮರ್ಷಿಗಳು ಈ ಸಭೆಯಲ್ಲಿ ಎಷ್ಟೋ ಮಂದಿಯುಂಟು, ಅವರೆಲ್ಲರೂ ಲೋಕಪಾಲಕರಿಂದಲೂ ಗೌಣ ರವಿಸಲ್ಪಡತಕ್ಕ ಮಹಾಮಹಿಮೆಯುಳ್ಳವರು, ಆಂತವರೆಲ್ಲರನ್ನೂ ಅಲ ಕಮಾಡಿ, ನೀಚಕುಲದವನಾದ ಈ ಗೊಲ್ಲನಿಗೆ ಅಗ್ರಪೂಜೆಯನ್ನು ನಡೆಸು ವಿರಾ!ಕಾಗೆಗೆ ಪುರೋಡಾಶವನ್ನು ಕೊಡುವಂತೆ, ಇವನಿಗೆ ಈ ವಿಧವಾದ ಪೂ ಜೆಯನ್ನರ್ಪಿಸುವುದು ಯೋಗ್ಯವೆ!*ಇವನಿಗಾದರೋ ಕುಲವಿಲ್ಲ!ಆಶ್ರಮವಿಲ್ಲ! - * ಈ ಶಿಶುಪಾಲನ ನಿಂದಾವಾಕ್ಯಗಳಲ್ಲಿಯೂ ಪರಬ್ರಹ್ಮನ ಗುಣಗಳೇ ವ್ಯಕ. ನಾಗವುದಾಗಿ ತಿಳಿಯಬೇಕು.