ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೦ ಶ್ರೀಮದ್ಭಾಗವತವು (ಅಧ್ಯಾ, ೭೪° ವರ್ಣನಿಯಮವಿಲ್ಲ! ಆದುದರಿಂದ ಸಮಸ್ತಧರ್ಮಗಳಿಗೂ ಈತನು ಹೊರಗಾ ಗಿರುವನು, ಇವನಿಗೆ ನಿಯಾಮಕರೊಬ್ಬರೂ ಇಲ್ಲದುದರಿಂದ ಯಥೇಚ್ಛವಾ ಗಿ ಪ್ರವರ್ತಿಸತಕ್ಕವನು, ಇವನಲ್ಲಿ ಗುಣವೆಂಬುದು ಲೇಶಮಾತ್ರವೂ ಇಲ್ಲ, ಇ ವನಿಗೆ ಪೂಜೆಯೆಂದರೇನು ? ಇದಲ್ಲದೆ ಹಿಂದೆ ಯಯಾತಿಯ ಶಾಪದಿಂದ ಇವ ನಕುಲವೇ ಸತ್ಪುರುಷದಿಂದ ಬಹಿಷ್ಕೃತವಾಗಿರುವುದು, ಇವನು ಯಾವಾಗ ಲೂ ನಿಷ್ಕಾರಣವಾದ ಪಾಪಕೃತ್ಯಗಳಿಂದಲೇ ಕಾಲವನ್ನು ಕಳೆದವನು. ಮ ತ್ತು ಅನೇಕಬ್ರಹ್ಮರ್ಷಿಗಳಿಗೆ ನಿವಾಸವಾದ ಅಲ್ಯಾವರ್ತದೇಶಗಳನ್ನು ಬಿಟ್ಟು, ಸಹಜವಾದ ಬ್ರಹ್ಮವರ್ಚಸ್ಸನ್ನು ನೀಗಿ, ಸಮುದ್ರದುರ್ಗವನ್ನಾಶ್ರಯಿಸಿ, ಕಳ್ಳನಂತೆ ಬಂದು ಪ್ರಜೆಗಳನ್ನು ಬಾಧಿಸುತ್ತಿರುವನು. ಇಂತವನಿಗೆ ಈ ಸಭೆ ಯಲ್ಲಿ ಆಗ್ರಪೂಜೆಯೆ?” ಎಂದನು. ಹೀಗೆ ಶಿಶುಪಾಲನ, ತನಗೆ ವಿನಾಶ ಕಾಲವು ಸಮೀಪಿಸಿದ್ದುದರಿಂದ, 'ಕೃಷ್ಣನನ್ನು ಕುರಿತು ಆಡಬಾರದಮಾತು ಗಳನ್ನಾಡಿ ನಿಂದಿಸುತ್ತಿದ್ದನು. ಅದನ್ನು ಕೇಳುತಿದ್ದಾಗಲೂಕೂಡ ಕೃಷ್ಣನು; ನರಿಗಳ ಕೂಗನ್ನು ಸಿಂಹವು ಹೇಗೋ ಹಾಗೆ ಲಕ್ಷಮಾಡದೆ ಗಂಭೀರಸ್ವ ಭಾವದಿಂದ ಬಾಯೆತ್ತದೆ ಸುಮ್ಮನಿದ್ದನು, ಆದರೆ ಅಲ್ಲಿದ್ದ ಸಭಾಜನರೆಲ್ಲರೂ ಆ ಕೃಷ್ಣನ ನಿಂದೆಯನ್ನು ಕೇಳಲಾರದೆ ಕಿವಿಗಳನ್ನು ಮುಚ್ಚಿಕೊಂಡು ಶಿಶು ಪಾಲನನ್ನೇ ನಿಂದಿಸುತ್ತ, ಆ ಸಭೆಯನ್ನು ಬಿಟ್ಟು ಹೊರಗೆ ಬಂದು ಬಿಟ್ಟರು. ಓ! ಪರೀಕ್ಷಿದ್ರಾಜಾ ! ಆ ಭಗವಂತನ ವಿಷಯವಾದ ನಿಂದೆಯಾಗಲಿ, ಭಗವದ್ಭಕ್ತರ ನಿಂದೆಯಾಗಲಿ ಕಿವಿಗೆ ಬಿದ್ದಾಗ, ಯಾವನು ಆ ಸ್ಥಳವನ್ನು ಬಿಟ್ಟು ಹೋಗದಿರುವನೋ, ಅವನಿಗೆ ಅಧೋಗತಿಯ ತಪ್ಪದು'ಈ ಧರ್ಮ ಸೂಕ್ಷವನ್ನು ತಿಳಿದುದರಿಂದಲೇ ಅಲ್ಲಿದ್ದ ಬ್ರಾಹ್ಮಣೋತ್ತಮರೆಲ್ಲರೂ ಹೊರಕ್ಕೆ ಬಂದು ಬಿಟ್ಟರು. ಇಷ್ಟರಲ್ಲಿ ಅಲ್ಲಿ ನೆರೆದಿದ್ದ ಪಾಂಡವ, ಮತ್! ಕೇಕಯ, ಸೃಂಜಯರೆಲ್ಲರೂ ಕೋಪವನ್ನು ತಡೆಯಲಾರದೆ, ಆಯುಧವನ್ನು ಕೈಗೆತ್ತಿಕೊಂಡು, ಆಗಲೇ ಶಿಶುಪಾಲನನ್ನು ಕೊಂದುಬಿಡಬೇಕೆಂದು ಮೇಲ ಕೈದರು. ಇದನ್ನು ನೋಡಿ ಶಿಶುಪಾಲನೂ, ಕತ್ರಿಗುರಾಣಿಗಳನ್ನೆತ್ತಿಕೊಂಡು, ಕೃಷ್ಣಪಕ್ಷದವರಾದ ಆ ರಾಜರನ್ನು ಹುಂಕಾರದಿಂದ ಗದರಿಸುತ್ತ, ಇದಿ ರಾಗಿ ನಿಂತನು.ಇಷ್ಟರಲ್ಲಿ ಕೃಷ್ಣನು, ತನ್ನ ಆಸನದಿಂದ ಮೇಲೆದ್ದು, ಆ ರಾಜ