ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೧ ಅಧ್ಯಾ, ೭೪.] ದಶಮಸ್ಕಂಧವು. ರೆಲ್ಲರನ್ನೂ ಹಿಂದಕ್ಕೆ ಕಳುಹಿಸಿ, ತೀಕ್ಷ್ಯಧಾರೆಯುಳ್ಳ ತನ್ನ ಚಕ್ರಾಯುಧ ವನ್ನು ಪ್ರಯೋಗಿಸಿ, ಶಿಶುಪಾಲನ ಶಿರಸ್ಸನ್ನು ಭೇದಿಸಿಬಿಟ್ಟನು. ಆ ಶಿಶುಪಾ ಲನ ತಲೆಯು ಕೆಳಗೆ ಬಿದ್ದಾಗ, ಅಲ್ಲಿ ದೊಡ್ಡ ಕೋಲಾಹಲವು ಹೊರಟಿತು. ಅವನಪ್ಪಕ್ಷದವರಾಗಿ ಅಲ್ಲಿಗೆ ಬಂದಿದ್ದ ಇತರರಾಜರೆಲ್ಲರೂ ತಾವು ಬದುಕಿದರೆ ಸಾಕೆಂದು ಪಲಾಯನಮಾಡಿದರು.ಶಿಶುಪಾಲನ ತಲೆಯು ಕೆಳಗೆ ಬೀಳುತ್ತಿರು ವಾಗಲೇ, ಆಕಾಶದಿಂದ ಭೂಮಿಗೆ ಬಿದ್ದ ಕೊಳ್ಳಿಯಂತೆ, ಆತನ ದೇಹದಿಂದ ಒಂದಾನೊಂದು ದಿವ್ಯತೇಜಸ್ಸು ಹೊರಟುಬಂದು, ಸಮಸ್ತಭೂತಗಳೂ ನೋ ಡುತ್ತಿದ್ದ ಹಾಗೆ ಕೃಷ್ಣನ ದೇಹದಲ್ಲಿ ಪ್ರವೇಶಿಸಿತು. ಓ ! ಪರೀಕ್ಷಿದ್ರಾಜಾ ! ಆ ಶಿಶುಪಾಲನು ಹಿಂದಿನ ಮೂರುಜನ್ಮಗಳಿಂದ ವಿಷ್ಣುವಿನಲ್ಲಿ ವೈರಬುದ್ದಿ ಯನ್ನಿಟ್ಟು, ಎಡೆಬಿಡದೆ ಅವನನ್ನು ಧ್ಯಾನಿಸುತ್ತಿದ್ದುದರಿಂದ, ಈಗ ಅವನಿಗೆ ವಿಷ್ಣು ಸಾಯುಜ್ಯವುಂಟಾಯಿತು. ಇದರಿಂದ ಅವರವರ ಚಿತ್ತವೃತ್ತಿಯೇ ಶುಭಾಶುಭಗಳಿಗೆ ಕಾರಣವೆಂಬುದನ್ನು ನೀನು ತಿಳಿಯಬಹುದು. ಆಮೇಲೆ ಇತ್ಯ ಲಾಗಿ ಯುಧಿಷ್ಠಿರನು, ಋತ್ವಿಕ್ಕುಗಳಿಗೂ, ಸದಸ್ಯರಿಗೂ, ವಿಶೇಷವಾದ ದಕ್ಷಿಣೆಯನ್ನು ಕೊಟ್ಟು ಸತ್ಕರಿಸಿ, ಅವಭ್ಯಥಸ್ನಾನವನ್ನು ಮುಗಿಸಿದನು. ಹೀಗೆ ಯೋಗೀಶ್ವರನಾದ ಕೃಷ್ಣನು ತಾನೇ ಮುಂದಾಗಿ ನಿಂತು ಧರ್ಮ ರಾಜನಿಂದ ಆ ಯಜ್ಞವನ್ನು ಮಾಡಿಸಿದಮೇಲೆ, ತನ್ನ ಇಷ್ಟಮಿತ್ರರೆಲ್ಲರೂ ಆ ಪೇಕ್ಷಿಸಿದುದರಿಂದ, ಆ ಯಜ್ಞವು ಮುಗಿದಮೇಲೆಯೂ ಕೆಲವು ತಿಂಗಳುಗಳ ವರೆಗೆ ಅಲ್ಲಿಯೇ ಇರುತ್ತಿದ್ದನು. ಆಗಲೂ ಧರ್ಮರಾಜನಿಗೆ ಕೃಷ್ಣನನ್ನು ಕಳುಹಿಸಿಕೊಡುವುದಕ್ಕೆ ಇಷ್ಟವಿರಲಿಲ್ಲ!ಕೊನೆಗೆ ಕೃಷ್ಣನು, ಪ್ರಯತ್ನ ಪೂರ ಕವಾಗಿ ಯಾವುದೋ ಒಂದು ನಿರ್ಬಂಧದಿಂದ ತನ್ನ ಪತ್ನಿ ಪರಿವಾರಗಳೊಡ ನೆ ಅಲ್ಲಿಂದ ಹಿಂತಿರುಗಬೇಕಾಯಿತು. ಓ ! ಪರೀಕ್ಷಿದ್ರಾಜಾ ! ವೈಕುಂಠವಾಸಿಗಳಾದ ಜಯವಿಜಯರಿಗೆ ಬ್ರಾಹ್ಮಣಶಾಪದಿಂದುಂಟಾದ ಮೂರು ರಾಕ್ಷಸಜನಗಳನ್ನೂ, ಅವುಗಳ ಚರಿತ್ರವನ್ನೂ ನಿನಗೆ ವಿವರಿಸಿ ತಿಳಿ ಸಿದೆನು. ಧರ್ಮರಾಜನೂಕೂಡ ರಾಜಸೂಯವನ್ನು ಮುಗಿಸಿ, ಅವಭ್ಯಥಸ್ನಾನ ವನ್ನು ಮಾಡಿದಮೇಲೆ, ಬಹ್ಮ ಕ್ಷತ್ರಿಯರಿಂದ ಕೂಡಿದ ಆ ಸಭೆಯಲ್ಲಿ ಸಾಕ್ಷಾ ದೇವೇಂದ್ರನಂತೆ ಪ್ರಕಾಶಿಸುತ್ತಿದ್ದನು, ಆ ಯಜ್ಞಕ್ಕಾಗಿ ಬಂದಿದ್ದ ದೇವ