ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೨ ಶ್ರೀಮದ್ಭಾಗವತವು [ಅಧ್ಯಾ, ೭#2 ಮಾನವಗಂಧರಾದಿಗಳೆಲ್ಲರೂ ಧರ್ಮರಾಜನಿಂದ ಸತ್ತರಾಗಿ, ಆ ಯಾ ಗದ ವೈಭವವನ್ನೂ, ಕೃಷ್ಣನ ಪ್ರಭಾವವನ್ನೂ ಕೊಂಡಾಡುತ್ತ, ತಮ್ಮ ತಮ್ಮ ಸ್ಥಾನಗಳಿಗೆ ಹಿಂತಿರುಗಿದರು. ಅಲ್ಲಿಗೆ ಬಂದಿದ್ದ ಲಕ್ಷೇಪಲಕ್ಷ ಜನ ರಲ್ಲಿ, ಪರಮಪಾಪಿಯಾಗಿಯೂ, ಕುರುಕುಲಾಧವನಾಗಿಯೂ ಇರುವ ಧುರೊಧನನೊಬ್ಬನುಮಾತ್ರ, ಧರ್ಮರಾಜನ ಐಶ್ವರವನ್ನೂ, ಯಾಗ ವೈಭ ವವನ್ನೂ ನೋಡಿ ಸಹಿಸಲಾರದೆ ಕೊನೆಗೆ ಅವಮಾನಪಟೂ ಹೋದನು. ಓ! ಪರೀಕ್ಷೆ ದ್ರಾಜಾ ! ಭಗವಂತನಾದ ಶ್ರೀಕೃಷ್ಣನು ನಡೆಸಿದ ಈ ಶಿಶು ಪಾಲವಧೆ, ಜರಾಸಂಧನ ಸೆರೆಯಲ್ಲಿ ಸಿಕ್ಕಿದ ರಾಜರ ಬಂಧವಿಮೋಚನೆ, ಧರ್ಮರಾಜನ ರಾಜಸೂಯಸಮಾಪ್ತಿ, ಮುಂತಾದ ಚರಿತ್ರೆಗಳನ್ನು ಯಾವನು ಭಕ್ತಿಯಿಂದ ಪಠಿಸುವನೋ ಅವನು ಸರಪಾಪವಿಮುಕ್ತನಾಗಿ,ಸಮಸ್ತಶ್ರೇ ಯಸ್ಸುಗಳನ್ನೂ ಹೊಂದುವನು. ಇದು ಎಪ್ಪತ್ತುನಾಲ್ಕನೆಯಆಧ್ಯಾಯವು. 6 .{ ಧರ ರಾಜನು ಅವಚ್ಛಥವನ್ನು ನಡೆಸಿದುದು.ದುರೆ ,

  • ಧನಿಗೆ ಅವಮಾನವಾದುದು. ಆಗ ಪರೀಕ್ಷಿದ್ರಾಜನು ಶುಕಮುನಿಯನ್ನು ಕುರಿತು, ಓಮಹಾತ್ಮಾ! ಧರರಾಜನು ಯಾರಲ್ಲಿಯೂ ದ್ವೇಷಬುದ್ಧಿಯಿಲ್ಲದುದರಿಂದಲ್ಲವೇ ಅಜಾತ ಶತ್ರುವೆನಿಸಿಕೊಂಡಿರುವನು ? ಅವನು ನಡೆಸಿದ ರಾಜಸೂಯಯಾಗದ ಸ್ಥಿ ದುಕ್ಕೋಧನನು ಹೊರತಾಗಿ, ಅಲ್ಲಿಗೆ ಬಂದಿದ್ದ ಇತರರಾಜರೂ, ಋಷಿ ಗಳೂ, ದೇವತೆಗಳೂ, ಸಂತೋಷದಿಂದ ಹೋದರೆಂದು ಹೇಳಿದೆಯಲ್ಲವೆ ? ಆ ದುರೊಧನನೊಬ್ಬನುಮಾತ್ರ ಅವಮಾನಿತನಾಗಿ ಹೋಗುವು ದಕ್ಕೆ ಕಾರಣವೇನೆಂಬುದನ್ನು ತಿಳಿಸಬೇಕು” ಎಂದು ಕೇಳಿದನು. ಅದಕ್ಕಾ ಶುಕಮಹರ್ಷಿಯು • ಓ ರಾಜೇಂದ್ರಾ! ಕೇಳು ! ನಿನ್ನ ಪಿತಾಮಹನಾದ ಧರರಾಜನ ಯಾಗಕಾಲದಲ್ಲಿ, ಅವನಲ್ಲಿರುವ ಪ್ರೀತಿವಿಶೇಷದಿಂದ, ಅವನ ಬಂಧುಗಳೆಲ್ಲರೂ ಅಕ್ಕರೆಯಿಂದ ಆಯಾಕಾಲೋಚಿತವಾದ ಕಾಕ್ಯಗಳನ್ನು ನಡೆಸುತ್ತಿದ್ದರು. ಭೀಮಸೇನನು ಅಡಿಗೆಯ ಮನೆಗೆ ಅಧ್ಯಕ್ಷನಾಗಿದ್ದು, ಅದರ ಕಾಕ್ಯಗಳನ್ನು ನೋಡಿಕೊಳ್ಳುತಿದ್ದನು. ದುಕ್ಕೋಧನನು ಧನಾಧ್ಯಕ್ಷನಾಗಿ