ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೭೫.] ದಶಮಸ್ಕಂಧವು. ೨೨೩೩ ಬೊಕ್ಕಸದ ಕೆಲಸವನ್ನು ನೋಡುತಿದ್ದನು.ಸಹದೇವನು ಯಜ್ಞಕ್ಕಾಗಿ ಬಂದ ವರನ್ನು ಸನ್ಮಾನಿಸುವ ಕಾರದಲ್ಲಿದ್ದನು. ನಕುಲನು ಯಜ್ಞಸಾಮಗ್ರಿಗ ಇನ್ನೊದಗಿಸಿಡುವುದರಲ್ಲಿ ನಿರತನಾಗಿದ್ದನು. ಅರ್ಜುನನು ಅಲ್ಲಿಗೆ ಬಂದ ಸತ್ಪುರುಷರಿಗೆ ಗಂಧಪುಷ್ಪಾದಿಗಳನ್ನೂ ಪ್ಪಿಸುತ್ತಿದ್ದನು. ಕೃಷ್ಣನು ಅಭ್ಯಾಗತ. ರಾಗಿ ಬಂದ ಸಾಧುಗಳ ಪಾದಪ್ರಕ್ಷಾಳನಕಾಠ್ಯವನ್ನು ತಾನೇಕೈಕೊಂಡನು. "ಹೀಗೆಯೇ ದ್ರುಪದಪತ್ರನಾದ ದೃಷ್ಟದ್ಯುಮ್ಮನಬಂದವರಿಗೆ ಭಕ್ಷ್ಯಭೋ ಜ್ಯಾದಿಭೋಜನಸಾಮಗ್ರಿಗಳನ್ನು ತಂದಿಡುವುದರಲ್ಲಿಯೂ, ಮಹೋದಾರಸ್ಯ ಭಾವವುಳ್ಳ ಕರ್ಣನು ದಾನಕಾಲ್ಯದಲ್ಲಿಯೂ ನಿರತರಾಗಿದ್ದರು.ಹೀಗೆಯೇ ಸಾ ತ್ಯಕಿ, ವಿಕರ್ಣ,ಕೃತವರ್ಮ, ವಿದುರ, ಬಾಕ, ಭೂರಿಶ್ರವಸ್ಸು, ಸಂತರ್ದ ನ, ಮೊದಲಾದವರೆಲ್ಲರೂ, ಧರರಾಜನಿಗೆ ಪ್ರಿಯವನ್ನುಂಟುಮಾಡಬೇಕೆಂಬ ಉದ್ದೇಶದಿಂದ, ತಮತಮಗೆ ನಿಯಮಿತವಾದ ಕಾಕ್ಯಗಳನ್ನು ನಿರ್ವಹಿಸು ತಿದ್ದರು, ಯಾಗಾಂತ್ಯದಲ್ಲಿ ಯಾಗನಿರ್ವಾಹಕರಾದ ಋತ್ವಿಕ್ಟುರೋಹಿತಾ ದಿಗಳೂ, ಸದಸ್ಯರೂ, ವಿದ್ವಾಂಸರೂ, ಇಷ್ಟಮಿತ್ರರೂ, ಅವರವರ ಅಂತ ಸಿಗೆ ತಕ್ಕಂತೆ, ವಸ್ತ್ರಾಭರಣದಕ್ಷಿಣಾದಿಗಳಿಂದಲೂ, ಪ್ರಿಯವಾಕ್ಯಗಳಿ೦ ದಲೂ ಸತ್ಯತರಾಗಿ, ಶಿಶುಪಾಲನು ಶ್ರೀಕೃಷ್ಣಸಾಯುಜ್ಯವನ್ನು ಹೊಂ ಡಿದಮೇಲೆ, ಎಲ್ಲರೂ ಗಂಗಾನದಿಯಲ್ಲಿ ಅವಕೃಫಸ್ನಾನಕ್ಕಾಗಿ ಅತಿವೈಭವ ದಿಂದ ಹೊರಟರು. ಅವರ ಮುಂದೆ ಮೃದಂಗ, ಶಂಖ, ಪಣವ, ದುಂ ದುಭಿ, ಅನಕ, ಗೋಮುಖ, ಮೊದಲಾದ ವಾದ್ಯಗಳು ಮೊಳಗುತಿದ್ದುವು. ನರ್ತಕಿಯರು ಸಂತೋಷದಿಂದ ನರ್ತಿಸುತಿದ್ದರು, ಗಾಯಕರು ಗಾನಮಾಡಿ ದರು. ಗಾಯಕರು ನಡಿಸುತಿದ್ದ ವೀಣಾ ವೇಣು ಮೃದಂಗಾದಿವಾದ್ಯ ಧ್ವನಿಗಳೂ, ಅವರ ಕರತಾಲಗಳ ಧ್ವನಿಯೂ ಗಗನವ್ಯಾಪಿಯಾಗಿ ಹರಡಿತು. ಧ್ವಜಪತಾಕೆಗಳೊಡನೆ ವಿಚಿತ್ರಾಲಂಕಾರಶೋಭಿತಗಳಾದ ರಥಗಜತುರಗ ಪದಾತಿಗಳೆಂಬ ಚತುರಂಗಸೈನ್ಯವೂ ಮುಂದೆ ನಡೆಯುತಿತ್ತು, ಯಾದವರು, ಸೃಂಜಯರು, ಕಾಂಭೋಜರು, ಕುರುಗಳು, ಕೋಸಲರು,ಕೇಕಯರು, ಮುಂ ತಾದ ದೇಶಾಧೀಶ್ವರರೆಲ್ಲರೂ, ಸುವರ್ಣಹಾರಗಳಿಂದಲಂಕೃತರಾಗಿ, ಯಾಗ ದೀಕ್ಷಿತನಾದ ಧಗ್ಯರಾಜನನ್ನು ಮುಂದಿಟ್ಟುಕೊಂಡು, ಭೂಮಿಯನ್ನು ನಡು.