ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೪ ಶ್ರೀಮದ್ಭಾಗವತವು [ಅಧ್ಯಾ. ೭೫. ಗಿಸುವಂತೆ ತಮ್ಮ ತಮ್ಮ ದೊಡ್ಡ ಸೇನೆಗಳೊಡನೆ ಬರುತಿದ್ದರು, ಸದಸ್ಯರೂ ಋತ್ವಿಕ್ಕುಗಳೂ, ಪುರೋಹಿತರೂ, ಇತರಬ್ರಾಹ್ಮಣೋತ್ತಮರೂ ವೇದ ಘೋಷಗಳನ್ನು ಮಾಡುತ್ತ ಬಂದರು. ಈ ಮಹೋತ್ಸವವನ್ನು ನೋಡುವುದಕ್ಕಾಗಿ ದೇವತೆಗಳೂ, ಪಿತೃಗಳೂ, ದೇವರ್ಷಿಗಳೂ, ಗಂಧ ಊರೂ ಆಕಾಶದಲ್ಲಿ ನೆರೆದು ಪುಷ್ಪವೃಷ್ಟಿಯನ್ನು ಕರೆಯುತ್ತ ಸ್ತುತಿಸು ತಿದ್ದರು. ಗಂಡಸರು ಹೆಂಗಸರು ಮೊದಲಾಗಿ ಪುರವಾಸಿಗಳೆಲ್ಲರೂ, ಗಂಧ ಪುಷ್ಪವನ್ನಾಭರಣಾದಿಗಳಿಂದ ದೇಹವನ್ನಲಂಕರಿಸಿಕೊಂಡು, ಒಬ್ಬರಮೇ ಲೋಬ್ಬರು ನಾನಾಬಣ್ಣದ ಓಕುಳಿಗಳನ್ನೆರಚಾಡುತ್ತ ಹಿಂಬಾಲಿಸಿ ಬರು “ತಿದ್ದರು. ಭೋಗಿಗಳಾದ ಪುರುಷರೂ, ವೇಶ್ಯಾಸ್ತ್ರೀಯರೂ, ಒಬ್ಬರ ಮೇ ಲೊಬ್ಬರು, ಸುಗಂಧದೆಣ್ಣೆ, ಗೋರಸ, ಗಂಧದ ನೀರು, ಅರಿಸಿನದ ಸೀರು, ಕುಂಕುಮಜಲ ಮುಂತಾದುವುಗಳನ್ನು ಚೆಲ್ಲಿ, ವಸಂತಮಾಡುತ್ತ ವಿನೋದ ದಿಂದ ಬರುತಿರು, ರಾಜಪತ್ತಿ ಯರೆಲ್ಲರೂ ವಿಮಾನಾರೂಢರಾದ ದೇವ ಸಿಯದಂತೆ ರಥಾರಿವಾಹನಗಳನ್ನೇರಿ, ಅಂಗರಕ್ಷಕರಾದ ಅನೇಕಭಟರೊ ಡನೆ, ಈ ಅವಕೃಥಸ್ನಾನವನ್ನು ನೋಡುವುದಕ್ಕಾಗಿ ಹೊರಟುಬಂದರು. ಆಗ, ಅವರಲ್ಲಿ ವಿಶೇಷವಾದ ಸಲಿಗೆಯುಳ್ಳ ಸೋದರಮೈದುನರೇ ಮೊದ ಲಾದ ಬಂಧುಗಳೂ, ಸಖಿಯರೂ ಓಕುಳಿಯನ್ನೆರಚಲು, ಆ ಸಿಯರೆಲ್ಲರೂ ಮುಖದಲ್ಲಿ ಲಜ್ಞಾವಿಶಿಷ್ಟವಾದ ಮುಗುಳ್ಳ ಗೆಯನ್ನು ತೋರಿಸುತ್ತ, ತಮ್ಮ ಮೇಲೆ ಓಕುಳಿಯನ್ನೆ ರಚಿದವರಿಗೆ ತಾವೂ ಪ್ರತೀಕಾರಮಾ ಡಬೇಕೆಂಬ ಹಟದಿಂದ, ಚರ್ಮದ ಚೀ ರ್ಕೋಳವಿಗಳನ್ನು ಹಿಡಿದು, ಅವರಮೇಲೆ ಓಕುಳಿಯನ್ನೆ ರಚುತಿದ್ದರು. ಈ ಓಕುಳಿಯಾಡುವ ಸಂಭ್ರಮ ದಲ್ಲಿ, ಆ ರಾಜAಯರ ದುಕೂಲಗಳೆಲ್ಲವೂ ತೊಯ್ದು, ಅವರ ನಡು, ತೊ ಡೆ, ಸ್ತನಗಳು ಮೊದಲಾದ ಅವಯವಗಳು ಸ್ಪಷ್ಟವಾಗಿ ಹೊರಗೆ ಕಾಣು ತಿರುವುವು, ಬಿಚ್ಚಿದ ತಲೆಕೂದಲುಗಳಿಂದ ಸ್ಪಷ್ಟ ಮಾಲಿಕೆಗಳು ಉದಿ ರುತ್ತಿರುವುವು. ಹೀಗೆ ವಸಂತವಾಡುತಿದ್ದ ಆ ಸ್ತ್ರೀಯರ ವೇಷವು, ಎಂ ತವರಿಗೂ ಮನಸ್ಸನ್ನು ಕದಲಿಸುವಂತಿತ್ತು, ಈ ಸಮಸ್ಯವೈಭವಗಳೊ ಡಗೂಡಿ, ಧರ್ಮರಾಜನು, ಸುವರ್ಣಮಾಲಿಕೆಯಿಂದಲಂಕೃತವಾದ, ಮತ್ತು