ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ty ಶ್ರೀಮದ್ಭಾಗವತರು [ಅಧ್ಯಾ, ೫೦. ಕೃಷ್ಣನನ್ನು ಆಸೆಯಿಂದ ನೋಡುತ್ತಿದ್ದರು. ಆಗ ಕೃಷ್ಣನು ಆ ಯುದ್ಧ ದಲ್ಲಿ ತಾನು ಜಯಿಸಿ ತಂದ ಅನೇಕದ್ರವ್ಯರಾಶಿಯನ್ನೂ, ವೀರಭೂಷಣಗ ಇನ್ನೂ, ಯದುರಾಜನಾದ ಉಗ್ರಸೇನನಿಗೆ ಪ್ರೀತಿಯಿಂದೊಪ್ಪಿಸಿದನು. ಇಷ್ಟರಲ್ಲಿ ಅತ್ತಲಾಗಿ ಬಲಾಡ್ಯನಾದ ಜರಾಸಂಧನು, ತಿರುಗಿ ಮಧು ರಾಪುರದಮೇಲೆ ದಂಡೆತ್ತಬೇಕೆಂಬ ಉದ್ದೇಶದಿಂದ ಹೊಸಸೈನ್ಯಗಳನ್ನು ಸೇರಿಸುವುದಕ್ಕೆ ಆರಂಭಿಸಿದನು. ಇಷ್ಟರಲ್ಲಿ ಎರಡುತಿಂಗಳು ಕಳೆದು ಹೋದುವು. ಜರಾಸಂಧನು ಹಿಂದೆ ತನಗಾದ ಅವಮಾನಕ್ಕಾಗಿ ಅಹೋ ರಾತ್ರವೂ ಸಂಕಟದಿಂದ ಪರಿತಪಿಸುತ್ತಾ, ಅನೇಕರಾಜರನ್ನು ಕರೆಸಿ ಯು ವ್ಯಕ್ಕೆ ಹೊರಡಬೇಕೆಂದು ಪ್ರೇರಿಸಿದನು. * ಅದರಂತೆಯೇ ಅನೇಕರಾಜರು ಯುದ್ಧ ಸನ್ನದ್ಧರಾದರು. ಈ ಸಮಸ್ತರಾಜರೊಡನೆ ಜರಾಸಂಧನು ಮಧು ರಾಪುರವನ್ನು ಮುತ್ತಿ, ಆಗಲೂ ಕೃಷ್ಣನಿಂದ ಪರಾಜಿತನಾಗಿ ಓಡಿಹೋ ನು, ಹೀಗೆಯೇ ಹದಿನೇಳಾವರ್ತಿ ಹೊಸಹೊಸದಾಗಿ ಅನೇಕಾಕ್ಷೆಹಿಣಿ ಸೈನ್ಯಗಳು ಸೇರಿಸಿಕೊಂಡು ಬಂದು, ಮಧುರಾಪುರಿಯನ್ನು ಮುತ್ತಿ ಯಾದ ವರೊಡನೆ ಯುದ್ಧ ಮಾಡಿದನು. ಇತ್ತಲಾಗಿ ವೃಷ್ಟಿಗಳೂಕೂಡ ಕೃಷ್ಣನ ತೇಜೋಬಲದಿಂದ ಸುರಕ್ಷಿತರಾಗಿ ಜರಾಸಂಧನನ್ನಿ ದಿರಿಸಿ, ಅವನು ತಂದ ಸೈನ್ಯಗಳೆಲ್ಲವನ್ನೂ ನಾಶಮಾಡುತ್ತ ಬಂದರು. ಜರಾಸಂಧನೂಕೂಡ ಒಂ ದೊಂದಾವರ್ತಿಯೂ ತಾನು ತಂದ ಸೈನ್ಯಗಳೆಲ್ಲವನ್ನೂ ಕಳೆದುಕೊಂಡು ಯಾದವರ ಕೈಯಲ್ಲಿ ಸೆರೆಸಿಕ್ಕಿ, ಪರಮದಯಾಳುವಾದ ಕೃಷ್ಣನಿಂದ ಬಿಡಿಸಲ್ಪಟ್ಟು ಹಿಂತಿರುಗಿ ಬರುತಿದನು. ಕೊನೆಗೆ ಹದಿನೆಂಟನೆಯ ಸಾರಿಯೂ ಜರಾಸಂಧನು ಯುದ್ಧಕ್ಕಾಗಿ ಪ್ರಯತ್ನಿಸುತ್ತಿದ್ದನು. ಇಷ್ಟರಲ್ಲಿ ಮನು ವ್ಯಲೋಕದಲ್ಲಿ ತನಗೆ ಸಮಾನರಾದ ವೀರರೇ ಇಲ್ಲವೆಂದು ಹೆಮ್ಮೆಗೊಂ ಡಿದ್ದ ಕಾಲಯವನನೆಂಬವನೊಬ್ಬನು, ನಾರದನ ಮೂಲಕವಾಗಿ ಯಾದ ವರ ಪರಾಕ್ರಮವನ್ನು ಕೇಳಿ, ಅವರು ತನಗೆ ಸಮಾನರಾದುದರಿಂದ ಅವ ರೊಡನೆ ಯುದ್ಧ ಮಾಡಬೇಕೆಂದೆಣಿಸಿ, ಮೂರುಕೋಟೆ ಮೈಚ್ಛಸೈನ್ಯ

  • ಇಲ್ಲಿಯೂ ಕೃಷ್ಣ ಜರಾಸಂಧರ ಯುದ್ಧ ಸನ್ನಾ ಹಗಳನ್ನು ವಿವರಿಸತಕ್ಕ ಕೆಲವು ಅಧಿಕಶಾಶಗಳು ಕೆಲಕೆಲವು ಪ್ರತಿಗಳಲ್ಲಿ ಮಾತ್ರ ಕಾಣುವುವು.