ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೫ ಅಧ್ಯಾ, ೭೫- ] ದಶಮಸ್ಕಂಧವು. ಉತ್ತಮಾಶ್ವಗಳಿಂದ ಕೂಡಿದ ರಥದಮೇಲೆ ತನ್ನ ಪತ್ನಿ ಯರೊಡನೆ ಕುಳಿತು. ಹೋಗುವಾಗ, ಯಜ್ಞಾಂಗಕ್ರಿಯೆಗಳಿಂದ ಕೂಡಿದ ರಾಜಸೂಯಯಾಗ ದಂತೆಯೇ ಕಾಣುತಿದ್ದನು. ಗಂಗಾತೀರಕ್ಕೆ ಬಂದಮೇಲೆ, ಅಲ್ಲಿ ಋತ್ವಿಕ್ಕು ಗಳು ಧರ್ಮರಾಜನಿಂದ, ಪತ್ನಿ ಸಮ್ಯಾಜ ಮತ್ತು ಆವಚ್ಛಥ್ಯಗಳೆಂಬ ಕ ರ್ಮಗಳನ್ನು ಮಾಡಿಸಿದರು. ಆಮೇಲೆ, ಆಚಮನವನ್ನು ಮಾಡಿಸಿ, ಗಂ ಗಾನದಿಯಲ್ಲಿ ಬ್ರೌಪದಿಯೊಡನೆ ಸ್ನಾನಮಾಡಿಸಿದರು. ಈ ಅವಭ್ಯಥಸ್ನಾನ ಕಾಲದಲ್ಲಿ ಆಕಾಶದಲ್ಲಿ ದೇವದುಂದುಭಿಗಳೂ, ಭೂಲೋಕದಲ್ಲಿ ಜಯದುಂ ದುಭಿಗಳೂ ಮೊಳಗಿದುವು. ದೇವತೆಗಳೂ, ಋಷಿಗಳೂ, ಪಿತೃದೇವತೆಗಳೂ ಪುಷ್ಪವೃಷ್ಟಿಯನ್ನು ಕರೆದರು. ಅಲ್ಲಿ ನೆರೆದಿದ್ದ ಜನರೆಲ್ಲ ಪುಷ್ಪಾಂಜಲಿ ಯನ್ನೆ ರಚುತಿದ್ದರು, ಬೇರೆಬೇರೆ ವರ್ಣಾಶ್ರಮದವರೆಲ್ಲರೂ ಅಲ್ಲಿ ಧರ್ಮರಾ ಜನೊಡನೆ ಗಂಗಾಸ್ನಾನವನ್ನು ಮಾಡಿದರು. ಓ! ಪರೀಕ್ಷಿದ್ರಾಜಾ! ಪಂಚ ಮಹಾಪಾತಕವನ್ನು ನಡೆಸಿದವನೂಕೂಡ, ಈ ಅವಧೃಥಕಾಲದಲ್ಲಿ ಸ್ನಾನ ಮಾಡಿದರೆ ಪಾಪವಿಮುಕ್ತನಾಗುವನು. ಸ್ನಾ ನಾನಂತರದಲ್ಲಿ ಧರ್ಮರಾಜ ಮು, ನೂತನವಾದ ಧಾತವಸ್ತ್ರಗಳನ್ನು ಟ್ಟು, ದೇಹಾಲಂಕಾರವನ್ನು ಮಾಡಿಕೊಂಡು, ಋತ್ವಿಕ್ಕುಗಳನ್ನೂ, ಸದಸ್ಯರನ್ನೂ, ಬ್ರಾಹ್ಮಣರನ್ನೂ ವಸ್ತಭೂಷಣಾದಿದಾನಗಳಿಂದ ಸತ್ಕರಿಸಿದನು. ಸಮಸ್ತಭೂತಗ ಭೂ ಭಗವದಾ ತ್ಮಕವೆಂಬ ತತ್ವವನ್ನು ತಿಳಿದ ಆ ಧರ್ಮರಾಜನು, ಅಲ್ಲಿ ನೆರೆರದಿದ್ದ ಬಂಧುಗಳನ್ನೂ, ರಾಜರನ್ನೂ, ಜ್ಞಾತಿಗಳನ್ನೂ, ಮಿತ್ರ ರನ್ನೂ ಯಥೋಚಿತವಾಗಿ ಭಕ್ತಿಯಿಂದ ಪೂಜಿಸಿದನು. ಅಲ್ಲಿ ಧರ್ಮರಾಜ ನಿಂದ ಸತ್ಯ ತರಾದ ಸಮಸ್ತ ಜನರೂ, ರತ್ನ ಕುಂಡಲಗಳಿಂದಲೂ, ಪುಷ್ಪ ಮಾಲಿಕೆಗಳಿಂದಲೂ, ರತ್ನ ಹಾರಗಳಿಂದಲೂ, ಅಂಗಿ, ತಲೆಪಾಗು, ದುಕೂಲ ಮೊದಲಾದ ವಸ್ತ್ರಗಳಿಂದಲೂ ಅಲಂಕೃತರಾಗಿ, ದೇವಪುರುಷರಂತೆ ಪ್ರಕಾ ಶಿಸುತ್ತಿದ್ದರು. ಅಲ್ಲಿಗೆ ಬಂದಿದ್ದ ಸ್ತ್ರೀಯರೂಕೂಡ, ಕುಂಡಲಾದ್ಯಾಭರಣ ಗಳಿಂದಲೂ, ಸುವರ್ಣದ ಒಡ್ಯಾಣಗಳಿಂದಲೂ ಶೋಭಿತರಾಗಿ, ತಿದ್ದಿದ ಮುಂಗುರುಳುಗಳಿಂದ ಸೊಬಗೇರಿದ ಮುಖಸ್ ಇಂದಠ್ಯದಿಂದ ಶೋಭಿಸು ತಿದ್ದರು. ಆಮೇಲೆ ಋತ್ವಿಕ್ಕುಗಳೂ, ಬ್ರಹ್ಮವಾದಿಗಳೂ, ಸದಸ್ಯರೂ,