ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೩ ಶ್ರೀಮದಾ ಗವತವು [ಅಧ್ಯಾ. ೭೫. ಬ್ರಾಹ್ಮಣರೂ, ಕ್ಷತ್ರಿಯ, ವೈಶ್ಯ, ಶೂದ್ರಾದಿವರ್ಣದವರೂ, ಮತ್ತು ಆ ಉತ್ಸವವನ್ನು ನೋಡುವುದಕ್ಕಾಗಿ ಬಂದ ದೇವತೆಗಳೂ, ಋಷಿಗಳೂ, ಪಿತೃದೇವತೆಗಳೂ, ತಮ್ಮ ತಮ್ಮ ಪರಿವಾರಗಳೊಡಗೂಡಿದ ಲೋಕಪಾಲ ಕರೂ, ಇತರ ಸಮಸ್ತಭೂತಗಳೂ, ಆ ಧರ್ಮರಾಜನಿಂದ ಸತ್ತರಾಗಿ, ಅವನ ಅನುಮತಿಯನ್ನು ಪಡೆದು, ತಮ್ಮ ತಮ್ಮ ಸ್ಥಾನಗಳಿಗೆ ಹಿಂತಿರುಗಿದರು. ಇವರೆಲ್ಲರೂ ಹಿಂತಿರುಗಿ ಬರುವಾಗ, ಹರಿಭಕ್ಟೋತ್ತಮನಾದ ಆ ಧರ್ಮ ರಾಜನ ರಾಜಸೂಯವೈಭವವನ್ನು ಎಷ್ಟೆಷ್ಟು ಕೊಂಡಾಡಿದರೂ, ಅಮೃತ ಪಾನದಿಂದ ಹೇಗೋಹಾಗೆ ತೃಪ್ತಿಯಿಲ್ಲದೆ ಬಾರಿಬಾರಿಗೂ ಪ್ರಶಂಸಿಸುತಿದ್ದ ರು. ಆಮೇಲೆ ಧರ್ಮರಾಜನು ತಾನು ಉತ್ಸವಕ್ಕಾಗಿ ಕರೆಸಿದ್ದ ಇಷ್ಟಮಿ ತ್ರರನ್ನೂ, ಬಂಧುಗಳನ್ನೂ, ಮುಖ್ಯವಾಗಿ ಶ್ರೀಕೃಷ್ಣನನ್ನೂ ಅಗಲಿರ ಲಾರದೆ, ಇನ್ನೂ ಕೆಲವು ದಿನಗಳವರೆಗೆ ಅಲ್ಲಿಯೇ ಇರಬೇಕೆಂದು ಸಿರ್ಬಂ ಧಿಸಿ ನಿಲ್ಲಿಸಿಕೊಂಡುದರಿಂದ, ಕೃಷ್ಣನು ಧರ್ಮರಾಜನ ಮಾತನ್ನು ಮೀರ ಲಾರದೆ, ಸಾಂಬವೇ ಮೊದಲಾದ ಯದುವೀರರೆಲ್ಲರನ್ನೂ ಕಳುಹಿಸಿ, ತಾನು ಮಾತ್ರ ಆ ಧರ್ಮರಾಜನೊಡನೆಯೇ ಇರಬೇಕಾಯಿತು.ಓ ಪರೀಕ್ಷಿದ್ರಾಜಾ! ಹೀಗೆ ಧರ್ಮರಾಜನು ಶ್ರೀ ಕೃಷ್ಣನ ಪರಮಾನುಗ್ರಹಬಲದಿಂದ, ಬೇರೊ ಬ್ಬರಿಗೆ ದುಸ್ತರವಾದ ತನ್ನ ಮನೋರಥಸಮುದ್ರವನ್ನು ದಾಟಿ ಸಂ ತೋಷದಿಂದಿರುತಿದ್ದಾಗ ಆ ಉತ್ಸವಕ್ಕಾಗಿ ಬಂದಿದ್ದ ದುಯ್ಯೋಧ ನಿಗೆ, ಧರರಾಜನ ಐಶ್ವದ್ಯವನ್ನೂ , ಅವನ ಯಾಗ ವೈಭವವನ್ನೂ ನೋಡಿ ಮನಸ್ಸಿನಲ್ಲಿ ಅಸೂಯೆ ಹೆಚ್ಚು ತಿತ್ತು. ಈನಡುವೆ ಒಮ್ಮೆ ದುರೊ ಧನನು ಧರರಾಜನ ಅಂತಃಪುರದ ಕಡೆಗಾಗಿ ಹೋಗುತಿದ್ದನು. ಓ ರಾಜೇಂದ್ರಾ ! ಅದು ಸಾಕ್ಷಾದ್ವಿಶ್ವಕರ್ಮನಿಂದ ನಿರ್ಮಿತವಾದುದು. ಅಲ್ಲಿ ಭೂಲೋಕದ ಅನೇಕರಾಜಾಧಿರಾಜರಿಗೂ, ಪಾತಾಳಲೋಕದ ದಾನವೇ೦ದ್ರರಿಗೂ, ಸ್ವರ್ಗಲೋಕದ ದೇವಾಧಿಪತಿಗಳಿಗೂ, ಅನುಭವ ಯೋಗ್ಯಗಳಾದ ನಾನಾವಿಧಭೋಗಸಾಮಗ್ರಿಗಳು ತುಂಬಿರುವುವು, ಅಂ ತಹ ದಿವ್ಯಾಂತಃಪುರದಲ್ಲಿ ದಾಪಡೀದೇವಿಯು, ಪಶುಶೂಷೆಗಾಗಿ ಬೇಕು ಬೇಕಾದ ಭೋಗಸಾಮಗ್ರಿಗಳನ್ನೊದಗಿಸುತಿದ್ದಳು. ಈ ಸ್ಥಿತಿಯಲ್ಲಿ