ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೭೫.] ದಶಮಸ್ಕಂಧವು. ೨೨೭೭ ಆ ದಿಾಪದಿಯನ್ನು ಕಂಡೊಡನೆ, ಅವಳಲ್ಲಿ ದುಧನನ ಮನಸ್ಸು ಮೊಹಾಕುಲಿತವಾಯಿತು. ಇದಕ್ಕೆ ಮೊದಲೇ ಆಧರರಾಜನ ಯಾ ಗದ ವೈಭವವನ್ನೂ, ಅವನ ಭಾಗ್ಯಸಮೃದ್ಧಿಯನ್ನೂ ನೋಡಿ ಅಸೂಯೆ ಯಿಂದ ಕುದಿಯುತ್ತಿದ್ದದುರನನಿಗೆ, ಆ ಅಂತಃಪುರದ ಸೌಭಾಗ್ಯವನ್ನು ಕಂಡಮೇಲೆ, ಅವನ ಸಂಕಟವನ್ನು ಕೇಳಬೇಕೆ ? ಆ ಅಂತಃಪುರದಲ್ಲಿ ಕೃಷ್ಣನ ಪತ್ನಿ ಯರಾದ ಸಾವಿರಾರುಮಂದಿ ರಾಜಕುಮಾರಿಯರು ದೌಪದಿ ಯನ್ನು ಸುತ್ತಿ ಮುತ್ತಿ ಓಲೈಸುತ್ತಿರುವರು. ನಿತಂಬಭಾರದಿಂದ ಜಗ್ಗುವ ನಡೆಯುಳ್ಳವರಾಗಿ, ಕಾಲಂದುಗೆಗಳ ಫುಲ್ವಲಧ್ವನಿಯೊಡನೆ ಅತ್ತಿತ್ತ ಸಂಚರಿಸುತಿದ್ದ ಆ ಸ್ತ್ರೀಯರ ಸೊಬಗನ್ನು ಕೇಳಬೇಕೆ? ಸಣ್ಣ ನಡು ! ಸ್ವನ ಕುಂಕುಮದಿಂದ ಲೇಪಿತವಾಗಿ ಎದೆಯಲ್ಲಿ ತೂಗಾಡುತ್ತಿರುವ ಮುತ್ತಿನ ಹಾರಗಳು ! ಎಣೆಯಿಲ್ಲದ ಸೌಂದಠ್ಯವುಳ್ಳ ಮುಖದ ಸೊಗಸು ! ಕಿವಿಯಲ್ಲಿ ತೂಗಾಡುತ್ತಿರುವ ಕುಂಡಲಗಳು ! ಮುಖಕ್ಕೆ ರೇಖೆಕಟ್ಟಿದಂತೆ ತಿದ್ದಿದ ಮುಂಗುರುಳು! ಇಂತಹ ದಿವ್ಯಸೌಂದರದಿಂದ ಶೋಭಿತರಾದ ಆ ಸಿಯರನಡುವೆ ದಾಪದಿಯಿರುವುದನ್ನು ಕಂಡು, ದುಕ್ಕೋಧನನು ಸಹಿಸಲಾರದ ಸಂಕಟದಿಂದ ಕುದಿಯುತ್ತಿದ್ದನು. ಇದಲ್ಲದೆ ಆತ್ಯ ಲಾಗಿ ಧರ್ಮರಾಜನೂಕೂಡ ಆಗಾಗ ಮಯನಿರ್ಮಿತವಾದ ರಾಜಸಭೆಯಲ್ಲಿ, ತನ್ನ ತಮ್ಮಂದಿರೊಡನೆಯೂ, ಇಷ್ಟಬಂಧುಗಳೊಡನೆಯೂ, ತನಗೆ ನೇತ್ರ ಪ್ರಾಯನಾದ ಶ್ರೀ ಕೃಷ್ಣನೊಡನೆಯೂ ಕೂಡಿ ಸುವರ್ಣಪೀಠದಮೇಲೆ ಕುಳಿತು,ಸುಖಸಲ್ಲಾಪಗಳನ್ನು ಮಾಡುತ್ತ, ಸ್ವರ್ಗಸಿಂಹಾಸನವನ್ನೇರಿದ ದೇ। ವೇಂದ್ರನಂತೆ ಕಾಣುತ್ತಿರುವನು. ಸಾಕ್ಷಾತ್ಕೃಹ್ಮದೇವನಂತೆ ತೇಜ ಸ್ಸಿನಿಂದ ಬೆಳಗುತ್ತಿರುವನು. ವಂದಿಮಾಗಧರು ಸುತ್ತಲೂ ನಿಂತು ಅವನ ಗುಣಗಳನ್ನು ಕೊಂಡಾಡುತ್ತಿರುವರು. ಇಂತಹ ಸ್ಥಿತಿಯಲ್ಲಿ, ಒಮ್ಮೆ ದುರೊಧನನು ತನ್ನ ತಮ್ಮಂದಿರೊಡನೆ ಆ ಧರ್ಮರಾಜಾದಿಗಳು ಕುಳಿ ತಿದ್ದ ಸಭಾಸ್ಥಾನವನ್ನೂ ಪ್ರವೇಶಿಸಿಬಿಟ್ಟನು. ಈ ದುದ್ಯೋಧನನಾದರೋ ಲೋಕದಲ್ಲಿ ತನಗೆ ಸಮಾನರಿಲ್ಲವೆಂಬ ಗರ್ವದಿಂದ ಬೀಗುತ್ತಿರುವನು. ಯಾ ವಾಗಲೂ ಧರ್ಮರಾಜನಲ್ಲಿ ತನಗಿರುವ ಅಸೂಯೆಯಿಂದ ಕುದಿಯುತ್ತಿರುವ