ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೦' ಶ್ರೀಮದ್ಭಾಗವತವು [ಅಧ್ಯಾ, ೭೬, ದೃಢನಿಯಮವನ್ನು ಹಿಡಿದು, ಒಂದುವರುಷದವರೆಗೆ ರುದ್ರನನ್ನು ಧ್ಯಾನ ಮಾಡಿದನು.ಆ ವರ್ಷಾಂತ್ಯದಲ್ಲಿ ರುದ್ರನು ಅವನ ತಪಸ್ಸಿಗೆ ಮೆಚ್ಚಿ ಅವನಿಗೆ ಪ್ರತ್ಯಕ್ಷನಾದನು, ಆದರೆ ಆ ಸಾಲ್ವನು ಭಗವಂತನಲ್ಲಿ ದ್ವೇಷಬುದ್ಧಿಯಿಂದ ಲೇ ಈ ತಪಸ್ಸನ್ನು ಹಿಡಿದಿದ್ದುದರಿಂದ, ಪೂಜ್ಯನಾದ ಶಂಕರನಿಗೆ ಪೂರ್ಣ ವಾದ ಸಂತೋಷವಿಲ್ಲದಿದ್ದರೂ, ತನ್ನಲ್ಲಿ ಶರಣಾಗತನಾದ ಆಸಾಲ್ವನ ಕೋ ರಿಕೆಯನ್ನು ತೀರಿಸಬೇಕಾದುದು ಧರ್ಮವಾದುದರಿಂದ,ಸ್ವಲ್ಪವಾಗಿ ಸಂತೋ ಷವನ್ನು ತೋರಿಸುತ್ತ, ಅವನಿಗೆ ಬೇಕಾದ ವರವನ್ನು ಕೇಳುವಂತೆ ಸಾಲ್ಸ, ನನ್ನು ಪ್ರೇರಿಸಿದನು. ಆಗ ಸಾಲ್ವನು ರುದ್ರನನ್ನು ಕುರಿತು ತನಗೆ ಕಾಮಗಮನ ವುಳ್ಳ ಒಂದಾನೊಂದು ವಿಮಾನವನ್ನು ನಿರ್ಮಿಸಿಕೊಡಬೇಕೆಂದೂ, ಅದು ಯಾದವರಿಗೆ ಭಯವನ್ನು ಹುಟ್ಟಿಸತಕ್ಕುದಾಗಿ, ದೇವ, ದಾನವ, ಮನುಷ್ಯ, ಗಂಧ, ಪನ್ನಗ, ರಾಕ್ಷಸರಲ್ಲಿ ಯಾರಿಗೂ ಅಭೇದ್ಯವಾಗಿರಬೇ ಕೆಂದೂ ಕೇಳಿಕೊಂಡನು. ಅದರಂತೆಯೇ ಶಿವನು, ಪಟ್ಟಣದಂತೆ ಅತಿವಿಶಾಲ ವಾದ, ಮತ್ತು ಅಯೋಮಯವಾದ (ಉಕ್ಕಿನಲ್ಲಿ ಒಂದಾನೊಂದು ವಿಮಾನ ವನ್ನು ನಿರ್ಮಿಸಿ ಕೊಡುವಂತೆ ದಾನವಶಿಲ್ಪಿಯಾದ ಮಯನಿಗೆ ಆಜ್ಞಾಪಿಸಲು, ಆದರಂತೆ ಮಯನು ಸಾಲ್ವನಿಗೆ ಸೌಭವೆಂಬ ಒಂದಾನೊಂದು ಪುರವನ್ನು ನಿರ್ಮಿಸಿಕೊಟ್ಟನು.ಅದು ಕೇವಲ ಅಂಧಕಾರಮಯವಾಗಿ,ಯಾರ ಕಣ್ಣಿಗೂ ಗೋಚರಿಸದೆ, ಆಕಾಶದಲ್ಲಿ ಇಷ್ಟಬಂದ ಕಡೆಗೆ ಸಂಚರಿಸತಕ್ಕ ಶಕ್ತಿಯುಳ್ಳು ದಾಗಿತ್ತು. ನಾನು ಆ ವಿಮಾನವನ್ನೇರಿ ಯಾದವರಮೇಲೆ ಹಗೆತೀರಿಸಿ ಕೊಳ್ಳಬೇಕೆಂಬ ಉದ್ದೇಶದಿಂದ ದ್ವಾರಕಾಪುರಿಯಕಡೆಗೆ ಬಂದನು. ಆ ಪಟ್ಟ ಣದಿಂದ ಒಂದು ಒಳ್ಳೆಯಾದರೂ ತಪ್ಪಿಸಿಕೊಂಡು ಹೊರಕ್ಕೆ ಹೋಗದಂತೆ ಆದರಸುತ್ತಲೂ ತನ್ನ ದೊಡ್ಡ ಸೈನ್ಯದಿಂದ ಮುತ್ತಿಗೆಹಾಕಿಸಿ,ತಾನು ವಿಮಾ ನದಿಂದ ಆಕಾಶಮಾರ್ಗವಾಗಿ ಬಂದು, ಅಲ್ಲಿನ ಗೋಪುರಪ್ರಾಕಾರಗಳನ್ನೂ, ಹೆಬ್ಬಾಗಿಲುಗಳನ್ನೂ, ಅಟ್ಟಲೆಗಳನ್ನೂ, ಅಂಗಳಗಳನ್ನೂ, ಕ್ರೀಡಾಸ್ಪ್ಯಾನಗಳ ನ್ನೂ ಮುರಿದು ಧ್ವಂಸಮಾಡುತ್ತ ಬಂದನು ! ಆ ಸ ಭವಿಮಾನದಿಂದ ದ್ವಾರಕಾಪುರಿಯಮೇಲೆ ಕಲ್ಲುಗುಂಡುಗಳೂ, ಮರಗಳೂ,ಸಿಡಿಲುಗಳೂ, ನಾ ನಾವಿಧಶಸ್ತಗಳೂ, ಭಯಂಕರಗಳಾದ ವಿಷಸರ್ಪಗಳೂ ಎಡೆಬಿಡದೆ ಸುರಿ